ಭಾವ ತೋರಣ....
ಹೃದಯದಲಿ ಅರಳಿದ ಭಾವ ಮಂದಿರ
ನವಿರು ಕನಸುಗಳ ಚಿತ್ತಾರ
ಭಾವ ಬೆಸೆದ ನೂರ್ಮಡಿಲ ತಾಣ
ಬಾಳ ಹೊಸ ರಾಗದ ಅನಾವರಣ...
ಕನಸು ಕಂಗಳ ಲಾಸ್ಯದಲಿ
ತುಟಿಯಂಚಿನ ಮುಗ್ಧತೆಯಲಿ
ಕಣ್ಣೀರ ಅಭಿಷೇಕದ ಮೆರೆಯಲಿ
ಸ್ಪರ್ಶ ಸಾಂತ್ವನದ ನಲ್ನುಡಿಯಲಿ...
ಹತಾಶೆ ನಿರಾಶೆಯ ಮೆಲುಕು
ಆಶಾವಾದ ಭರವಸೆಯ ಬೆಳಕು
ಸಂಬಂಧಗಳ ಅರಿವಿನ ನಂಬಿಕೆ
ಭಾವನೆಗಳ ಪ್ರಪಂಚದ ಸ್ವಂತಿಕೆ..
ಹೆಪ್ಪುಗಟ್ಟಿದ ಮೌನದಲಿ ಮಾತು
ತಾಳ್ಮೆ ಸಹನೆಯ ಭಾವ ತಂತು
ನಿಗೂಢ ನಿರೀಕ್ಷೆಯ ಅಂತಃಕರಣ
ಮರೀಚಿಕೆ ಕನಸುಗಳ ಸ್ಪುರಣ
ಮನದ ಮಾತುಗಳ ತೋರಣ
- ಹಂಸರಾಗ ಶೆಟ್ಟಿ ಶಿಕ್ಷಕಿ ಗೋಳಿತೊಟ್ಟು ಕಡಬ ತಾಲೂಕು ದಕ.
ಬಹಳ ಸೊಗಸಾಗಿದೆ
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿTumbane chennag ide..
ಪ್ರತ್ಯುತ್ತರಅಳಿಸಿ