ಶುಕ್ರವಾರ, ಜೂನ್ 18, 2021

ಜೀವನ ಏಕೆ ಹೀಗೆ ? (ಕವಿತೆ) - ಶಶಿಧರ್ ದಳವಾಯಿ

ಜೀವನ ಏಕೆ ಹೀಗೆ....? 

ನಾವಂದುಕೊಂಡಂತಿಲ್ಲ... 
ಎಲ್ಲವೂ ಇದ್ದಂತೆ ಮಾತ್ರ , ಯಾವುದು ಇಲ್ಲ
ಪ್ರಶ್ನೆ ಗಳು ಮಾತ್ರ , ಉತ್ತರವಿಲ್ಲ .... 

ಕಷ್ಟ ಮಾತ್ರ ,  ಸುಖವಿಲ್ಲ
ಶ್ರಮ ಮಾತ್ರ ,  ಫಲವಿಲ್ಲ 
ನೋವು ಮಾತ್ರ , ನಲಿವಿಲ್ಲ
ಹೋರಾಟ ಮಾತ್ರ , ಗೆಲುವಿಲ್ಲ.... 

ಆಸೆಗಳು ಮಾತ್ರ , ನಿರಾಸೆಗಳೆ ಎಲ್ಲಾ 
ಕನಸುಗಳು ಮಾತ್ರ , ನನಸಾಗೋದಿಲ್ಲ
ಹತ್ತಿರ ಮಾತ್ರ , ಬಹುದೂರ ಎಲ್ಲಾ
ಹಸಿವು ಮಾತ್ರ ,  ಊಟವಿಲ್ಲ.... 

ಬವಣೆ ಮಾತ್ರ , ನಿವಾರಣೆ ಇಲ್ಲ
ಆಕರ್ಷಣೆ ಮಾತ್ರ , ಆದರಣೆ ಇಲ್ಲ
ಸಮಯ ಮಾತ್ರ , ಸಂಮಯವಿಲ್ಲ
ಮಾತುಗಳು ಮಾತ್ರ , ಮನಸ್ಸುಗಳಿಲ್ಲ.... 

ದೇವರು ಮಾತ್ರ , ಭಕ್ತಿ ಇಲ್ಲ 
ಹಬ್ಬ ಮಾತ್ರ , ಹುಗ್ಗಿ-ಸುಗ್ಗಿಗಳಿಲ್ಲ
ಆಚಾರ ಮಾತ್ರ , ವಿಚಾರವಿಲ್ಲ
ಸಂಪ್ರದಾಯ ಮಾತ್ರ , ಸಂಸ್ಕೃತಿ ಇಲ್ಲ.... 

ಸ್ನೇಹಿತರು ಮಾತ್ರ , ಸ್ನೇಹವಿಲ್ಲ
ನಾನು ಮಾತ್ರ , ನನ್ನವರಿಲ್ಲ....... 

✍ ಶಶಿಧರ್ ದಳವಾಯಿ 
      ಎನ್. ಮಹದೇವಪುರ
      ಚಿತ್ರದುರ್ಗ. 8217849090



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450, ಸಂಪಾದಕರು ವಿ ಮ ಸಾ ಪ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...