ಭರವಸೆ
ಬದುಕುವ ಭರವಸೆ ನನ್ನದು
ಭಗವಂತ ಬದುಕಿನ ಸಾಲಿನಲ್ಲಿ
ನನಗೆ ಏನೇ ಕಷ್ಟಗಳ ನೀಡು
ಬದುಕುವೆ ನಾನು.
ನನ್ನ ಪಯಣ ಹರಿಯುವ ನದಿಯಂತೆ, ಬೆಳಗುವ ಸೂರ್ಯ ನಂತೆ ಅರಳುವ ಮಲ್ಲಿಗೆಯಂತೆ, ಎಷ್ಟೇ ನೋವಿದ್ದರೂ ಬದುಕುವೆ ನಾನು
ಬದುಕಿನ ಬಂಡಿಯಲ್ಲಿ ಬವಣೆಗಳು ಬೆಟ್ಟದಂತೆ ಎದುರಾದರು ಅದನ್ನು
ಒಡೆದು ಹಾಕಿ ಮುನ್ನುಗ್ಗಿ
ಬದುಕುವೆ ನಾನು
ಎಲ್ಲರೂ ನನ್ನಿಂದ ದೂರ ಆದರೂ, ಎಲ್ಲವೂ ನನ್ನಿಂದ ದೂರ ಆದರೂ, ಬದುಕಿನ ನಂಬಿಕೆ ಎಂದಿಗೂ ನನ್ನಿಂದ ದೂರ ಆಗುವುದಿಲ್ಲ ಬದುಕುವೆ ನಾನು
- ದಾನೇಶ್ವರಿ ಬಸವರಾಜ ಶಿಗ್ಗಾವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ