ಶನಿವಾರ, ಜೂನ್ 19, 2021

ಪ್ರೇಮದಾರಾಧನೆ (ಕವಿತೆ) - ಡಾ ಯಲ್ಲಮ್ಮ ಕೆ.

ಪ್ರೇಮದಾರಾಧನೆ 

'ಬರಯುವೆ ನಾ ಲಕ್ಮಿಗೆ 
ಒಲವಿನೋಲೆಯ 
ಕರೆಯುವೆ ನಾ ಅವಳ 
ವರಮಹಾಲಕ್ಮಿ ಪೂಜೆಗೆ

ಪರಿಪಾಲಿಸೆಂದು ಬೇಡುವೆ 
ಮೂಜಗದ ಕಟ್ಟಳೆಗಳ, 
ತಿಳಿಯೆನ್ನುವೆ ಸುಂದರ ಸೃಷ್ಟಿಯ ನಿಯಮಗಳ. 

ಬರಯುವೆ ನಾ ಲಕ್ಮಿಗೆ 
ಒಲವಿನೋಲೆಯ 
ಕರೆಯುವೆ ನಾ ಅವಳ 
ವರಮಹಾಲಕ್ಮಿ ಪೂಜೆಗೆ

ಅರುಹುವೆ ನಾ ಅವಳಲ್ಲಿ 
ಕಲಕಬೇಡ  ಮನುಜನ 
ಮನದ ಶಾಂತಿಯನ, 
ಚಿತ್ತ ಚಾಂಚಲ್ಯಕ್ಕೆ ಸಿಲುಕಿಸದೆ 
ಸ್ವಾಥ೯, ಅಸೂಯೆಗಳ, 
ಭೋಗ ಲೋಲುಪತನಕ್ಕೆ ಅಣಿಗೊಳಿಸಬೇಡ ನಮ್ಮನ್ನ. 

ಮರೆಯಿಸಬೇಡ ನೀ 
ಪ್ರೀತಿ, ವಿಶ್ವಾಸ, ಮಾನವೀಯ
ಅಂತಃಕರಣವನ್ನ 

ಪೂಜಿಸುವೆ ಮನದೆನ್ನೆಯ 
ಸಹನಶೀಲ, ದಯಾಪರ ಸದ್ಗುಣಗಳನ್ನ,' 

     - ಡಾ ಯಲ್ಲಮ್ಮ ಕೆ.
ತಾವರಗೇರಾ
ದೂ : 6362461983


(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...