ಶುಕ್ರವಾರ, ಜೂನ್ 18, 2021

ಆಸೆಯ ಕಲಹ (ಲೇಖನ)- ರಂಜಿತ ಮಾ ಶೇತಸನದಿ

ಆಸೆಯ ಕಲಹ 

ಬದುಕು ಒಂದು ತಿರುಗಾಟದ ತಿರುಗುಣಿಯಂತೇ. ಮಾನವನು ತನ್ನ  ಬದುಕಿನಲ್ಲಿ ಅಪಾರ ಆಸೆ ಹೊಂದಿರುತ್ತಾನೆ 

ಅವನ  ಜೀವನದ ಪೈಕಿಯಲ್ಲಿ ತಾ ಕಂಡ ಕನಸುಗಳು ನನಸಾಗಲೆಂದು ಬೃಹತ್ ಆಕಾಂಕ್ಷೆಗಳನ್ನೋಂದಿರುವ ಪ್ರಾಣಿ ಎಂದೇ ಹೇಳಬಹುದು

. ಆದರೆ ಕೆಲವು ವ್ಯಕ್ತಿಗಳಿಗೆ ತಮ್ಮ ಬದುಕಿನ ಬಗ್ಗೆ ಜಟಿಲವಾದ ಆಸೆಗೆ ಅವಿತುಕೊಂಡಿರುತ್ತಾರೆ.  ತಮ್ಮ ಕುಟುಂಬದ ಹಲವು ಮಾರಣಾಂತಿಕ ಕಲಹಗಳಿಂದ ಕಡಲೋಡೆದಂತೆ ತಮ್ಮ ಕನಸನ್ನು ಕಡೆಗಣಿಸುತ್ತಾನೇ. ಹಲವಾರು ವಾದಾತ್ಮಕ ವಿಷಯಗಳಿಂದ ತಮ್ಮ ಕನಸಿನ ಆಸೆಗೆ  ದಿಗ್ಬಂದನ ಹಾಕಿ, ಕಟ್ಟಿ ಒಂದು ಮೂಲೆಯಲ್ಲಿ ಎಸೆಯುತ್ತಾನೆ.

  ಈ ಆಸೆಗೆ  ಅರ್ಥವಿರುವುದಿಲ್ಲ. ತನ್ನ ಆಸೆಯ ಒಳಗಿನ ರೂಪುರೇಷೆಯನ್ನು ಜಗತ್ತಿಗೇ ಸಾರುವಷ್ಟರಲ್ಲಿ ಕಲಹಗಳು ಬೆನ್ನತ್ತಿ ತನ್ನ ಆಸೆಯನ್ನು ಉಜ್ವಲಗೋಳಿಸದೇ ಕೊಲ್ಲುತ್ತಾರೆ. 
 ಆ  ಆಸೆಯು ತನ್ನ ಮನದಲ್ಲಿಯೇ ಮಣ್ಣಾಗುತ್ತದೇ. ಆಸೆಯು ಸತ್ಯ ಬಂಧತೆಯನ್ನಾ ಮುರಿಯಬಾರದು. 
    ಆಸೆಯ ಹತಾಶೆಯಿಂದ ಸತ್ಯ ಬಂಧತೆಯನ್ನಾ ಕೊಲ್ಲದಿರು ಮನುಜನೆ. 
     ಸತ್ಯ ಬಂಧತೆಯನ್ನಾ ಕೊಲ್ಲುವುದಕ್ಕಿಂತ ಮೊದಲು ಯೋಚನೆ ಮಾಡೋ ಸದ್ಗುಣ ಸಹಜನೆ. 
ಇದನ್ನು ನೀವು ಅಳವಡಿಸಿಕೊಳ್ಳಿ. 
ಆಸೆ, ಆಕಾಂಕ್ಷೆ ಎನ್ನುವುದು ಇದು ಜಗದ ನಿಯಮ. ಆದರೆ ಆಸೆ ಪಟ್ಟಿದ್ದನ್ನು ತಾ ಪಡೆದುಕೊಳ್ಳಬೇಕೆಂಬುವುದು ಮನುಜನ ಸಹಜ ಗುಣ.  ಆಸೆ ಎಂಬುವುದು ಆದಿ ಮಾನವರ ಕಾಲದಿಂದಲೂ ಹುಟ್ಟಿ ಬಂದಿದೆ ಎಂದು ಹೇಳಬಹುದು. ಭೂಮಿಯ ಮೇಲಿರುವ ಸಕಲ ಜೀವ ರಾಶಿಗಳಿಗೆಯೋ ಕೂಡ ಆಸೆ ಕಂಡಿತವಾಗಿಯು ಇದ್ದೇ ಇರುತ್ತದೆ.

 ಬದುಕುಎಂದಾದರೇ ಎಲ್ಲವೂ ಇರಲೇ ಬೇಕು, ಅದು ಪೂರಕವಾಗಿ ಆಸೆಯು ಒಂದಾಗಿದೆ. ಆಸೆ ಎಂಬುವುದು ದೇವರು ಕೊಟ್ಟ ಒಂದು ಆಕಷ೯ಕ ಕಾಣಿಕೆ ಎಂದೆ ಹೇಳಬಹುದು. ಆ ಆಸೆ ಹೇಗಿರಬೇಕೆಂದರೆ, ಎಲ್ಲಾ  ಸಕಲಕಲಾವಲ್ಲಬರು ಕೂಡಾ ಆ ಆಸೆಯನ್ನು ಮೆಚ್ಚಿ ಉತ್ತೇಜಿಸುವಂತದ್ದಾಗಿರಬೇಕು. ಎಲ್ಲರ ಮನ ಮಂಕಾಗಿಸುವ, ಮತ್ತೊಬ್ಬರಿಗೆ ಹಿಂಸೆ ಮಾಡುವಂತಹ ಆಸೆಯಾಗಿರಬಾರದು. ತಾ ಮನುಷ್ಯ ಮನಪೂರ್ವಕವಾಗಿ ಇಷ್ಟ ಪಟ್ಟಿದ್ದು ಅದು ಅವನಿಗೆ ತುಂಬಾ ವಿಷೇಶವಾಗಿರುತ್ತದೇ . ತಾ ಆಸೆ ಪಟ್ಟಿದ್ದು ತನಗೆ ದೊರೆತಾಗ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳುವ ಸದ್ಗುಣ ಅವರದ್ದಾಗಿರಬೇಕು. ಅಂದಾಗ ಮಾತ್ರ ಆ ಆಸೆಗೆ ಅರ್ಥವಿರುತ್ತದೇ. ತಾನು ಆಸೆ ಪಟ್ಟಿದ್ದು ತನಗೇ ದೊರೆಯಲಿಲ್ಲವೆಂದರೆ ಅಥವಾ ಇಷ್ಟ ಪಟ್ಟಿದ್ದು ನಮ್ಮಿಂದ ದೂರವಾಗುತ್ತಿದೇ ಅಥವಾ ದೂರವಾಗುತ್ತಿದ್ದಾರೆ ಎಂದರೆ ಸ್ವತಃ ತಾವೇ ಅದಕ್ಕೆ ಕಾರಣವಾಗಿರುತ್ತಾರೆ. ಏಕೆಂದರೆ ನಿಮ್ಮ ಅತಿಯಾದ ಆಸೆ, ಕಾಳಜಿ   ಅವರನ್ನು ಹಿಂಸಿಸಿದಂತಾಗುತ್ತದೆ. ಆದ್ದರಿಂದ ನಿಮ್ಮ ಅಮೂಲ್ಯವಾದ ಆಸೆಯಿಂದ ದೂರ ಉಳಿಯಲು  ಯತ್ನಿಸುತ್ತಿರಬೇಕು 
ನೀವು ಕೂಡಾ ಆಸೆ ಪಡಿ !ಬೇಡಾ ಅಂತಾ ಹೇಳುವುದಿಲ್ಲ! ಆದರೆ ಆ ಆಸೆ ಹತಾಶೆಯ ಆಸೆಯಾಗಿರಬಾರದು. ಆ ಆಸೆಗೊಂದು ಅರ್ಥ ಇರಲಿ. ಸಿಗದಿರೋ ವಸ್ತುವಿನ ಮೇಲೆ ಆಸೆ ಪಡದಿರಿ. 
ನನಗೂ ಕೂಡಾ ಪರ್ವತ ದಷ್ಟು ಆಸೆಗಳಿವೇ. ಆದರೆ ನಾನು ಆಸೆ ಪಟ್ಟಿದ್ದು ಅಂತಿಂಥದ್ದಲ್ಲಾ! ತುಂಬಾ ಅಮೂಲ್ಯವಾದದ್ದು. ಅದು ನನಗೆ ಸಿಗುವುದಿಲ್ಲವೆಂದು ತಿಳಿದ ಮರುಕ್ಷಣವೇ ಆ ವಸ್ತುವಿನ ಮೇಲಿದ್ದ ಮೋಹವನ್ನೆ ನಾ ತ್ಯಜಿಸಿದೆ. ಯಾರ ಹಣೆಬರಹದಲ್ಲಿ ಆ ವಸ್ತುವಿನ ಹೆಸರು ಕೆತ್ತಿರುತ್ತಾನೆಯೋ ಆ ವಸ್ತು ಅವರಿಗೆ ಮಾತ್ರ ದೊರೆಯುತ್ತದೆ. 
ಈ ಲೇಖನಿ ಒಂದು ಅನುಭವವಾಗಿ ನನ್ನ ಮನದಾಳದಿಂದ ಎಸಗಿ ಬಂದಂತಹ ಬರವಣಿಗೆಯಾಗಿದೆ. 
ನಿಮ್ಮ ಬದುಕಿಗೆ ಆಸೆ ಎಂಬುವುದು ಬೆಳಕಾಗಲಿ. ಬದಲಿಗೆ ಅದು ಮುಳ್ಳಾಗಬಾರದೆಂದು ನಾ ಬಯಸುವೆ 


                        
   ✍✍ರಂಜಿತಾ ಮಾ.  ಶೇತಸನದಿ

9ನೇ ತರಗತಿ ವಿದ್ಯಾರ್ಥಿನಿ 
ಸಾ. ದೇವಗಿರಿ 

ತಾ/ಜಿ/ ಹಾವೇರಿ


(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪ )

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...