ಮಂಗಳವಾರ, ಜೂನ್ 22, 2021

ಕಾರ್ಯಕ್ರಮದ ವರದಿ : ಕಥಾ ಸಂವಾದ - ತನುಶ್ರೀ ಪ್ರಕಾಶನ.



ದಿ :೩೩/೦೬/೨೦೨೧ ರಂದು ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಆನ್‌ಲೈನ್ ರಾಜ್ಯ ಮಟ್ಟದ ಕಥಾ ಸಂವಾದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರೀಯುತ ಗಣಪತಿ ಛಲವಾದಿ ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರು ವಹಿಸಿದ್ದರು ಹಾಗೆಯೇ ಕಥಾ ಸಂವಾದ ನಡೆಸಿಕೊಡಲು ಮತ್ತು ಉಪನ್ಯಾಸ ನೀಡಲು ಶ್ರೀಯುತ ಮೂದೋರು ತೇಜ ಖ್ಯಾತ ಕಥೆಗಾರರು ಚಳ್ಳಕೆರೆ ವಹಿಸಿಕೊಂಡು ತಮ್ಮ ಅನುಭವ ಮತ್ತು ಕಥೆ ಕುರಿತು ಸಂಕ್ಷಿಪ್ತವಾಗಿ ತಮ್ಮದೇ ಮಾತುಗಳಲ್ಲಿ ಹೇಳುತ್ತಾ ಪ್ರಸ್ತುತ ದಿನಗಳಲ್ಲಿ ಕಥೆ ಹೇಗೆ ಬರೆಯಬೇಕು ಎಂಬ ಅಂಶ ತುಂಬಾ ಮುಖ್ಯ ಕಥೆ ರಚನೆ ಸಂದರ್ಭದಲ್ಲಿ ಕೇವಲ ಕಾಲ್ಪನಿಕ ವಸ್ತು ಇರದೇ ತಮ್ಮ ಸುತ್ತಲಿನ ಪರಿಸರದಲ್ಲಿ ನಡೆಯುವ ಘಟನೆಗಳನ್ನು ಯಥಾವತ್ತಾಗಿ ಕಥೆಯ ರೂಪ ಕೊಟ್ಟರೇ ಮರೆಯಾಗುತ್ತಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಆಗಬೇಕು ಆದೇ ರೀತಿಯಾಗಿ ಅತಿ ಹೆಚ್ಚು ಸಂಭಾಷಣೆ ಇರದೇ ಪಾತ್ರಗಳಿಗೆ ಹೆಚ್ಚು ಮಹತ್ವ ನೀಡುತ್ತಾ ಕಥಾ ಹಂದರ ಸಾಗಿದರೆ ಒಳ್ಳೆಯ ಕಥೆ ರಚನೆ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಮಾತು ಮುಗಿಸಿದರು ಆನಂತರ ಕವಿಗಳು ಕೇಳುವ ಪ್ರಶ್ನೆಗಳಿಗೆ ಸಂವಾದ ಮುಖಾಂತರ ಉತ್ತರ ನೀಡಿ ಅವರಿಗೆ ಸಂದೇಹ ಬಗೆಹರಿಸಿದರು. ನಂತರ ಕಾರ್ಯಕ್ರಮ ಪ್ರಾಸ್ತಾವಿಕ ನುಡಿ ಕು. ಸಿಂಚನ ಜಿ. ಎನ್. ಪ್ರಧಾನ ಮಹಿಳಾ ಸಂಚಾಲಕರು ತನುಶ್ರೀ ಪ್ರಕಾಶನ ಸಂಸ್ಥೆ ಬೆಳೆದು ಬಂದ ರೀತಿ ಹಾಕಿಕೊಂಡಿರುವ ಯೋಜನೆಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ಕೊಟ್ಟು ತಮ್ಮ ಮಾತು ಮುಗಿಸಿದರು. ಆಶಯ ನುಡಿಯಲ್ಲಿ ಎಸ್. ರಾಜು ಸೂಲೇನಹಳ್ಳಿ ಪ್ರಕಾಶಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಇವರು ಮಾತನಾಡುತ್ತಾ ಈಗಾಗಲೇ ತನುಶ್ರೀ ಪ್ರಕಾಶನ ಹಲವು ಸ್ಪರ್ಧೆಗಳನ್ನು ಆಯೋಜನೆ ಮಾಡಿ ಒಳ್ಳೆಯ ಫಲಿತಾಂಶ ಕೊಡುವ ಮೂಲಕ ಹೆಸರು ಗಳಿಸಿದೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು ಹಾಗೆಯೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆ. ಶ್ರೀಧರ್ (ಸಿರಿ) ರಾಜ್ಯ ಸಂಚಾಲಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಭಾಗವಹಿಸಿ ಚೆಂದದ ಮಾತುಗಳು ಆಡುತ್ತಾ ಎಲ್ಲರ ಗಮನ ಸೆಳೆದರು. ಆನಂತರ ಮತ್ತೋರ್ವ ಮುಖ್ಯ ಅತಿಥಿಗಳಾಗಿ ದೀಕ್ಷಿತ್ ನಾಯರ್ ಜಿಲ್ಲಾಧ್ಯಕ್ಷರು ಕರುನಾಡ ಹಣತೆ ಕವಿ ಬಳಗ ಮಂಡ್ಯ ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿರುವ ಶ್ರೀಯುತ ಗಣಪತಿ ಛಲವಾದಿ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತನುಶ್ರೀ ಪ್ರಕಾಶನ ಆಯೋಜಕರಿಗೆ ಎಲ್ಲರಿಗೂ ಕಥೆಯ ತಂತ್ರ ಹೇಗಿರಬೇಕು ಈ ದಿನ ಮಾನಗಳಲ್ಲಿ ನಾವು ಕಥೆ ರಚನೆ ಸಂದರ್ಭದಲ್ಲಿ ಆಳವಡಿಸಿಕೊಳ್ಳುವ ಅಂಶಗಳೇನು ಎಂಬ ಉತ್ತಮ ಮಾಹಿತಿ ನೀಡುತ್ತಾ ಎಲ್ಲವನ್ನು ವಿಶ್ಲೇಷಣೆ ಮಾಡಿ ತಮ್ಮ ನುಡಿಯಲ್ಲಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಕು. ವಾಣಿ ಎಂ. ಎಸ್. ಪ್ರಾರ್ಥನೆ ಸಲ್ಲಿಸಿದರು ಹಾಗೂ ಕಾರ್ಯಕ್ರಮದ ನೀರ್ವಹಣೆ ಜವಾಬ್ದಾರಿ ಸುಹಾಸ್ ಎಂ. ಕನ್ನಾಯಕನಹಳ್ಳಿ ಮಾಧ್ಯಮ ಸಂಚಾಲಕರು ಅಚ್ಚುಕಟ್ಟಾಗಿ ನೇರವೇರಿಸಿ ಕೊಟ್ಟರು ಸರ್ವರನ್ನು ಪ್ರೀತಿ ಪೂರ್ವಕವಾಗಿ ಕು. ನೇತ್ರಾವತಿ ನೆಲ್ಲಿಕಟ್ಟೆ ಕಾರ್ಯಕಾರಿ ಸದಸ್ಯರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ನೇರನೇರಿಸಿದರು. ವಂದನಾರ್ಪಣೆ ಕಲ್ಲೇಶ್ ನಂದಕಲಾ ಮಾಡಿದರು ಕಥಾ ಸಂವಾದ ಕಾರ್ಯಕ್ರಮದಲ್ಲಿ ಒಟ್ಟು ೪೫ ಕವಿಗಳು ಭಾಗವಹಿಸಿದ್ದರು.


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...