ಸೋಮವಾರ, ಜೂನ್ 21, 2021

ತಾಯಿಯ ಮಡಿಲು (ಕವಿತೆ). - ಶ್ರೀ ಸೋಮಶೇಖರ ಹ ರಾಂಪೂರ.

ತಾಯಿಯ ಮಡಿಲು

ಹೆತ್ತಳು ಹೆತ್ತಮ್ಮ ಮುತ್ತೊಂದು
ಕಕ್ಕುಳಲ್ಲಿ ಹೊತ್ತಳು ನಗುವಿಂದ
ಕರಳ ಕುಡಿ ನೋಡಿ ಸಂತಸದಿ
ತಾಯಿಯ ಹರುಷ ನೂರು ವರ್ಷ!

ಕಣ್ಣಿಗೆ ಕರಿಕಾಡಿಗೆ ಹಚ್ಚುತಲಿ
ಗಲ್ಲಕ್ಕೆ ಬಿಂದು ಇಟ್ಟು ಚೆಂದದಿ
ಅಂಗಾಲಕ್ಕೆ ನಕ್ಷತ್ರವ ಇಡುತ
ನೆದರಾಗದಿರಲೆಂದು ಹೇಳುತ!

ಅಕ್ಕರೇಯ ಲಾಲಿಯ ಹಾಡುತ
ಊರಿನ ರಾಜ ನನಮಗ ಎನ್ನುತ
ಎದೆಯ ಅಮೃತವ ಉಣಿಸುತ
ಕಂದನ ಮುದ್ದು ಮುದ್ದಾಡಿಸುತ!

ತೊಡೆಯ ತೊಟ್ಟಿಲವ ಮಾಡಿ
ಆಡಿಸದರ ಮುದ್ದು ಕಂದನೀಗ
ಕಿಲ-ಕಿಲ ನಗುತಲಿವುದು ಕೂಸು
ಕೂಸೇ ಕಾಶಿಯೆಂದು ನುಡಿಯುತ!

ಅಮ್ಮನ ಅಪ್ಪುಗೆಯಲಿ ಕಂದ
ಜಗ-ಮಗ ಹೊಳೆಯುತ ಮುತ್ತ
ನಲಿ-ನಲಿದು ಕೈ ಬೆರಳು ಚಿಪುತ
ಮಲಗಿತ್ತು ಕಂದ ಅಮ್ಮನ ಅಪ್ಪುಗೆಗೆ!


- ಶ್ರೀ.ಸೋಮಶೇಖರ.ಹ.ರಾಂಪೂರ
ಸಹ ಶಿಕ್ಷಕರು ಎಚ್.ಪಿ.ಎಸ್.ಗುಂದಗಿ ಸಾ.ಆಸಂಗಿಹಾಳ ತಾ.ಸಿಂದಗಿ ಜಿ.ವಿಜಯಪೂರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...