ಸ್ಮಶಾಣ ಯಾತ್ರೆ
---------------------
ನಂಜಾದ ತಾಯಿಯ ಎದೆಗೂಡು
ಸೊರಗಿ ನಿಟ್ಟುಸಿರು ಬಿಡುತ್ತಿದ್ದಾಳೆ
ಕಪ್ಪು ಶಿಲೀಂಧ್ರಗಳು ಮೊಲೆಯೆಲ್ಲಾ ಗಾಯಾ…..
ಮುಖವಾಡ ಧರಿಸಿ ಮೌನವಾಗಿದ್ದಾಳೆ
ಅದು ಬರಿಯ ಮೌನವಲ್ಲ…..!! ಶ್ಮಶಾಣಮೌನ
ಜೀವಗಳ ಜಾತ್ರೆ…ಬರಿಯ ಶವಗಳದೇ ಯಾತ್ರೆ
ಸಾಗಿವೆ ಸಾಗರವಾಗಿ
ನಾಲ್ಕು ಚಕ್ರದ ಬಂಡಿಯ ಒಳಗೆ..ಚೀಲ ಮುಚ್ಚಿಕೊಂಡು
ನಿಂತ ಉಸಿರುಗಳ ಜಾತ್ರೆಯಲ್ಲಿ ಜೊತೆಗೆ ಯಾರೂ ಇಲ್ಲ…
ಸಂಬಂಧಗಳ ಬಾಗಿಲಿಗೂ ಮುಳ್ಳು
ಪಿಂಡಗಳಿಡುವ ಕೈಗಳೇ ಕುಸಿದಿವೆ
ಚೆಟ್ಟಗಳಿಗೆ ಬೊಂಬುಗಳ ಮುನಿಸ್ಸು
ತೂತು ಬಿದ್ದ ಸಂಪ್ರದಾಯದ ಮಡಕೆಗಳಿಗೆ
ನೀರೆ ಇಲ್ಲ..
ಕವಿದ ಕತ್ತಲೆಯ ಗವ್ವೋ ಎನ್ನುವ ಭಯ
ಯಾವುದೂ ಇಲ್ಲವಿಲ್ಲಿ
ಎಲ್ಲವೂ ಅನರ್ಥದ ವ್ಯರ್ಥ
ಅನರ್ಥಕ್ಕೂ ಅರ್ಥ ಹುಡುಕುವ
ಹುಡುಕಾಟ ಸಾಗಿವೆ ಶ್ಮಶಾಣದತ್ತ
ಇಲ್ಲಿಯೇ ಸ್ವರ್ಗ ಇಲ್ಲಿಯೇ ನರಕ
ಇರುವವರೆಗೂ ಇರುವಿಕೆಯ ಸತ್ಯವ ಕಾಣುವದಷ್ಟೆ ನಿತ್ಯ……..
-- ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
🙏🙏👌👌 ಅರ್ಥಗರ್ಭಿತವಾಗಿದೆ ಗುರುಗಳೇ
ಪ್ರತ್ಯುತ್ತರಅಳಿಸಿಧನ್ಯವಾದಗಳು ☺
ಪ್ರತ್ಯುತ್ತರಅಳಿಸಿ