ಕೃತಕ ಪರಿವರ್ತನೆ , ಆಂತರಿಕ ಚಟುವಟಿಕೆಗಳಿಗೆ ಬಿಕ್ಕಟ್ಟು
ಪ್ರಸ್ತುತ ಜಗತ್ತು ವೆಗದ ಓಟದೊಡನೆ ಓಡುತ್ತಿದೆ ಆ ಓಟದ ವೇಗದಲ್ಲಿ ಸಂಬಂಧಗಳ, ಸಾಂಪ್ರದಾಯದ, ಸಂಸ್ಕೃತಿಯ, ಇತಿಹಾಸದ ಮಹತ್ವ ಮುಂತಾದಗಳನ್ನು ಮರೆಯುತ್ತಿದೆ. ಅನಿವಾರ್ಯವಾಗಿ ಜೀವನದಲ್ಲಿ ಬರುವ ಉಪಜಿವನಕ್ಕೆ ಬೇಕಾಗಿರುವ ಮಾನವನ ಆಂತರಿಕ ಪರಿವರ್ತನೆಗೆ ಹಾನಿಯಗಿವೆ ಆದರೆ ವೆಗಕ್ಕೆ ನೆರವಾಗಿರುವ ಕೃತಕಗಳು ಆಕರ್ಷಣೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿವೆ.
ಆಕರ್ಷಣೆಗೆ ಒಳಗೊಂಡಿರುವ ಮನುಷ್ಯ ಅವಶ್ಯಕತೆಗೆ ಮೀರಿ ಅದನ್ನು ತನ್ನಲ್ಲಿ ಅಳವಡಿಸಿಕೊಂಡಿದ್ದಾನೆ ಪ್ರಮುಖವಾಗಿ ಇ-ಫೋನ್ , ಸಾಮಾಜಿಕ ಜಾಲತಾಣ ಮತ್ತು ಅನೇಕ ಎಲೆಕ್ಟ್ರಾನಿಕ್ ಯಂತ್ರಗಳು ಪ್ರಸ್ತುತ ಜಗತ್ತಿಗೆ ಸಹಾಯಕ ಮತ್ತು ಕೆಲವಂದು ಜಗತ್ತನ್ನೇ ಅಸಹಾಯಕ ಸ್ಥಿತಿಗೆ ತಂದಿವೆ.
ಪ್ರಮುಖವಾಗಿ ಕೃತಕ ಬುದ್ದಿಮತ್ತೆಯನ್ನೆ ಅನುಸರಿಸುತ್ತಿರುವ ಜಗತ್ತಿಗೆ ಕೆಲವು ಟೆಕ್ನೋಲಾಜಿಕಲ್ ಸಾಧನಗಳು ಜನಸಾಮಾನ್ಯರಲ್ಲಿ ಭಾವನೆ,ಸಂಪ್ರದಾಯ,ಸಂಸ್ಕೃತಿ, ಕೆಲವುಬಾರಿ ಮನುಷತ್ವವನ್ನೆ ಮರೆಸುವಷ್ಟು ಅಪಾಯಕಾರಿಯಾಗಿವೆ ಆದರೆ ಒಂದು ಮಾರ್ಗದಲ್ಲಿ ಪ್ರಸ್ತುತ ಸ್ಥಿತಿಗತಿಗಳಿಗನುಗುಣವಾಗಿ ಅತ್ಯಂತ ಅವಶ್ಯವಾಗಿವೆ.
ಮಹಾಮಾರಿಯಾಗಿ ಕಾಲಿಟ್ಟಿರುವ ಕೊವಿಡ್-19 ವಿರುದ್ಧದ ಸಮರದಲ್ಲಿ ಅತ್ಯಂತ ಪ್ರಮುಖವಾಗಿ ನೆರವಾಗಿವೆ. ಇ-ಎಜುಕೇಶನ್, ಇ-ನ್ಯೂಸ್ ಪೇಪರ್ ಮತ್ತು ಅನೇಕ ಸಾಮಾಜಿಕ ಮಾಧ್ಯಮಗಳು ನೆರವಾಗಿದ್ದವು ಪ್ರಮುಖವಾಗಿ ಲಾಕಡೌನ್ ನಲ್ಲಿ ಮರೆತು ಹೊಗಿದ್ದ ಶಿಕ್ಷಣವನ್ನು ಇ-ಎಜುಕೇಶನ್ ಮರುಜೀವಿಸಿತ್ತು ಮತ್ತು ಲಾಕ್ಡೌನ್ನಲ್ಲಿ ನಡಿಯಲೇಬೇಕಾದ ಹಲವಾರು ಮೀಟಿಂಗ್ ಗಳು ಟೆಕ್ನೋಲಜಿಕಲ್ ಸಾಧನಗಳಿಂದಲೆ ಸಾದ್ಯವಾಗಿತ್ತು ಮತ್ತು ವೃತ್ತಿ ಇದ್ದರು ಕೆಲಸ ಇಲ್ಲದಂತೆ ಕೂತಿದ್ದ ಹಲವಾರು ವೃತ್ತಿದಾರರಿಗೆ ವರ್ಕ್ ಪ್ರಾಮ್ ಹೋಂ ನೆರವಾಗಿತ್ತು. ಆದರೆ ಆಂತರಿಕವಾಗಿ ಮಾನವನ ಪರಿವರ್ತನೆಗೆ ಬಿಕ್ಕಟ್ಟು ಮೂಡಿಸಿರುವ ಇವುಗಳು ಇ ರೀತಿಯಾಗಿ ಪರಿಣಾಮಕಾರಿಯಾಗಿವೆ
ಪ್ರಸ್ತುತ ಜಗತ್ತು ತುಂಬಾ ವೇಗವಾಗಿದೆ ,
ಬಯಕೆ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ ,
ಇತಿಹಾಸ ಮರೆಯಾಗುತ್ತಿದೆ
ಪ್ರಾಣಿಗಳ ಓಡಾಟ ಕಡಿಮೆಯಾಗುತ್ತದೆ ,
ಪಕ್ಷಿಗಳ ಹಾರಾಟಾ ಕಡಿತಗೊಂಡಿದೆ,
ಕೆರೆ ಕಟ್ಟೆಗಳು ಭುವಿಯಲ್ಲಿ ಮರೆಯಾಗುತ್ತಿವೆ ,
ಭಜನೆ ಹಾಡುಗಳು ಮರೆತಂತಾಗಿದೆ ,
ನೆರಳಾಗಿದ್ದ ಗಿಡಗಳು ಮನೆ ಬಾಗಿಲಗಳಾಗಿವೆ,
ಹಳ್ಳಿಗಳ ವಾತಾವರಣ ಪೇಟೆಯಂತಾಗಿವೆ,
ಮಳೆ ಘಾರುಗಳು ಅಪರೂಪವಾಗಿವೆ,
ಬಯಲಾಗಿದ್ದ ನೆಲ ಕಟ್ಟಡವಾಗುತ್ತಿದೆ ,
ಉತ್ಸವದಿಂದ ಆಚರಿಸುವ ಹಬ್ಬ ಹುಣ್ಣಿಮೆ ವಿಡಿಯೋಗಳಲ್ಲಿ ನೋಡುವಹಾಗಾಗಿದೆ,
ಕಟ್ಟೆ ಮೇಲೆ ಕೂತು ಹರಟೆ ಹೊಡೆಯುವ ವೇಳೆ ನಮಗೆಲ್ಲಿದೆ ,
ಹಂಚಿಕೊಂಡು ಆಚರಿಸುತ್ತಿದ್ದ ಭಾವಗಳು ವಾಟ್ಸಪ್ಪ್ ಇಮೊಜೀಗಳಲ್ಲಿ ಕಂಡುಬರುತ್ತದೆ,
ಬುಗುರಿ ಗೊಲಿಯಾಟಗಳು ಪಬ್ಜಿಯೊಡನೆ ಮರೆತುಹೋಗುತ್ತಿವೆ,
ಆಕರ್ಷಕ ಕ್ರಿಕೆಟ್ ಕುಸ್ತಿ ಆಟವನ್ನು ಹಿಂದಕ್ಕಿದೆ ,
ಸದ್ದು ಮಾಡುವ ಡಿಜೆ ತಮಟೆ ಡೊಳ್ಳುಗಳ ಶಬ್ದ ಕೇಳದಂತೆ ಮಾಡುತ್ತಿದೆ ,
ಚಲನಚಿತ್ರಗಳು ನಾಟಕಗಳ ವೈಭವವನ್ನು ಮುಚ್ಚುತ್ತಿದೆ,
ಕಲೆಯಾಗಿ ಮುಡುತ್ತಿದ್ದ ಚಿತ್ರಗಳು ಫೊಟೊ ಲ್ಯಬನಲ್ಲಿ ಎಡಿಟ್ ಆಗುತ್ತಿವೆ,
ದೀಪದಿಂದ ಬೆಳಗುತ್ತಿದ್ದ ಕೋಣೆಗಳನ್ನು ಎಲಿಡಿ ಲೈಟ್ ಗಳು ಅಲಂಕರಿಸುತ್ತಿವೆ,
ಶ್ರದ್ದೆಯಿಂದ ಇದ್ದ ಭಕ್ತಿ ಭಾವಗಳು ಸ್ಟೇಟಸ್ ಗಳಲ್ಲಿ ಕಾಣುತ್ತಿವೆ,
ಪೋಸ್ಟ್ ಗಳಲ್ಲಿ ಬರುತ್ತಿದ್ದ ಆಮಂತ್ರಣಗಳು ವಾಟ್ಸಪ್ಪ್ ಗ್ರೂಪ್ ಗಳಲ್ಲಿ ಬರುತ್ತಿವೆ,
ಅಂಕಲಪಿ ಇರುತ್ತಿದ್ದ ಮಕ್ಕಳ ಕೈಯಲ್ಲಿ ಫೋನ್ ಗಳು ಕಾಣುತ್ತಿವೆ,
ಪಾಟೆಯ ಮೇಲೆ ಬರೆಯುವ ವಯಸ್ಸಿನಲ್ಲಿ ಮಕ್ಕಳು ಯೌಟ್ಯೂಬನಲ್ಲಿ ಪುಟಗಳನ್ನು ತಗೆಯುತ್ತಿದ್ದಾರೆ,
ಇಂತಹ ಹಲವಾರು ಕ್ಷೇತ್ರಗಳು ಮಾನವನ ಆಂತರಿಕ ಪರಿವರ್ತನೆಗೆ ಬಿಕ್ಕಟ್ಟು ಮೂಡಿಸಿವೆ. ಪ್ರಮುಖವಾಗಿ ಇತಿಹಾಸದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ
ಸಹಜವಾಗಿ ನಾವು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿ ಇತಿಹಾಸದ ಮಹತ್ವ ತಿಳಿಯಲು ಹಿಂಜರಿದು ಕೃತಕಉಪಗ್ರಹಗಳಿಂದ ಅಲಂಕರಿತವಾದ ತಾಣಗಳಿಗೆ ಹೋಗಲು ಇಚ್ಛಿಸುತ್ತೇವೆ ಐತಿಹಾಸಿಕ ತಾಣಗಳು ಹಂಪಿ,ಐಹೊಳೆ ಮುಂತಾದದ ಬದಲು ಪ್ರವಾಸವಾಗಿ ಗೋವಾ, ಹೈದೆರಾಬಾದ್ ಫಿಲ್ಮ್ ಸಿಟಿ ಇತ್ಯಾದಿ ಕೃತಕಗಳಿಂದ ಮಾಡಿರುವ ತಾಣಗಳಿಗೆ ಹೋಗಲು ಇಚ್ಚಿಸುತ್ತೆವೆ.
ಅರಣ್ಯದ ಸುತ್ತು ವಾಹನಗಳ ಸಂಚಾರ ಹೆಚ್ಚಳವಾಗಿದ್ದು ಪ್ರಾಣಿಗಳು ಸ್ವತಂತ್ರವಾಗಿ ಓಡಾಡಲು ಆಗುತ್ತಿಲ್ಲ ಮತ್ತು ವಾಹನಗಳ ಉಗಮದಿಂದ ಬರುವ ವಿಶಕಾರಿ ಹೊಗೆಯಿಂದ ಪಕ್ಷಿಗಳು ಉಸಿರಾಟದ ತೊಂದರೆ ಅನುಭವಿಸುತ್ತೀವೆ ಮತ್ತು ಇ ಫೋನ್ ನೆಟ್ವರ್ಕ್ ದಿಂದ ಬರುವ ರಿಫ್ಲೇಕ್ಶನಗಳು ಪಕ್ಷಿಗಳ ಜೀವನಕ್ಕೆ ಅಪಾಯಕಾರಿ ಆಗಿವೆ.
ಮೊದಲೆಲ್ಲ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಹಬ್ಬ ಹುಣ್ಣಿಮೆಗಳಲ್ಲಿ ಕಂಡುಬರುತ್ತಿದ್ದ ಉತ್ಸಾಹ ಮರೆಯಗುತ್ತಿದೆ ಪ್ರಮುಖವಾಗಿ ಉಗಾದಿಯಂದು ಬೇವು ಬೆಲ್ಲ ಆಚರಿಸುವ ಹೊಸ ವರ್ಷ ಪಾಶ್ಚಾತ್ಯ ಪಧ್ಧತಿಯಲ್ಲಿ ನಡೆಯುತ್ತಿವೆ ಹೊಸ ವರ್ಷವನ್ನು ಖುಷಿ ದುಖ ಸಮಾನವಾಗಿ ಆಚರಿಸುವ ಬದಲಾಗಿ ನ್ಯೂ ಇಯರ್ ಪಾರ್ಟಿಗಳಲ್ಲಿ ಆಗುವ ಡಿಜೆ, ಲೈಟಿಂಗ್ ಇತ್ಯಾದಿಗಳಿಂದ ಆಕರ್ಶಿತರಾಗಿ ಪಾಶ್ಚಿಮಾತ್ಯ ಪಧ್ದತಿಯಲ್ಲಿ ಆಚರಣೆ ಆಗುತ್ತಿವೆ.
ಇನ್ನು ಅನೇಕ ಕ್ಷೇತ್ರಗಳಿಗೆ ಬಿಕ್ಕಟ್ಟು ತಂದಿರುವ ಕೃತಕಗಳು ಕೆಲವು ಕ್ಷೇತ್ರಗಳಿಗೆ ಆಸರೆಯಾಗಿವೆ ಪ್ರಮುಖವಾಗಿ ಪತ್ರಿಕಾ ಕ್ಷೇತ್ರಕ್ಕೆ ನೆರವಾಗಿ ಸಾಮಾಜಿಕ ಜಾಲತಾಣ ಸುದ್ದಿಗಳನ್ನು ವೇಗವಾಗಿ ಹರಡಿಸಲು ಸಹಾಯಕವಾಗಿವೆ ಅನೇಕ ಕಲೆಗಾರರಿಗೆ ಮತ್ತು ಬರಹಗಾರರಿಗೆ ಇ-ನ್ಯೂಸ್ ಪೇಪರ್, ಇ-ಮ್ಯಾಗಜಿನ್ ಗಳು ನೆರವಾಗಿವೆ...
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ