ಭಾನುವಾರ, ಜುಲೈ 11, 2021

ಮುಂಗಾರಿನ ಸೊಬಗು (ಕವಿತೆ) - ಶ್ರೀಮತಿ ಸರೋಜಿನಿ ಲ ಝಳಕಿ.

ಮುಂಗಾರಿನ ಸೊಬಗು

ಮುಂಗಾರಿನ ಹಂಗಾಮು
ಸ್ರೃಷ್ಠಿಯ ಉದಯದ ಸಂಗ್ರಾಮ
ನವಚೇತನದ ಸಮಾಗಮ
ಬಸಿರುಟ್ಟ ಭೂತಾಯಿಯ ಸಂಭ್ರಮ

ಕಾದ ಇಳೆಗೆ ಮಳೆಯ ಸಿಂಚನ
ಎಲೆ ಉದುರಿ ಚಿಗುರುವ ಕಾನನ
ಹಸಿರುಟ್ಟು ನಲಿಯುವ ವನ
ಸುಂದರ ಸೊಬಗಿನ ರಸದೌತಣ

ಅವನಿ ಸಜ್ಜಾದ ಹೊಸ ಚಿಗುರಿನ
ರೈತ ಸಜ್ಜಾದ ಕಾಳು ಹರುವಿಗೆ
ಮದುವಣಗಿತ್ತಿಯ ಶ್ರೃಂಗಾರ
ಭೂಮಿಗೆ
ನವಿಲು ನರ್ತಿಸಿ ನಮಿಸುತ ಅವನಿಗೆ

ತುಂತುರು ಹನಿಗಳ ಸಂಭ್ರಮ
ಕೆರೆ ಹಳ್ಳ ಕೊಳ್ಳ ಗಳ ಸಂಗಮ
ತುಂಬಿ ಹರಿಯುವ ನರ್ತನ
ಮೇಘಮಾಲೆಯ ದರ್ಶನ

 - ಶ್ರೀಮತಿ ಸರೋಜಿನಿ ಲ ಝಳಕಿ
(ಲಕ್ಷ್ಮೀ ತನಯೆರೋಜಾ) ಎಮ್ ಪಿ ಎಸ್ ಶಾಲೆ ಹಿರೇಬೇವನೂರ ತಾ ಇಂಡಿ ಜಿ ವಿಜಯಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...