ಆಧುನಿಕ ವಚನಗಳು.
ಕುಲಕ್ಕೆ ಬೆಲೆ ಯಾಕೆ..?
ಕಸುಬಿಗೆ ಕೊಡು ,
ಕಲ್ಲಿಗೆ ಪೂಜೆ ಯಾಕೆ..?
ಕಲಿಸುವ ಗುರುವಿಗೆ ಮಾಡು!
ಕುಲ ನೋಡಿ ಕಾಣಬೇಡ.!,
ಕುಲಕ್ಕೆ ನೆಲೆ ಇಲ್ಲ ,
ಭೂಮಿಯ ಮೇಲೆ ಕುಳ ಆಕೀ ಕುಲ ಕಿತ್ತು ಹೊರ ಹಾಕಯ್ಯ ವಡ್ಡರ ಸಿದ್ದರಾಮ....!
ನಾನು ಎಂದು ಬೀಗಿದವನು,
ಒಂದು ದಿನ ತಲೆ ಬಾಗಬೇಕು.. !
ತಗ್ಗಿ ನೆಡೆದವ ಹಿಗ್ಗಿ ನೆಡೆಯುವನು,
ನನ್ನದಲ್ಲ ನಿನ್ನದು ಎಂದು ಬಂದವರನ್ನು,
ವಡ್ಡರ ಸಿದ್ದರಾಮ ಸಲಹಬೇಕು...!
ಹಸಿದುಬಂದವರಿಗೆ
ಇಲ್ಲ ಎಂದವರಿಗೆ
ಕಷ್ಟದಲ್ಲಿ ಸಹಕರಿಸದೆ ಇರುವವರಿಗೆ
ಕೊಂಚ ಮಟ್ಟಿಗೆ ಹಸಿವಿನ ಸೂಚನೆ
ಕೊಡಯ್ಯ ವಡ್ಡರ ಸಿದ್ದರಾಮ..!
ಕಾಯಕ ಮಾಡುತ...
ಕಂಡ ಕಲ್ಲನ್ನು ಕೆತ್ತುತ್ತ...
ಅವನು ಆದ ಶಿಲ್ಪಿ
ಕಾಯಕದಲ್ಲಿ ಮಲ್ಲಯ್ಯನ ಕಂಡವರನ್ನು
ಕಣ್ಣುಬಿಟ್ಟು ನೋಡಯ್ಯ ವಡ್ಡರ ಸಿದ್ದರಾಮ...!
ಕರುಣೆ ಇಲ್ಲದವರಿಗೆ
ಕನಕ ದೊರೆತರೆ ಪ್ರಯೋಜನ ಏನು...?
ಮನಸೇ ಕರಗವರಿಗೆ
ಬಾಯಿಯ ಮಾತಿನ ಪ್ರೀತಿ ಇದ್ದರೆ
ಪ್ರಯೋಜನ ಏನು...?
ಅರಿವಿಲ್ಲದ ಜನರಿಗೆ ಏನಿದ್ದರೇನು
ಪ್ರಯೋಜನವಯ್ಯಾ ವಡ್ಡರ ಸಿದ್ದರಾಮ...!
ನಿನ್ನ ಅಂದ ಚಂದ
ಯಾರಿಗೆ ಬೇಕೋ ಕಂದ
ಇಂದು ಇರುವುದು,
ನಾಳೆ ಮುಪ್ಪಾಗುವುದು,
ಸತ್ತಾಗ ಮಣ್ಣಾಗಿ ಹೋಗುವುದು..,
ಮಣ್ಣಲಿ ಮಣ್ಣಾಗುವ ಚರ್ಮಕ್ಕೆ ಯಾಕೆ ಇಷ್ಟು ಮರ್ಮ ವಡ್ಡರ ಸಿದ್ದರಾಮ....!
- ಶ್ರೀ ಅಂಜನ್ ಕುಮಾರ್ ಪಿ ಆರ್. ತುಮಕೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ