ಭಾನುವಾರ, ಜೂನ್ 20, 2021

ಯುವ ಪ್ರತಿಭೆ ಸಿಂಚನ ಮೈಸೂರು.(ಲೇಖನ). - ರಾಜು ಎಸ್ ಸೂಲೇನಹಳ್ಳಿ

ಯುವ ಪ್ರತಿಭೆ ಸಿಂಚನ ಮೈಸೂರು

ನಾ ಕಂಡ ಹಲವು ಕ್ಷೇತ್ರಗಳಲ್ಲಿ ಪ್ರತಿಭೆ ಅನಾವರಣಗೊಳಿಸಿ ಸಾಧಿಸುವ ಯುವ ಕವಯಿತ್ರಿ ಸಿಂಚನ ಮೈಸೂರು.
ಸಾಹಿತ್ಯ ಪಾದಾರ್ಪಣೆ ಮಾಡಿದಾಗಿನಿಂದ ಆದೆಷ್ಟೋ ಕವಿಗಳು ತಮ್ಮ ಸ್ವ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಗುರುತಿಸಿಕೊಂಡು ಬೆಳೆದಿರುವುದು ಅಂತಹವರು ನಮ್ಮ ಸಂಗಡ ಬಂದಾಗ ನನ್ನ ಕೈಲಾದ ಸಹಾಯ ಹಾಗೂ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿದ್ದೇನೆ. ಹಾಗೇ ನನಗೆ ಪರಿಚಯ ಆದವರಲ್ಲಿ ಕು. ಸಿಂಚನ ಮೈಸೂರು ಕೂಡಾ ಒಬ್ಬರು ಇವರು ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಗೊರಹಳ್ಳಿ ಎಂಬ ಗ್ರಾಮದ ಕವಯಿತ್ರಿ ಅಪ್ಪಟ ಗ್ರಾಮೀಣ ಪ್ರತಿಭೆ ಬಾಲ್ಯದಿಂದಲೇ ಹಲವು ಹವ್ಯಾಸಗಳನ್ನು ರೂಢಿಸಿಕೊಂಡು ಬೆಳೆಯುವ ಹಂಬಲದಿಂದ ತಾನು ಪ್ರೌಢಶಾಲೆ ಮುಗಿಸಿ ತದ ನಂತರ ಉನ್ನತ ವ್ಯಾಸಂಗ ಮಾಡುತ್ತಿರುವ ಇವರು ಸದ್ಯ ಮಹಾರಾಣಿ ಪ್ರಥಮ ದರ್ಜೆ ಕಾಲೇಜು ಮೈಸೂರು ಟೌನ್ ನಲ್ಲಿ ಅಂತಿಮ ವಾಣಿಜ್ಯ ಶಾಸ್ತ್ರ ವಿಧ್ಯಾರ್ಥಿನಿಯಾಗಿದ್ದು ತನ್ನದೇ ಛಾಪು ಮೂಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುತ್ತಾ ಪ್ರಶಸ್ತಿ ಪ್ರದಾನ ನಂತರ ಪ್ರಮಾಣ ಪತ್ರ ಗಳಿಸಿರುತ್ತಾರೆ. ಅಷ್ಟೇ ಅಲ್ಲದೇ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸದಸ್ಯರು ಆಗಿ ಸೇವೆಯನ್ನು ಸಲ್ಲಿಸುವ ಮೂಲಕ ಸಾಮಾಜಿಕ ವಲಯದಲ್ಲಿ ತನ್ನ ಸೇವೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಸಾಹಸ ತರಬೇತಿ ಶಿಬಿರ ಮೂರು ದಿನಗಳ ಕಾಲ ಭಾಗವಹಿಸಿ ನುರಿತ ತರಬೇತುದಾರರ ಮೂಲಕ ಅನುಭವ ಪಡೆದಿದ್ದಾರೆ. ಇದಲ್ಲದೇ ತನ್ನ ಓರಗೆ ಗೆಳತಿಯರೊಡನೆ ಕೂಡಿಕೊಂಡು ಒಂದು ಕಿರುಚಿತ್ರ ನೀರ್ಮಿಸಿ ತಾನೇ ನೀರ್ದೇಶನ ಮಾಡಿ ಒಳ್ಳೆಯ ಸಂದೇಶ ಸಮಾಜಕ್ಕೆ ಸಾರಿದ್ದಾರೆ. ಎಲ್ಲಾ ಕನ್ನಡ ಸಾಹಿತ್ಯ ಬಳಗಗಳ ನಡೆಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಅವರಿಂದ ಮೆಚ್ಚುಗೆ ಪಡೆದಿದ್ದಾರೆ. ವಿಧ್ಯಾಭ್ಯಾಸದ ಜೊತೆಗೆ ಸಾಹಿತ್ಯದ ಬಗ್ಗೆ ಆಸಕ್ತಿ ತೋರಿಸುತ್ತಾ ಸುಮಾರು ಇನ್ನೂರಕ್ಕೂ ಹೆಚ್ಚು ಕವನಗಳನ್ನು ಸಾಮಾಜಿಕ ಚಿಂತನೆ ಯೋಚಿಸಿ ಕವಿತೆಗಳು ಒಳ್ಳೆಯ ಸಂದೇಶ ಸಾರುವ ರೀತಿ ಬರೆದಿದ್ದಾರೆ. ಹಾಗೆಯೇ ಪ್ರತಿ ನಿತ್ಯ ಅನೇಕ ಅವಕಾಶಗಳು ಕೊಡುವ ಸಂಗತಿಗಳು ಜೊತೆಗೆ ಮಾಹಿತಿ ಕಲೆ ಹಾಕಿ ಸರ್ವರಿಗೂ ತಲುಪಿಸುತ್ತಾರೆ. ಇವರಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಅಂಶಗಳನ್ನು ಕಾಣಬಹುದು. ಪ್ರತಿಯೊಬ್ಬರ ಬಗ್ಗೆ ಅತೀವ ಕಾಳಜಿ ಹೊಂದಿರುವ ನಿಸ್ವಾರ್ಥ ಪ್ರೇಮದ ಪ್ರತೀಕ ಇವರೇ ಎನ್ನಬಹುದು. ನಿರಂತರ ಚಟುವಟಿಕೆಗಳು ಮಾಡುವ ಇವರ ವೈಖರಿ ನಿಜಕ್ಕೂ ಶ್ಲಾಘನೀಯ. ಸಿಂಚನ ಅವರ ಕೆಲಸ ಕಂಡು ನಮ್ಮ ಸಂಸ್ಥೆಯಾದ ಕರುನಾಡ ಹಣತೆ ಕವಿ ಬಳಗ ರಾಜ್ಯ ಘಟಕ ಚಿತ್ರದುರ್ಗ ವತಿಯಿಂದ ಆಯೋಜಿಸಿದ್ದ ಎರಡನೇ ವಾರ್ಷಿಕೋತ್ಸವ ಸಮ್ಮೇಳನ ಕಾರ್ಯಕ್ರಮದಲ್ಲಿ ಸಮಗ್ರ ಸೇವೆಯನ್ನು ಪರಿಗಣಿಸಿ 'ಕರುನಾಡ ಕಣ್ಮಣಿ' ಎಂಬ ರಾಜ್ಯ ಪ್ರಶಸ್ತಿ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 ಇವರ ಸೇವೆ ಹೆಚ್ಚು ಆಗಲಿ ಎಂದು ಪ್ರೋತ್ಸಾಹ ನೀಡಿದೆವು. ನನ್ನ ಕನಸಿನ ಸಂಸ್ಥೆ ಆದ ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ನೊಂದಣಿ ಮಾಡಿಸಿಕೊಂಡು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಿ ಆದರಲ್ಲಿ ಪ್ರಕಾಶನ ಬಹು ದೊಡ್ಡ ಹುದ್ದೆಯಾದ 'ಪ್ರಧಾನ ಮಹಿಳಾ ಸಂಚಾಲಕರು' ಆಗಿ ಕು. ಸಿಂಚನ ಅವರನ್ನು ಸರ್ವಾನುಮತದ ಮೂಲಕ ಆಯ್ಕೆ ಮಾಡಲಾಯಿತು. ಅಷ್ಟೇ ದೊಡ್ಡ ಜವಾಬ್ದಾರಿ ನೀಡಿ ನಿಭಾಯಿಸಲು ಜೊತೆಗೆ ಕನ್ನಡ ನಾಡು ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ.  ಆಯ್ಕೆ ಆದಾಗಿನಿಂದ ಉತ್ತಮವಾಗಿ ಕಾರ್ಯ ನೀರ್ವಹಣೆ ಮಾಡುತ್ತಿದ್ದಾರೆ ಇವರ ಕೆಲಸಕ್ಕೆ ನಮ್ಮ ತನುಶ್ರೀ ಪ್ರಕಾಶನ ವತಿಯಿಂದ ಸಿಂಚನ ಅವರ ಚೊಚ್ಚಲ ಕೃತಿ ' ಆತ್ಮದ ಆತ್ಮೀಯಳು' ಎಂಬ ಕವನ ಸಂಕಲನ ಸಿದ್ದ ಪಡಿಸಿ ಪ್ರಕಾಶನ ಅಡಿಯಲ್ಲಿ ಮುದ್ರಣ ಗೊಳಿಸಿ ಸಿದ್ದ ಮಾಡಿ ಲೋಕಾರ್ಪಣೆ ಮಾಡುವ ಪ್ರಗತಿಯಲ್ಲಿದೆ. ಸಧ್ಯದಲ್ಲೇ ತನುಶ್ರೀ ಪ್ರಕಾಶನ ಸಂಸ್ಥೆಯ ಉಧ್ಘಾಟನಾ ಕಾರ್ಯಕ್ರಮ ಹಾಗೂ ರಾಜ್ಯ ಪ್ರಶಸ್ತಿ ಪ್ರಧಾನ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಿಸಿ ಸಾರ್ಥಕತೆ ಮಾಡಬೇಕಿದೆ. ನಮ್ಮ ಕರುನಾಡ ಹಣತೆ ಕವಿ ಬಳಗ ಮೈಸೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗಿ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರ ಸಾಧನೆ ಉನ್ನತ ಶಿಖರದ ಎತ್ತರಕ್ಕೆ ತಲುಪಲಿ ನಾವು ಸಾಧ್ಯ ಆದ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತೇವೆ ಎಂದು ಭರವಸೆ ನೀಡುತ್ತೇನೆ. ಒಳ್ಳೆಯ ಹೆಸರು ಆಗಲಿ ಎಂದು ಆಶಿಸುತ್ತೇನೆ. - - 

- ಎಸ್. ರಾಜು ಸೂಲೇನಹಳ್ಳಿ, ಕಾದಂಬರಿಕಾರ.
ದೂ: 9741566313.



(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...