ಗುರುವಾರ, ಜೂನ್ 17, 2021

ಮಹಾ ಮಾರಿಯ ದಿಬ್ಬಣ (ಕವಿತೆ). - ಕೆ ಕೆ ಬೋರಯ್ಯ

ಮಹಾಮಾರಿಯ  ದಿಬ್ಬಣ

ಮಾರಿಯಾ ಜಾತ್ರೆಯಲಿ ಸಂಬಂಧಗಳ  ಲೆಕ್ಕವಿಲ್ಲ. ಮುಖ ವೈವಿದ್ಯತೆ  ಬದಲಾವಣೆಯ  ಕಪ್ಪು ಚುಕ್ಕೆ. ಯತ್ತಸಾಗಿದರೂ ಮೆಲ್ಲನೆ ಸುಳಿಯೋ ಜೀವ ರಕ್ತಹೀರೊ ಕೊರಂಕಿ.

ಬೇಕು ಮುಖ ಕವಚ. ಬೇಕು ಸಾಮಾಜಿಕ ಅಂತರ. ಬೇಕು ದೇಹದಾ ಸ್ವಚ್ಛತೆ  ನೀ ಮರೆತು ಸಾಗದಿರು ಯತ್ತ ಬೇಕೆಂದರೆ.

ಬೆಳಕು ಕಣೋ ಬರದಲ್ಲಿ ಕತ್ತಲೆಯ ಬದುಕು. ಕಣ್ಣ ನೀರಿಗೂ ಕರುಣೆ ಇಲ್ಲದ  ಸೊಂಕಿನ ಜಂಜಾಟ.ಸ್ವಚ್ಛತೆ ಇಲ್ಲದ ಅಕ್ಕಿ ಅನ್ನ. ತುತ್ತಿನ  ಚೀಲ ತುಂಬಿಸುವ  ದಾರಿ ಪಯಣ. ಆರ್ಥಿಕತೆಗೆ ಸೂತ್ರವಿಲ್ಲ ರೈತನ ಬದುಕು. ಆಶ್ವಾಸನೆ ಆಜ್ಞೆ ಯಾರ ಮಡಿಲು  ತುಂಬುವುದೋ?

ಬದುಕುವ ಕೈಗಳಿಗೆ ಬರ. ಬ್ರೂಣ ಹಸಿ ಎಳೆಗೆ  ಸೊಂಕಿನ ಜ್ವರ. ಕಲಿಕೆಗೆ ಕಂಟಕ ತಾಂತ್ರಿಕ ಬೆರಳಾ ಹಿಡಿದು ನಡೆಯುವ ಪದ್ಧತಿ.


ಸಂಜೀವಿನಿ  ಸಮಪಾಲು ಜನಜೀವನ ಶ್ರವಂತಿಗೆ  ದಕ್ಕಲಿ. ಧನವಿದ್ದರೇನಂತೆ ಅರಿಮೆಯಿಲ್ಲ  ಅಳುವಾ ಮುದಿ ಕಣ್ಣುಗಳಿಗೆ. ವಯಸ್ಸಿನ ಅಂತರ ಮರೆತು. ಸಮೂಹಕ್ಕೆ  ಸಿಗಲಿ ಜೀವಾಂಶ


ದಯವಿಟ್ಟು ಬೆನ್ನ ಹಿಂದೆ ಇರುವ  ಸೊಂಕಿಗೆ ಬಲಿಯಾಗದೆ ಅಕ್ಷರವಂತರಾದ ನಾವು ಜಾಗ್ರತರಾಗಿ ಸಮಾಜಕ್ಕೆ ಮಾದರಿಯಾಗೋಣ. ಭಯದಿಂಬದುಕುವುದು ಬೇಡ. ಜಾಗ್ರತರಾಗೋಣ  ಸರ್ಕಾರದ ಆದೇಶ ಪಾಲಿಸಿ ಜೀವ ಉಳಿಸಿ ಜೀವನಾ ನಡೆಸಿ ದ್ಯೇಯಕ್ಕೆ ಕಟ್ಟುಬಿಳೋಣ.


ಹಸುಳೆಗಳ  ಬದುಕಿಗೆ ಅಕ್ಷರವೇ ನಮಗಾಗಿ ಮುಂದೆ ಕಾದಿದೆ.ಮಾಧ್ಯಮಗಳ ಕಳಕಳಿ ನುರಿತ ತಜ್ಞರಾ ಕಾರ್ಯ ವೈಖರಿ. ಆಯುರ್ವೇದ ಜಾಡಲ್ಲಿ ಪರಿಸರ  ಕಾಳಜಿಯಲಿ  ಬದುಕು ರೂಪಿಸೋಣ. ಇದೇನು ಪ್ರಥಮ ಸೊಂಕೇನಲ್ಲ!ನಾಡು ಕಂಡಿರುವ  ಯಷ್ಟೋ ಸೊಂಕಿನ ಒಂದು ಭಾಗ. ಎದುರಿಸಿ ನಿಲ್ಲುವ  ಛಲ ಅಚಲ ನಂಬಿಕೆ ಆತ್ಮಸ್ತರ್ಯ ಬೇಕು ನಾವು ತುಂಬಿಸಬೇಕು ಜೀವಸಂಕುಲಕೆ. ಮಲೇರಿಯಾ ಕಾಲರ ಎಷ್ಟೋ ಕಾಯಿಲೆಗಳಿಗೆ ಈ ನಾಡಲ್ಲೇ ಮದ್ದು ಸಿಕ್ಕಿದೆ ಸಿಗುತ್ತದೆ ಸರ್ಕಾರದ ಎಲ್ಲೆ ಮೀರಿ ನಡೆಯದಿರು ಅರಿತರೆ ಆರು ಮರೆತರೆ ಮೂರು ಅನ್ನೋಹಾಗೆ ಮುಂಜಾಗ್ರತಾ  ಕ್ರಮ ಚಟುವಟಿಕೆಯಲ್ಲಿ   ಆರೋಗ್ಯದ ಬದುಕು ನಾವೆಲ್ಲರೂ ಸ್ವೀಕರಿಸೋಣ  🙏🙏🙏🙏🙏🙏🙏
ಇಂತಿ ವಿಶ್ವಾಸಿ ಕೆ ಕೆ ಬೋರಯ್ಯ
ನೇರಲಗುಂಟೆ
ಚಳ್ಳಕೆರೆ ತಾಲೂಕು
ಚಿತ್ರದುರ್ಗ ಜಿಲ್ಲೆ
8105685294



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...