ತಾಯಿಯ ಹಿತವಚನ
ಓ..ಕಂದಾ.. ಕೇಳು ಮಾತೊಂದ
ಈ ತಾಯಿಯ ನುಡಿಯೊಂದ..!!
ಸುಳ್ಳನು ಎಂದು ನುಡಿಯದಿರು
ಸತ್ಯವನಾಡಲು ಮರಿಯದಿರು
ಸುಳ್ಳಿನ ಸುಖವು ಕ್ಷಣಿಕವಾದರೆ
ಸತ್ಯದ ಸುಖವೇ ಶಾಶ್ವತವು!!
ನಿಂದಿಸಿದವರಿಗೆ ಮರು ನಿಂದಿಸಲು
ಎಂದೂ ನೀ ಹೋಗಬೇಡ
ನಿಂದಿಸುವವರೆ ಹಿತೈಷಿಗಳೆಂದು
ಎಂದಿಗೂ ನೀ ಮರೆಯಬೇಡ!!
ಸ್ವಾರ್ಥಿಯಾಗಿ ಬದುಕದಿರು
ಯಾರಿಗು ಮೋಸವ ಮಾಡದಿರು
ಪರರ ಹಿತವನು ಬಯಸುತಿರು
ನಿಸ್ವಾರ್ಥದಿ ಸರ್ವರಿಗು ನೆರವಾಗುತ್ತಿರು!!
ದುಷ್ಟರ ಸಂಗ ಮಾಡದಿರು
ದುಶ್ಚಟವ ನೀ ಕಲಿಯದಿರು
ಸಜ್ಜನರ ಸಂಗ ಹೆಜ್ಜೇನು ಸವಿದಂತೆ
ಎಂಬ ಮಾತು ನೀ ಮರೆಯದಿರು!!
ನಂಬಿದವರನ್ನು ಕೈ ಬಿಡಬೇಡ
ಎಲ್ಲರನ್ನು ನೀ ಬಿಟ್ಟು ಬದುಕಬೇಡ
ಎಲ್ಲರೂ ನಮ್ಮವರೆಂದು
ಎಲ್ಲರೊಂದಿಗೂ ಬೆರೆಯುತ್ತಿರು!!
ಬೇಧ-ಭಾವ ಎಣಿಸದಿರು
ಜಾತಿ-ಧರ್ಮ ಎನ್ನದಿರು
ಎಲ್ಲ ಧರ್ಮದ ಸಂದೇಶ ಒಂದೇ
ವಿಶ್ವಮಾನವ ನೀನಾಗು!!
*ಕೆ ಎನ್ ಅಕ್ರಂಪಾಷ*
ಸಂಪಾದಕರು
ಕರುನಾಡು ನುಡಿ ಮಾಸಪತ್ರಿಕೆ
ಚಿಂತಾಮಣಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ