ನಾ
ಕಂಡ ಅಂಬೇಡ್ಕರ್
ಅಂಬೇಡ್ಕರ, ಅಂಬೇಡ್ಕರ ನಾ ಕಂಡೆ
ನಿಮ್ಮನ್ನು ಊರ ಆಚೆ ಗಿಡ ಘಂಟಿಗಳ
ಮಧ್ಯದಲ್ಲಿ; ಉರಿ ಬಿಸಿಲು, ಗಾಳಿ
ಮಳೆ ಲೆಕ್ಕಿಸದೆ ನಿಂತಿದ್ದ ಸಿಮೆಂಟ್
ಗೋಡೆಯ ಮೇಲೆ ಭಾವ ಚಿತ್ರದಲ್ಲಿ;
ಅದಕ್ಕೆ ಕಟ್ಟಿದ್ದರು ಧನಕರುಗಳನ್ನು.
ಸಾಹೇಬ…… ಬಾಬಾ ಸಾಹೇಬ
ನೀವು ಅದ್ಬುತ ಶಕ್ತಿ , ಬಿಸಿಲಲ್ಲಿ ನಿಂತರೂ
ನಿಮ್ಮ ನೆರಳಿನಲ್ಲಿ ಧನ ಕರುಗಳು ಮೇವು ತಿನ್ನುತ್ತಾ
ವಿಶ್ರಾಂತಿ ಪಡೆಯುತ್ತದ್ದವು.
ಈ ಘಳಿಗೆ ನೆನಪಿಸಿತು , ವಿಧಾನ ಸೌಧದ
ಮುಂದೆ ಇರುವ ನಿಮ್ಮ ಪುತ್ಥಳಿ ,
ಅದರ ಹಿಂದಿರುವ ನಾಯಕರು !
ಭಾವ ಚಿತ್ರದ ಗೋಡೆಗೆ ಸುಣ್ಣ ಬಣ್ಣ ಕಳಚಿ
ಧನಕರುಗಳು ಇಟ್ಟಿರುವ ಸಗಣಿ ಮೆತ್ತಿತು!
ಸಗಣಿ ತಿಪ್ಪೆಗಾಕಿದರೆ, ಗೊಬ್ಬರ ಸಿಕ್ಕೀತು
ಗೋಬ್ಬರದಿಂದ ಆರೋಗ್ಯಕರ ಆಹಾರ ಬೆಳೆದ ರೈತ!
ನಮ್ಮ ನಾಯಕರು ಹಚ್ಚುವ ಸುಣ್ಣ- ಬಣ್ಣದ
ತೇಪೆಗೆ , ತೋರಿಕೆ ಎಂಬ ಪ್ಲಾಸ್ಟೀಕು ವಸ್ತು
ಬಳಿಸಿದರು.
ಅದು ತಿಪ್ಪೆಗಾಕಿದರೆ, ಗೊಬ್ಬರವಾಗುವುದಿಲ್ಲ,
ಬದಲಿಯಾಗಿ ಪರಿಸರಕ್ಕೆ ಮಾರಕವಾಗಿ
ಕೆಡೆಸೀತು ಪ್ರಕೃತಿಯನ್ನು.
ನಿಮ್ಮ ಭಾವಚಿತ್ರದ ಮುಂದೆ
ಎಂದೂ ಕಂಡರಿಯದ ಜನ
ಧನಕರುಗಳು ಮಾಯವಾಗಿ
ಜನನಾಯಕರು ಹಾಜರಿದ್ದರು!
ಭಾವಚಿತ್ರದ ಗೋಡೆ ಬಣ್ಣ ಬಣ್ಣಗಳಿಂದ
ರಂಗೇರಿತ್ತು! ನಿಮ್ಮ ಹಸನ್ಮುಖಿ ಚಿತ್ರ
ನೀಲಿ ಬಣ್ಣದಲ್ಲಿ ವಜ್ರದಂತೆ ಕಂಗೊಳಿಸುತಿತ್ತು.
ಆ ನೀಲಿಗೂ ಬಳಸಿದರು
ರಸಾಯನ ಈ ನಮ್ಮ ನಾಯಕರು.
ಭಜನೆ , ಭಜನೆ ! ಬಾಬಾ ಸಾಹೇಬ
ನಿಮ್ಮ ಭಜನೆ ಅಂದು ೧೪ ರ
ಎಪ್ರಿಲ್ , ಒಂದು ತಿಂಗಳು ಕಳೆಯುವ
ವರೆಗೂ ಸದಾ ಪಠಣ !
ತೋರಿಕೆಯ ಪಠಣವ ಮಾಡಿದರು
ಸುಳ್ಳು ಆಶ್ವಾಸನೆ, ನೀಡಿ ಭಾಷಣ!
ಒಂದು ಆಚರಣೆ ಮತೊಂದಾಯಿತು
ಇದೇ ಚಿತ್ರಣ ಕಛೇರಿ ,ಸೌಧ , ದೇಶದಲ್ಲೆಡೆ
ತೋರಿಕೆಯ ಸ್ಮೃತಿ.
ಭಾವಚಿತ್ರದ ಮೇಲೆ ಸಂಘಟನೆ ಪದ
ಮುಚಲ್ಪಟ್ಟಿತು, ಧನ ಕರುಗಳ ಸಗಣಿಯಿಂದ !
ನಿಮ್ಮ ಚಿಂತನೆಗಳಿಗೆ ಪ್ರಸ್ತುತ ಸಂಘಟನೆಗಳು
ಪರಿಷ್ಕರಣೆ ಎಂದೇಳಿ ಸ್ವಾರ್ಥ- ಸಿದ್ದಾಂತ ಬಳಕೆ
ಯಾಗುವುದು ವಿರೋಧ ,ಎಂಬ ಅರಿವು
ಧನಕರುಗಳಿಗಿದು ಅರಿವಾಗಿದ್ದಿರಬೇಕು?
ಸಂವಿಧಾನ ಶಿಲ್ಪಿ
ನಿಮಗೆ ನೂರೂಂದು ನಮನ !
ಭಾವಚಿತ್ರ, ಶಿಲಾವಿಗ್ರಹಗಳಲ್ಲಿ
ಸೀಮಿತ ಗೊಳಿಸಿದ್ದಾರೆ ನಿಮ್ಮನ,
ನಿಮ್ಮ ತತ್ವ ಹಾಗೂ ಚಿಂತನೆಗಳನ್ನು
ಇಟ್ಟಿದ್ದಾರೆ ಬದಿಗೆ!
ಸಂವಿಧಾನದ ಮೂಲ ಆಶಯಗಳನ್ನೇ ಬದಲಿಸಲು
ಹೊರಟ್ಟಿದ್ದಾರೆ ನಮ್ಮವರು .
//ಓ ಮಹಾನ್ ಚೇತನವೇ
ಮತ್ತೆ ಹುಟ್ಟಿ ಬನ್ನಿ //
-
ಹರೀಶ
ಪಿ ಎ ಪಾಳ್ಯಕೆರೆ.(೮೮೮೪೮೭೮೦೬೯)


ಚನ್ನಾಗಿದೆ
ಪ್ರತ್ಯುತ್ತರಅಳಿಸಿSuper brother
ಪ್ರತ್ಯುತ್ತರಅಳಿಸಿ