ಮಂಗಳವಾರ, ಜೂನ್ 22, 2021

ಶಿಕ್ಷಣ (ಕವಿತೆ) - ಮೊಹಮ್ಮದ್ ಹುಮಾಯೂನ್ ಎನ್

ಶಿಕ್ಷಣ

ಮೌಲ್ಯಗಳ ಮಾಪನವೇ ಶಿಕ್ಷಣ
ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣ
ಶಿಕ್ಷಣ ವ್ಯಕ್ತಿತ್ವ ರೂಪಿಸುವ ಅಸ್ತ್ರ
ಸಾಧನೆಗಳ ಸಾಗರವೇ ಶಿಕ್ಷಣ

ಸಹಬಾಳ್ವೆ ಸ್ವಪ್ರೇರಣೆ ಶಿಕ್ಷಣದ ಕೊಡುಗೆ
ಸಮಸ್ಯೆಗಳ ಸಂಧಿಸುವ ನೈಪುಣ್ಯತೆಯೇ ಶಿಕ್ಷಣ
ಸಮಾಜ- ಸಂಸ್ಕೃತಿ ಸ್ಥಿತಿ-ಗತಿಗಳ ಅರಿವು
ತಂತ್ರಗಳ ತಂತಿಗಳನ್ನು ಕೂಡಿಸುವುದೇ ಶಿಕ್ಷಣ

ತ್ಯಾಗ ಪ್ರೀತಿ ಸಹಕಾರದ ಸರಮಾಲೆ
ಪರಸ್ಪರ ಭಾವನೆಗಳ ವಿನಿಮಯವೇ ಶಿಕ್ಷಣ
ಜ್ಞಾನದ ಜ್ಯೋತಿ
ಕಲಿಕೆಯ ಅನುಭವ
ಪ್ರದರ್ಶಿಸುವುದು ಶಿಕ್ಷಣ

ನೋವೆಂಬ ಕಹಿ ನುಂಗುವುದು ಬಲು ಕಷ್ಟ
ಜ್ಞಾನದ ಸುಧೆಯಿಂದ ಉಣಬಡಿಸುವುದೇ ಶಿಕ್ಷಣ
ಮಾನವ ಮಾನವೀಯತೆಯ 
ಸಂಪತ್ತಿನ ಒಡೆಯ
ಈ ಸಂಪತ್ತಿನ ಖಜಾನೆಯ ಬೀಗವೆ ಶಿಕ್ಷಣ

ಕರುಣೆ ಮಮತೆ ಭಾವಗಳ ಮಿಡಿತ
ಕ್ರೋಧ ಲೋಭ ಮೋಹ
ಸೆಳೆತಗಳ ಮೇಲೆ ಹಿಡಿತ
ಕೇವಲ ಹಿಮೂವಿನ ಅನುಭವವೇ ಶಿಕ್ಷಣವಲ್ಲ
ಜೀವಾತ್ಮ- ಪರಮಾತ್ಮಗಳ ಸ್ನೇಹ ಸಂಗಮವೇ ಶಿಕ್ಷಣ

- ಮೊಹಮ್ಮದ್ ಹುಮಾಯೂನ್ ಎನ್
ಶಿಕ್ಷಕರು, ಮೈಸೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...