ಅಮ್ಮನ ಬೆವರಿನ ಘಮಲು
ಗೋಧೂಳಿಯ ಕಾಲದೊಳು
ಅಡಗುತಿಹನು
ಮೋಡದ ಬುಟ್ಟಿಯೊಡಲೊಳಗೆ,
ಕಾಯಕದಲಿ ನಿರತನಾದವ
ಗೂಡು ಸೇರುವ ತವಕದಲಿ
ಅವಸರಿಸುವ ಕಂದನ,
ಕಿರುಬೆರಳಿಡಿದು
ಕರೆದೊಯ್ಯುವ
ಅವ್ವನ ಬೆವರಿನ
ಘಮಲಿಗೆ
ತಲೆ ಮೇಲೆ ಹೊತ್ತ ಬುಟ್ಟಿಯ
ಸೇರಿದನು, ಮುಳುಗಲು ಮರೆತ
ಸೂರ್ಯನು!
-ವಿಜಯಲಕ್ಷ್ಮಿ ಡೋಣಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ತುಂಬಾ ಚೆನ್ನಾಗಿದೆ ಮೇಡಂ
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ