ಹಳೆಯ ನೆನಪು
ಯೌವನ ತೂಗುತ್ತಿದೆ ಆನಂದದ ಜಾಲಿ
ಸುಖ ನಿದ್ರೆಗೆ ಜಾರುತ್ತಿದೆ ಮುಪ್ಪಿನ ಜೋಕಾಲಿ
ಮತ್ತೆಂದು ಸಿಗದು ಆ ಯೌವನದ ಜಾಲಿ
ಹಳೆಯ ನೆನಪಲ್ಲಿದೆ ಸವಿಸಾರವು ಖಾಲಿ ಖಾಲಿ
ಮತ್ತೆಂದು ಬಾರದು ಹರೆತನವು ಮರಳಿ
ಮುಪ್ಪು ನೆನಪಿಸುವುದು ಹಳೆಯ ಕನಸು
ಎಷ್ಟು ಸೊಗಸೆಂದು ಆಲೋಚಿಸಿದ ನೆನಪು
ಆ ಯೌವನ ಮತ್ತೆ ಬಾರದ ಖಾಲಿ ನೆನಪು ನೆನಪು
ಮುಪ್ಪಾಗಿದೆ ಮರ ನಿನಗೆ ಒಪ್ಪುವುದಿಲ್ಲ
ತೊಪ್ಪೆ ಬಿಟ್ಟಿದೆ ಅಷ್ಟೇ ದೇಹ ಸುಕ್ಕಾಗಿಲ್ಲ
ಮನಸ್ಸಲ್ಲಿ ನಗುವಿದ್ದರೆ ಹಸಿರಾಗುವುದು
ಮುಪ್ಪಾದರು ತಂಗಾಳಿಯ ಸುಖ ನೀಡುವುದು
ಹಣ್ಣೆಲೆಯು ಉದುರಿ ಮಣ್ಣಾಗುವುದೇಕೆ
ಬಣ್ಣ ಬಳಿದಿಲ್ಲ ಹೊನ್ನಾಗುವುದು ಹರೆತನಕೆ
ಬಿನ್ನಾಣಗಿತ್ತಿಯರು ಬಂದು ಕಣ್ಣೆದುರೇ ನಿಂತು
ಸಣ್ಣ ಮಾತಲ್ಲ ನಿನ್ನ ಯೌವನದ ಆ ಹರೆತನ
ಕಾಲು ಸವೆಸಿದರು ನನಗೆ ತಲೆ ನೆರೆಯ ತನಕ
ಮೀಸೆ ಚಿಗುರಿದವು ನನಗೆ ಆ ಹೂವಿನ ತನಕ
ಬಾಣ ಎತ್ತದ ಮೀನನ ಕಣ್ಣಿನೊಳಗೆ ಪಾಂಚಾಲಿಗೆ
ಜಾರಿದಳು ಪಾರ್ಥನ ಪಂಚ ಪಾಂಡವರ ಗೆಲುವಿಗೆ
ಹಳೆ ಮರವು ಚಿಗುರೊಡೆದು ನಗುತ್ತಾವೆ ಚಿಗುರು
ಕಣ್ಣಿನ ರೆಪ್ಪೆಯೊಳಗೆ ಅರಳಿದೆ ಅವಳದೆ ಕದುರು
ಚಿಗುರು ಹೃದಯದಿ ನಗುವು ಮಕರಂದಲ್ಲಿ
ದುಂಬಿಗಳ ಅಲೆದಾಟಕೆ ಮತ್ತೆ ಯೌವನ ನೆನಪಲ್ಲಿ
- ಜಿ ಟಿ ಆರ್ ದುರ್ಗ
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ