ಶನಿವಾರ, ಜೂನ್ 19, 2021

ಹೊಂಗನಸು (ಕವಿತೆ). - ಕಟ್ಟೆ ಎಂ ಎಸ್ ಕೃಷ್ಣ ಸ್ವಾಮಿ.

*ಹೊಂಗನಸು*

ಕನಸಿನಲಿ ಬಂದ ನನ್ನವಳೇ
ಹೃದಯದ ಕದವ ತಟ್ಟಿ ಕಾಡಿದವಳೇ,,
ನಿದ್ರಾಯ ಕದ್ದು ಸವಿ ಮುತ್ತ
ನೀಡಿ ಕತ್ತಲಲಿ ಮಾಯವಾದವಳೇ,,//೧//

ಮಿಡಿಯುವ ಮನಸಿಗೆ ಹತ್ತಿರವವಳೇ
ನೆನಪಿಸಿ ಬಡಿತವ ಹೆಚ್ಚಿಸಿದವಳೇ,, 
ಕ್ಷಣಕ್ಷಣ ಬಂದು ಹೃದಯವೀಣೆ ಮೀಟಿ 
ಕಂಗಳ ತೆರೆಯುವ ಮುನ್ನ ಮಾಯವಾದವಳೇ,,//೨// 

ನಯನ ಮುಚ್ಚಿದರೆ ನಿನ್ನದೇ
ವಿಧವಿಧ ಸೊಬಗಿನ ಭಾವಚಿತ್ರ,, 
ಚಿತ್ತದೊಳಗೆಲ್ಲ ಕಲ್ಪನೆಯ ರೂಪ 
ಭಾವಲಹರಿಯ ಅಂದದ ಚಿತ್ರ,,//೩//

ನೇತ್ರ ಕಣ್ಣೆವೆಯ ಚಂದದ ಸೆಳೆತ
ಮೇಲ ನಾಟ್ಯದ ಮಯೂರಿ ಕುಣಿತ,,
ತುಟಿಯಂಚಲಿ ಶೋಭಾಗಿನ ಮಾಟ
ಮನಸಿನ ಹೊಂಗನಸಿನ ನೋಟ,,//೪//

✍️🌻 ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ  ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...