ಅಪ್ಪನ ಸ್ಪೂರ್ತಿ..
ಅಪ್ಪಂನೆಂದರೆ ಧೈರ್ಯ ಸ್ಥೈರ್ಯ
ಅಪ್ಪನೇ ಕಲಿಸಿಕೊಡುವನು ಎಲ್ಲಾ ಕಾರ್ಯ
ಅಪ್ಪನ ಜೀವನವೇ ನನಗೆ ಸ್ಪೂರ್ತಿ
ಅಪ್ಪನಿಂದಲೇ ಬಂದಿದೆ ಎಲ್ಲಾ ಕೀರ್ತಿ.
ಪ್ರಪಂಚವ ಪರಿಚಯಿಸಿ
ಹಸಿವಿನ ಬೆಲೆ ತೋರಿಸಿ
ನಡವಳಿಕೆಯ ಕಲಿಸಿ
ತನ್ನ ಅನುಭವದ ವಿದ್ಯೆ ತಿಳಿಸಿ.
ತಾನು ಬೈದು ಸಮಾಜ ನಿನ್ನನ್ನು
ಬಯ್ಯದಂತೆ ಬುದ್ಧಿಯ ಕಲಿಸಿದ
ತಪ್ಪುಗಳನ್ನು ರಕ್ಷಿಸದೆ ತಾನು ಶಿಕ್ಷಿಸಿ
ಸಮಾಜದಲ್ಲಿ ಮಾದರಿ ವ್ಯಕ್ತಿತ್ವ ರೂಪಿಸಿದ...
ಶಿವನಗೌಡ ಪೊಲೀಸ್ ಪಾಟೀಲ್
ಉಪನ್ಯಾಸಕರು ಕೊಪ್ಪಳ
9845646370
(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450, ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ