ಶುಕ್ರವಾರ, ಜೂನ್ 25, 2021

ಸುದ್ಧಿ ಪ್ರಕಟಣೆ : ಇಂದು ಮೂರು ಜಿಲ್ಲೆಗಳಲ್ಲಿ ಉದಯಿಸಿದ ಕರುನಾಡಿನ ಹೆಮ್ಮೆಯ ಸಂಘಟನೆ ಕರುನಾಡು ಸಾಹಿತ್ಯ ಪರಿಷತ್ತು (ರಿ).

ದಿನಾಂಕ ೨೩/೦೬/೨೦೨೧ :  ಕರ್ನಾಟಕದ ಹೆಮ್ಮೆ ಕರುನಾಡು ಸಾಹಿತ್ಯ ಪರಿಷತ್ತು ಹಲವು ವರ್ಷಗಳಿಂದ ಕನ್ನಡ ಸಾಹಿತ್ಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸಂಘಟನೆ ಆಗಿದ್ದು ಹಲವಾರು ಯುವ ಕವಿ ಲೇಖಕ ಲೇಖಕಿಯರ ಪ್ರತಿಭೆಗೆ ವೇದಿಕೆ ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.

ಕರುನಾಡು ಸಾಹಿತ್ಯ ಪರಿಷತ್ತು  ಕಲ್ಬುರ್ಗಿ, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಇಂದು ಹೊಸದಾಗಿ ಉದಯಿಸಿದ್ದು,  

ಕಲ್ಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ 
ಶ್ರೀ ಶಿವಾನಂದ ಕಲಬುರಗಿ ಇವರನ್ನು.



ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ 
ಶ್ರೀ ಬುಸಣ್ಣ ಯಾದವ್ ಇವರನ್ನು.



ಹಾಗೂ 
ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ 
ಶ್ರೀ ನಟರಾಜ್ ದೊಡ್ಡಮನಿ ಇವರನ್ನು.

ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಫಯಾಜ್ ಅಹಮದ್ ಖಾನ್ ರವರು ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ ಎನ್ ಅಕ್ರಂಪಾಷ ಹಾಗೂ ಇತರೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು  ಒಪ್ಪಿ ಇವರನ್ನು ಜಿಲ್ಲಾ ಅಧ್ಯಕ್ಷರುಗಳಾಗಿ ಆಯ್ಕೆ ಮಾಡಿರುತ್ತಾರೆ.

ಎಲ್ಲಾ ಹೊಸ ಅದ್ಯಕ್ಷರುಗಳಿಗೆ ಕರುನಾಡು ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಪರವಾಗಿ ಹಾಗೂ ವಿಚಾರ ಮಂಟಪ ಪತ್ರಿಕಾ ಬಳಗದ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ  ಶುಭಹಾರೈಕೆಗಳು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...