ಶುಕ್ರವಾರ, ಜೂನ್ 25, 2021

ಇದು ಯಾರ ಇಚ್ಛೆ (ಕವಿತೆ) - ಜಿ ಟಿ ಆರ್ ದುರ್ಗ ಬಂಗಾರಪೇಟೆ.

ಇದು ಯಾರ ಇಚ್ಛೆ

ಮರೆತೆಯ ಒಡಲ ಕರುಳಿನ ಕುಡಿಯ
ಚೆದುರದೆ ಇರಲಿ ಕಡಲಿನ ತೊರೆಯ
ಸಾವಿರ ವರುಷ ಅಮ್ಮನ ಪ್ರೀತಿಯ
ಮರೆಯಲಾಗದು ಕರುಳಿನ ಬಳ್ಳಿಯ

ಒಂದೇ ತಾಯಿಯ ಜನ್ಮದಿ ಜನಿಸಿ
ಬೆಳೆಯುತ ಎಲ್ಲರು ಒಂದಾಗಿ ಯೋಚಿಸಿ
ಮಾತಿನ ನೀತಿಯಲ್ಲಿ ಬದುಕುವರಾರು
ಸತ್ಯದ ಹಾದಿಯ ನಿತ್ಯವು ಕಾಯುವರಾರು

ಅರಗಿಣಿಯಂತೆ ಸಾಕಿದ ಅವ್ವನ ಗೋಳು
ಗಿಡಗನಂತೆ ನೋಡುವ ಮಕ್ಕಳು ಕೀಳು
ಇನ್ನೂ ಬೇಕಾ ನೋವಿನ ಸಂತೆ
ಬದುಕಿನ ಬಾಳಲಿ ನಿತ್ಯವು ಚಿಂತೆ

ಹುಟ್ಟಿ ಬೆಳೆದವರೆಲ್ಲ ಒಟ್ಟಿಗೆ ಏಕೆ ಇರಲಾರ
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲರು ದೂರದೂರ
ಇದು ಯಾರು ಬರೆದ ಹಣೆಬರಹ
ಈ ಭೂಮಿಯಲ್ಲಿ ಮನುಜ ಇದೆ ತರಹ

ಹನಿ ಹನಿಗಳಂತೆ ಒಗ್ಗೂಡಬೇಕು
ತೆನೆ ತೆನೆಯಂತೆ ರಾಶಿಯಾಗಬೇಕು
ಒಂದೇ ಮರದ ಹಣ್ಣುಗಳಂತೆ
ರುಚಿ ಇರಬೇಕು ಸಂಬಂಧದ ಜೊತೆ

ದಿನವು ದುಃಖದಿ ಬದುಕುವರೆಷ್ಟು
ದಿನವು ಸುಖದಲ್ಲಿ ನಲಿಯುವರೆಷ್ಟು
ಈ ನಿಯಮ ಯಾರಿಂದ ತಪ್ಪಿಸಲಾಗದು
ಎಲ್ಲವು ಅವನಿಚ್ಚೆಯಂತೆ ಸಾಗುವುದು
- ಜಿ ಟಿ ಆರ್ ದುರ್ಗ
ಬಂಗಾರಪೇಟೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450  ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...