ಶನಿವಾರ, ಜುಲೈ 10, 2021

ಏನು ಆನಂದ ಅಲ್ವಾ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗ.

ಏನು ಆನಂದ ಅಲ್ವಾ

ಸುರುಯುವ ಮಳೆ ಹನಿ ಭೂಮಿಗೆ ಬಿದ್ದು
ತಂಪು ಮಾಡುವುದೆ..
ಹರಿಯುವ ನೀರಿನ ಜುಳು ಜುಳು ಕೇಳುತ
ಮನವನಲ್ಲಿ ನಲಿಯುತ್ತಿದೆ

ಕಡಲು ಕುಣಿಯುತ ನದಿಗಳ ಕರೆಯುತ
ಅಲೆಯಲಿ ತೇಲುತ್ತಿದೆ
ಬೀಸುವ ಗಾಳಿಯು ನಲಿಯುತ ಓಡತ
ಕಡಲನು ಮುಟ್ಟುವುದೆ

ಸೂರ್ಯನ ಕಿರಣಕೆ ಅರಳುವ ಹೂವು
ದುಂಬೀಯ ಕರೆಯುವುದೆ
ಚಂದ್ರನ ಕಾಂತಿಗೆ ನೈದಿಲೆ ನಲಿಯುತ
ಹತ್ತಿರ ಕರೆಯುತ್ತಿದೆ

ನೀರಿನ ಮೇಲೆ ತೇಲುವ ದೋಣಿಯು
ಹರುಷದಿ ಚಲಿಸುವುದೆ
ಹಕ್ಕಿಗಳೆಲ್ಲ ಮುಗಿಲನು ಮುಟ್ಟುತ
ಗೆಳೆತನ ಬಯಸುತ್ತಿದೆ

ಬೆಟ್ಟ ಗುಡ್ಡದಿ ಚಿಗುರುವ ಮರಗಳು
ನೆರಳನ್ನು ನೀಡುವುದೆ
ತೂಗತ ಎಲೆಗಳು ಗಾಳಿಯ ಚೆಲ್ಲುತ
ಮುಗಿಲ ಮಳೆಹನಿ ತರಿಸುವುದೆ

- ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...