*ನನ್ನ ಮತ್ತು ರಾಜುಕವಿ ಅಣ್ಣನ ಸಹೋದರತ್ವ...*
ಬದುಕಿನಲ್ಲಿ ಅಪರಿಚಿತರು ಪರಿಚಯವಾದಾಗ ನಮ್ಮ ಜೀವನದಲ್ಲಿ ಕೆಲವೊಮ್ಮೆ ಯಾವುದಾದರೊಂದು ಕ್ಷೇತ್ರದಲ್ಲಿ ಲೋಕದಲ್ಲಿ ಏನನ್ನಾದರೂ ಸಾಧಿಸಲು ಸ್ಪೂರ್ತಿಯಾಗಿ ಬಿಡುತ್ತಾರೆ. ಹಾಗೆ ಅದೇ ತರಹ ನಾನು ಸಾಹಿತ್ಯಲೋಕದಲ್ಲಿ ಪಾದಾರ್ಪಣೆ ಮಾಡಲು ಸ್ಪೂರ್ತಿಯ ವ್ಯಕ್ತಿಗಳು ಕೂಡ ಇದ್ದಾರೆ. ಅವರೆಂದರೆ ಸಹೋದರ ಕಾರ್ತಿಕ ಆಚಾರ್ಯ ಸಾಹಿತ್ಯಲೋಕದಲ್ಲಿ ಮುಂದುವರೆಯಲು ದಾರಿ ತೋರಿಸಿದರೆ, ತೋರಿದ ದಾರಿಯಲ್ಲಿ ಗುರಿ ತಲುಪುವುದನ್ನು ತಿಳಿಸಿಕೊಟ್ಟವರೇ ಮುದ್ಗ ಮನಸಿನ ಹಾಗು ನುಡಿದಂತೆ ನಡೆಯುವ *ಸಹೋದರ ರಾಜು ಕವಿ ಸುಲೇನಹಳ್ಳಿ*.
ಹೀಗೆ ಒಮ್ಮೆ ಕವಿಗೋಷ್ಠಿಗೆಂದು ಚಿತ್ರದುರ್ಗದಲ್ಲಿ ನಡೆದ "ಕನ್ನಡ ಸಾಹಿತ್ಯ ಸಾಗರ ಸಂಸ್ಥೆ" ಆಯೋಜಿಸಿರುವ ಕವಿಗೋಷ್ಠಿಗೆ ಹೋಗಿದ್ದೆ, ಹೀಗೆ ಸುಮ್ಮನೆ ಕುಳಿತಿರುವಾಗ ಉಳಿದೆಲ್ಲ ಸಹೋದರರು ರಾಜಣ್ಣನ ಮಾತನಾಡಿಸುತ್ತಿದ್ದರು ನನಗೂ ಕೂಡ ಅವರನ್ನು ಪರಿಚಯ ಮಾಡಿಕೊಂಡು ಮಾತನಾಡಿಸುವ ಹಂಬಲ ನನ್ನ ಮನದಲ್ಲಿ ಹುಟ್ಟಿಕೊಂಡಿತು. ಚಿತ್ರದುರ್ಗದ ರೋಟರಿ ಬಾಲಭವನದಲ್ಲಿ ಪರಿಚಿತರಾದ ರಾಜು ಅಣ್ಣ ಮತ್ತು ನನ್ನ ಸಂಬಂಧವು ಅಲ್ಲಿಂದ ಇಲ್ಲಿಯವರೆಗೂ ಕೂಡ ನಮ್ಮಿಬ್ಬರ ಸುಮಧುರ ಸಹೋದರತ್ವದ ಭಾಂದವ್ಯಕ್ಕೆ ಅಂದೆ ನಾಂದಿ ಅಡಿತು. ಪ್ರಾರಂಭದಲ್ಲಿ ರಾಜು ಅಣ್ಣನನ್ನು ಮತಾನಾಡಿಸುವಾಗ ' ಸರ್' ಎಂಬ ಪದವನ್ನು ಉಪಯೋಗಿಸಿ ಮಾತನಾಡಿಸಿದೆ. ಅಣ್ಣನೂ ಕೂಡ ನಲ್ಮೆಯ ಭಾವದಿಂದ ಪ್ರೀತಿಯಿಂದ ಮಾತನಾಡಿಸಿದರು.ಹಾಗೆ ಮಾತನಾಡುತ್ತಾ ಮಾತನಾಡುತ್ತಾ ನಮ್ಮನ್ನು ಸಾಹಿತ್ಯ ಲೋಕದಲ್ಲಿ ನಿಮ್ಮೊಂದಿಗೆ ಕರೆದುಕೊಂಡು ಹೋಗಿ ಸರ್ ಎಂದು ಕೇಳಿಕೊಂಡೆ ಹಾಗ ಸಹೋದರ ರಾಜುಕವಿ ಸಾಹಿತ್ಯದಲ್ಲಿ ಆಸಕ್ತಿ ಹೊಂದುವವರು ಈ ಕಾಲದಲ್ಲಿ ತುಂಬಾ ವಿರಳ ಅದರಲ್ಲಿ ನೀನೇ ಮುಂದಾಗಿ ಬಂದು ಸಾಹಿತ್ಯವನ್ನ ಪ್ರೀತಿಸುತ್ತೇನೆ, ಅದರಲ್ಲಿ ಒಲವನ್ನು ತೋರುತ್ತೆನೇ ಎಂದು ಕೇಳಿಕೊಂಡರೆ ಇಲ್ಲ ಅನ್ನಲಾಗುವುದಿಲ್ಲ ನನ್ನಾನಿಂದ ಎಂತಾ ಸಹಾಯವಾದರು ಮಾಡುತ್ತೇನೆ ಎಂದು ಭರವಸೆಯ ಬೀಜವನ್ನು ನನ್ನಲ್ಲಿ ಬಿತ್ತಿದರು. "ನಾನು ಯಾವುದೇ ಕೆಲಸವನ್ನು ಹೇಳುವುದಿಲ್ಲ ಮಾಡಿ ತೋರಿಸುತ್ತೇನೆ" ಎಂದು ಆತ್ಮವಿಶ್ವಾಸ ತುಂಬಿದರು.
ಅಂದಿನಿಂದ ಆರಂಭವಾದ ನಮಿಬ್ಬರ ಸಹೋದರತ್ವದ
ಸಂಬಂಧ ಇಂದಿಗೂ ಕೂಡ ಹಾಲು - ಜೇನಿನಂತೆ ಜೊತೆ ಜೊತೆಯಾಗಿಯೇ ಮುಂದುವರೆಯುತ್ತಾ ಬಂದಿದೆ. ಪ್ರಾರಂಭದಲ್ಲಿ ದಿನಕಳೆದಂತೆ ಕಳೆದಂತೆ ರಾಜು ಅಣ್ಣನಾ ಬಗ್ಗೆ ತಿಳಿಯಬೇಕೆನ್ನುವ ಅಭಿಲಾಷೆ ಮನದಲ್ಲಿ ಜಿಗಿಯುತಿತ್ತು.ನಾನು ನನ್ನ ದ್ವನಿಯನ್ನ ಬಳಸಿ ರಾಜು ಅಣ್ಣನ ಸಾಹಿತ್ಯ ಲೋಕದ ಪಾದಾರ್ಪಣೆ ಕುರಿತಾದ ಒಂದು ಕಿರು ವಿಡಿಯೋ ಚಿತ್ರೀಕರಣವನ್ನು ಬೆಳಕಿಗೆ ತಂದೆವು. ಇದರಿಂದ ನನ್ನ ಮತ್ತು ರಾಜು ಅಣ್ಣನ ಸಹೋದರತ್ವ ಕೊಂಡಿಗೆ ಮತ್ತೋಷ್ಟು ಗಟ್ಟಿಯಾಗಲು ವೆಲ್ಡಿಂಗ್ ಹಾಕಿದಂತಾಗಿದೆ .ನಂತರ ಕರುನಾಡು ಹಣತೆ ಕವಿ ಬಳಗದ ಅಧ್ಯಕ್ಷರಾಗಿರುವ ಸಹೋದರ ರಾಜು ಅಣ್ಣ ಬಳಗಕ್ಕೆ ನನ್ನನ್ನ ಸೇರಿಸಿ, ಆ ಬಳಗದಲ್ಲಿ ಮತ್ತೋಷ್ಟು ಬೆಳೆಯಲು ಸಹಕಾರಿಯಾಯಿತು.ಬಳಗದ ವತಿಯಿಂದ ಆಯೋಜಿಲಾಗಿದ್ದ ಪ್ರತಿ ಕವಿಗೋಷ್ಠಿಯಲ್ಲಿ ಭಾಗವಾಯಿಸುತಿದ್ದೆ. ಇದರ ಕುರಿತಾಗಿ ಏನಾದರೂ ತಿಳಿಯದಿದ್ದರೆ ಅಣ್ಣನನ್ನು ಕೇಳಿದರೆ ಸಲಹೆ, ಸೂಚನೆಗಳನ್ನ ಬೇಸರ ಮಾಡಿಕೊಳ್ಳದೇ ಹೇಳಿಕೊಡುತ್ತಿದ್ದರು.ಈ ಎಲ್ಲಾ ಸಹಾಯದ ಸಹೋದರತ್ವ ಭವಿಷ್ಯದಲ್ಲಿ ತುಂಬಾ ಗಟ್ಟಿಯಾಗಿ ಉಳಿಯಲು ಕಾರಣವಾಯಿತು.
ನಂತರ ಬದುಕಿನಲ್ಲಿ ಕೆಲವೊಂದು ವ್ಯಕ್ತಿಗಳು ತುಂಬಾ ಆತ್ಮೀಯರಾಗಿದ್ದರು ಕೂಡ ಬೆಳೆಯುತ್ತೇನೆ ಏನಾದರೂ ಸಹಾಯ ಮಾಡು ಎಂದು ಕೇಳಿಕೊಂಡಾಗ ಆ ಸಂದರ್ಭ ಕಷ್ಟ ಒಪ್ಪಿಕೊಂಡು ಕೈಬಿಟ್ಟು ಬಿಡುತ್ತಾರೆ ಆದರೆ ನನಗೆ ರಾಜು ಅಣ್ಣ ಸಿಕ್ಕಿದ್ದು ಅಪರೂಪದ ಮಾಣಿಕ್ಯ ಸಿಕ್ಕಂತಾಯಿತು. ನಂತರ ನುಡಿದ ಮಾತುಗಳಿಗೆ ಮೌಲ್ಯಯುತವಾದ ಬೆಲೆಯನ್ನು ನೀಡಿ ನನಗೆ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟರು ಅದುವೇ "ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ (ರಿ) ಚಿತ್ರದುರ್ಗದ ತಾ.ರಾ.ಸು. ರಂಗಮಂದಿರದಲ್ಲಿ ನಡೆದ 'ದ್ವಿತೀಯ ಕರನಾಡು ವಾರ್ಷಿಕ ಸಾಹಿತ್ಯೋತ್ಸವ - ೨೦೨೧ ರ ಪುಸ್ತಕ ಲೋಕಾರ್ಪಣೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನನ್ನಲ್ಲಿರುವ ಅತಿ ಚಿಕ್ಕ ಸಂಗೀತ ಕ್ಷೇತ್ರದ (ಧ್ವನಿ ವಿಭಾಗ) ಸಾಧನೆಯ ಗುರುತಿಸಿ "ಕರುನಾಡ ವಿಶೇಷ ಸನ್ಮಾನ ಪುರಸ್ಕೃತರು" ಎಂಬ ಗೌರವ ಸಮರ್ಪಣೆಯನ್ನು ಅಂತಹ ದೊಡ್ಡ ವೇದಿಕೆಯಲ್ಲಿ ಗಣ್ಯರೊಂದಿಗೆ ನನ್ನನ್ನು ಸನ್ಮಾನಿಸಲಾಯಿತು. ಆ ಗೌರವ ಸಮರ್ಪಣೆ ನೀಡಲೂ ಆಯ್ಕೆ ಮಾಡಿದ ರಾಜಣ್ಣನಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ.
ನಂತರ ಹೀಗೆ ಮುಂದುವರೆಯುತ್ತ ಬಂದ ಸಹೋದರ ರಾಜು ಕವಿ ಮತ್ತು ನನ್ನ ಅವಿನಾಭಾವ ಸಂಬಂಧ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಟ್ಟರು ಅದುವೇ "ವಿಜಯನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿ"ಪ್ರಮಾಣಪತ್ರವನ್ನು ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಗೌರವಕ್ಕೆ ಆಯ್ಕೆ ಮಾಡಿದ ರಾಜಣ್ಣನಿಗೆ ತುಂಬು ಹೃದಯದ ಧನ್ಯವಾದಗಳು. ತದನಂತರ ನಾನು ಬರೆದ ಯಾವುದಾದರೂ ಕವಿತೆಯಾಗಲಿ, ಕಾದಂಬರಿಯಾಗಲಿ, ವಿಮರ್ಶೆಯಾಗಲಿ, ನನಗೇ ತಿಳಿಯದ ಹಾಗೆ ಮೊದಲೇ ಪೇಪರ್ನಲ್ಲಿ ಮುದ್ರಿಸಿ ಸಹೋದರ ಬೆಳೆಯಲಿ,ಬೆಳೆದು ಬೆಳಕಿಗೆ ಬರಲೆಂಬ ಮನೋಭಿಲಾಷೆಯನ್ನು ಮನದಲ್ಲಿ ತುಂಬಿ ಗೊತ್ತು ಗೊತ್ತಿಲ್ಲದ ಸಹಾಯಕ್ಕೆ ಕೈ ಹಾಕುವವರೇ ಸಹೋದರ ರಾಜು ಕವಿ ಸೋಲೇನಹಳ್ಳಿ.
ಹೀಗೆ ಅನೇಕ ಹಲವಾರು ವಿಚಾರಗಳು ನನ್ನ ಮತ್ತು ರಾಜಣ್ಣನ ಸಹೋದರತ್ವಕ್ಕೆ ನಾಂದಿ ಹಾಡಿದೆ, ನಮ್ಮಿಬ್ಬರ ಅನುಬಂಧದ ಸಹೋದರತ್ವವನ್ನು ಒಂದೇ ಮಾತಿನಲ್ಲಿ ತಿಳಿಸುವುದಾದರೆ ಮನೆಯ ಬಾಗಿಲಿನ ಕದಕ್ಕೆ ಹಾಕುವ ಬೀಗ ನಾನಾದರೆ,,,,,,, ಸಹಾಯ ,ತಿಳುವಳಿಕೆ, ಅವಕಾಶಗಳು ,ನೀಡುವಂತಹ ಕೀಲಿಕೈ ರಾಜು ಅಣ್ಣ ಅವರಾಗಿದ್ದಾರೆ.
*ಉದಯ ಬಡಿಗೇರ್*
*ಮೈದೂರು.*
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ