ಭಾನುವಾರ, ಜೂನ್ 20, 2021

ಕನವರಿಕೆ (ಕವಿತೆ). - ಸಂಗೀತ ಕೌಶಿಕ್



ಕನವರಿಕೆ

ಈ ಸಾಲುಗಳು ಅಪ್ಪನಿಗಾಗಿ 
ಬರೆದುಕೊಂಡ  ನನ್ನ ಮನದ ಕನವರಿಕೆ 
ನನ್ನ ಅಪ್ಪ ಸಾವಿಲ್ಲದ ಸರದಾರ.
ಭೌತಿಕವಾಗಿ ನನ್ನೊಡನೆ ಇಲ್ಲದಿದ್ದರೂ
ನನ್ನ ನಡತೆಯಲ್ಲಿ ಸದಾ ಜೀವಂತ.
ಎದೆಗೆ ಒದ್ದು ನಗುತಿದ್ದ ನನ್ನನು
ಎತ್ತಿ ಮುದ್ದಾಡಿದ ನನ್ನ ಅಪ್ಪ.
ಸಾಹುಕಾರ ಅಲ್ಲ ನನ್ನಪ್ಪ ನಿಜ,
ಆದರೆ ನನ್ನ ಮೇಲಿನ ಪ್ರೀತಿ ಎಲ್ಲದಕ್ಕೂ ಮೀರಿದ್ದು.

ನಮ್ಮನು ಅಗಲಿ ಇಷ್ಟು ವರ್ಷಗಳಾದರೂ
ಹಸಿಯಾಗಿದೆ ಅಪ್ಪನ ನೆನಪು
ಇಂದು ದೊಡ್ಡ ಮನೆಯಲ್ಲಿದ್ದರೂ
ನಿನ್ನ ಪುಟ್ಟ ಅಂಗಳದಲ್ಲಿ ಆಟವಾಡಿದ ನೆನಪು .
ತರ ತರವಾದ ರುಚಿಗಳು ಸವಿದರೂ
ನೀನು ಕೊಡಿಸುತ್ತಿದ್ದ ಮಿಟಾಯಿಯ ನೆನಪು.
ನಾವು ಸಮಯಕ್ಕೆ ತಿನ್ನುವ ಸಲುವಾಗಿ
ನೀನು ಶಕ್ತಿ ಮೀರಿ ದುಡಿದ ನೆನಪು .

ನನ್ನ ಬಳಿ ಬಗೆಬಗೆಯ ಉಡುಗೆಗಳಿದ್ದರೂ
ನೀನು ಕೊಡಿಸಿದ್ದ ಫ್ರಾಕ್ ನೆನೆದು ಕಣ್ಣರಳಿಸುವೆ.
ಇಂದು ಹಾರಾಡಬಲ್ಲ ವಯಸ್ಸಾದರೂ
ನಿನ್ನ ಕೈ ಹಿಡಿದು ನಡೆದ ನೆನಪು.
ಇಂದು ಎಷ್ಟು ಸಂಪಾದನೆ ಇದ್ದರೂ
ನೀನು ಕೊಡುತ್ತಿದ್ದ ಒಂದು ರೂಪಾಯಿಯ ಮೌಲ್ಯ ಅಧಿಕ .
ಇಂದಿನ ನನ್ನ ಏಳಿಗೆಗೆ ನಿನ್ನ ಯವ್ವನವೆ ಬಂಡವಾಳ.
ನನ್ನ ಸುಖದಲ್ಲಿ ನಿನ್ನ ಕೋಪದ ನೆನಪು,
ದುಖದಲ್ಲಿ ನಿನ್ನ ಪ್ರೀತಿಯ ನೆನಪು.
ಒಟ್ಟಿನಲ್ಲಿ ನಿನ್ನ ನೆನಪುಗಳು ಜೀವನದ ನಾಡಿಮಿಡಿತಗಳು.
ಗಾಂಭೀರ್ಯತೆ ನಿನ್ನ ಕವಚ , ಮೌನವು ನಿನ್ನ ಭಾಷೆ
ನಾನು ನನ್ನ ಮನೆಯ ರಾಣಿಯಾದರೂ
ಸದಾ ನಿನ್ನ ಮನೆಯ ಯುವರಾಣಿಯಾಗಿರಲು ಆಸೆ ಅಪ್ಪ.
                                                                                              -   ಸಂಗೀತ ಕೌಶಿಕ್. ಬೆಂಗಳೂರು


( ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ‌ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...