ಶನಿವಾರ, ಜುಲೈ 10, 2021

ದೇವರು ಹುಡುಕುವ ಮನ (ಕವಿತೆ) - ದಾನೇಶ್ವರಿ ಬಸವರಾಜ ಶಿಗ್ಗಾವಿ.

ದೇವರು ಹುಡುಕುವ ಮನ


ಮನದ ಅಲೆಯಲಿ ಹುಡುಕುತ ಹೊರಟಿರುವೆ ಭಗವಂತನ,
ಭಕ್ತಿಯ ಶಕ್ತಿಯಲ್ಲಿ ಕಾಣುವೆ ಕಲ್ಪನೆಯ ನಂಬಿಕೆಯಲ್ಲಿ,

ಅದೇಕೋ ಕಷ್ಟ ಬಂದಾಗ ಕೈಮುಗಿದು ಬೇಡಿದೆ,
ಸುಖ ಬಂದಾಗ, ಕಾಯಿ ಕರ್ಪೂರ ಗಳೆಂಬ ಲಂಚ ನೀಡಿದೆ ಏನೋ ಎಂದೆನಿಸಿದೆ.

ಒಂದು ದಿನ ಬಂದು ಎದೆಯುಬ್ಬಿಸಿ ಭಗವಂತ ನನ್ನೆದುರು ನಿಲ್ಲಲಿಲ್ಲ,

ನನಗೆ ಅದು ಬೇಕು ಇದು ಬೇಕು ಎಂದು ನನ್ನ ಬಳಿ ಬೇಡಲಿಲ್ಲ,
ಮನದ ಮೂಲೆಯಲ್ಲಿ ಅವನ ಇಲ್ಲವೇನು ಎನಿಸುತ್ತಿದೆ.

ಪಾಪಕರ್ಮಗಳ ಸಾಲಿನಲ್ಲಿ ಹೊರಟಾಗ ಬದುಕಿನ ತುಂಬಾ ತಪ್ಪುಗಳ ಮಾಡಬಾರದು. ಎಂಬ ಮನವರಿಕೆಯ ಭಯಕ್ಕೆ
ನಂಬಿಕೆಯ ನಲಿವಿಕೆಯಾದ ಭಗವಂತ


ಅರಿವಿನ ಮನೆಯಲ್ಲಿ ಅವನಿರುವನೇನು ಎಂದು ಮನದ ಮೂಲೆಯಲಿ ತಲ್ಲಣಗೊಳಿಸಿದೆ ಭಗವಂತನ ಮೇಲಿನ ನಂಬಿಕೆ.


- ದಾನೇಶ್ವರಿ ಬಸವರಾಜ ಶಿಗ್ಗಾವಿ
ಗ್ರಾಮ ಜಲ್ಲಾಪುರ
ತಾಲೂಕು ಸವನೂರು
ಜಿಲ್ಲಾ ಹಾವೇರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...