ಶನಿವಾರ, ಜೂನ್ 19, 2021

ಮನೆ ಮನಗಳ ಯೋಧ (ಕವಿತೆ). - ರಂಜಿತಾ ಕೆ ಎಂ

"ಮನೆ ಮನಗಳ ಯೋಧ "

ದೈರ್ಯಕೆ ಇವನದೆ
ಹೆಸರಿಡಲೇ ....?
ಕೈ ಹಿಡುದು ನಡೆಸಿದ
ದೇವರೆಂದುಬಿಡಲೇ ...?

ಏನೆಂದರೂ ಸಾಲದು....!!
ವರ್ಣಿಸಲಾಗದ ತ್ಯಾಗ ಅವನದು....!!

ಬಾಳ ಹಾದಿಯಲಿ 
ಗೋಳ ನುಂಗಿದವನು....!!
ಬದುಕ ಬಂಡಿಯ
ಮೆಲ್ಲಗೆ ಸಾಗಿಸಿದವನು...!!

ಜೀವನದ ಹಾದಿಯಲಿ
ಅಲ್ಲಲ್ಲಿ ಗುಂಡಿಗಳಿದ್ದವು ....!!
ಹೇಳತೀರದಷ್ಠು ಬಂಡೆಗಳಿದ್ದವು .....!!
ಇನ್ನಾರದೋ ಕೆಟ್ಟ ಕಣ್ಣು
ಮೈ ತುಂಬೆಲ್ಲಾ ಮಾಗಿದ ಹುಣ್ಣು ...!!

ನೋವೆಲ್ಲವ ಸಹಿಸಿಕೊಂಡು
ತನ್ನೊಳಗೆ ಇರಿಸಿಕೊಂಡು
ಬಾಳ ಪಯಣವ ನಡೆಸಿದವ
ಕೃಷ್ಣನಂತೆ ಜೀವನದ ಬಂಡಿಗೆ ಸಾರಥಿಯಾದವ....!!

ನೆರೆಯ ಹಾವಳಿಗೆ ಸಿಕ್ಕು ...!!
ಹೊಲದ ಚಳಿಗೆ ಕಂಬಳಿಯ ಹೊತ್ತು ....!!
ಎಷ್ಠೋ ರಾತ್ರಿಗಳ ನಿದ್ದೆಯ ಮರೆತು, ಉಸಿರನೆ ತೇದು, ಪೈರನು ಕಾದು ....!!
ಮಕ್ಕಳ ಹೊಟ್ಟೆಗೆ ಹಿಟ್ಟಾದವ .....!!!!

ಸಂಬಂಧಗಳ ತೇರಿಗೆ
ಮಮತೆಯ ಕಳಸವ ತೊಡಿಸಿ....
ಗೌರವದಿ ಎಲ್ಲರ ಕಾಣುವನಿವ.....

ಕುಂಕುಮದಿ ಹಣೆಯ ಅಲಂಕರಿಸಿದವ......
ತಾಳಿಯಲಿ ಎದೆಯನೇರಿದವ.....
ಮೂಗುತಿಗೆ ಹೊಳಪಾದವ......
ಮುಡಿಯ ಹೂ ತಾನಾಗುತಲಿ
ನನ್ನಮ್ಮನ ಸೌಭಾಗ್ಯಕೆ ಉಸಿರಾದವ.....!!

ಇವನೆ ನನ್ನಪ್ಪ.......!!!!!!!

- ರಂಜಿತ ಕೆ ಎಂ.
ದೂ : 6363232454.


(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

3 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...