ಬುಧವಾರ, ಜುಲೈ 7, 2021

ಹೆಣ್ಣು ಬಾಳಿನ ಕಣ್ಣು (ಲೇಖನ) - ದಾನೇಶ್ವರಿ ಬಸವರಾಜ ‌ಶಿಗ್ಗಾವಿ.

ಹೆಣ್ಣು ಬಾಳಿನ ಕಣ್ಣು


ಎಲ್ಲರೂ ಹೇಳ್ತಾರೆ ಹೆಣ್ಣು ಅಂದ್ರೆ ಬಾಳಿಗೆ ಹುಣ್ಣು ಅಂತ. ಬ್ರೋಣದಿಂದಲೇ ಹೆಣ್ಣು ಮಗುವಾದರೆ ಬೇಡವೆಂದು. ಹಾಗೂ ಅದನ್ನು ಪತ್ತೆ ಹಚ್ಚಿ ತೆಗೆಸುವ ಎಷ್ಟೋ ಜನ ಹಿಂದಿ ನಮ್ಮ ಸಮಾಜದಲ್ಲಿದ್ದಾರೆ. ಈಗ ನಾನು ಹೇಳಲು ಹೊರಟಿರುವ ಲಕ್ಷ್ಮಿಯ ಕಥೆಯು ಕೂಡ ಹೀಗೆ ಪ್ರಾರಂಭವಾಗುತ್ತದೆ. ಸುಮ ಎಂಬ ವೈದ್ಯ ಇರುತ್ತಾಳೆ. ಅವಳ ಮಗ ಹಾಗೂ ಗಂಡನು ಕೂಡ ವೈದ್ಯವೃತಿಯಲ್ಲಿ ಸೇವೆಯನ್ನು ಮಾಡುತ್ತಿರುತ್ತಾರೆ. ಸುಮಾ ತನ್ನ ಮಗನಿಗೆ ಚೆನ್ನಾಗಿ ಓದಿರುವ ಹಾಗೂ ಬಡ ಕುಟುಂಬದ ಒಬ್ಬ ಹೆಣ್ಣು ಮಗಳನ್ನು ತಂದು ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುತ್ತಾರೆ. ವರದಕ್ಷಿಣೆ ಪಡೆಯುವುದಿಲ್ಲ. ಬಡವರ ಮಗಳು ಹಾಗೂ ವಿದ್ಯಾವಂತ ಸೊಸೆ ನಮ್ಮ ಮನೆಗೆ ಬರುತ್ತಿದ್ದಾಳೆ ಎಂದರೆ ಅದು ನಮ್ಮ ಹೆಮ್ಮೆ ಎಂದು ಪ್ರತಿಕ್ಷಣ ಎಲ್ಲರೆದುರು ಹೇಳುತ್ತಿರುತ್ತಾರೆ. ಎಲ್ಲರೂ ಈ ಹುಡುಗಿ ಎಷ್ಟು ಅದೃಷ್ಟವಂತೆ ಒಳ್ಳೆಯ ಕುಟುಂಬದ ಸೊಸೆಯಾಗಿ ಹೊರಡುತ್ತಿರುವ ಇವಳ ಬದುಕು ಬಂಗಾರವಾಗಲಿ ಎಂದು ಊರಿನ ಜನರೆಲ್ಲರೂ ಮಾತನಾಡುತ್ತಿರುತ್ತಾರೆ. ಅವಳು ಕೂಡ ಮನದಲ್ಲೇನೋ ಸಂಭ್ರಮ, ನನ್ನ ತವರಮನೆಗೆ ನಾನು ಯಾವುದೇ ಭಾರದ ಹೊರೆಯಾಗಲಿಲ್ಲ, ಏಕೆಂದರೆ ಗಂಡನ ಮನೆಯವರು ನನ್ನಿಂದ ಯಾವುದೇ ವರದಕ್ಷಿಣೆಗಾಗಿ ಆಸೆಪಡಲಿಲ್ಲ. ನನ್ನ ಗಂಡ ಹಾಗೂ ಅತ್ತೆ ಮತ್ತು ಮಾವ ಎಲ್ಲರೂ ವಿದ್ಯಾವಂತರು. ಅರಿತವರು, ಇಂತಹ ವರ ನೀಡಿದ ಭಗವಂತನಿಗೆ ಚಿರಕಾಲ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಎಂದು ಮನದಲ್ಲಿ ಅವಳು ಪ್ರತಿಕ್ಷಣ ಅಂದು ಕೊಳ್ಳುತ್ತಿದ್ದಳು. ಮದುವೆ ಮರುದಿನ ಮುಂಜಾನೆ ಸ್ವಲ್ಪ ಹೊತ್ತಾಗಿ ಎಂದಳು. ದೇವತೆಯಂತಹ ಅತ್ತೆ ಮಾವ ಆ ಕ್ಷಣದಿಂದಲೇ ಅವಳ ಬದುಕಿಗೆ ದೆವ್ವವಾಗಿ ಕಾಡಲಾರಂಭಿಸಿದರು. ಪ್ರತಿನಿತ್ಯ ಬರುತ್ತಿದ್ದ ಮನೆ ಕೆಲಸದಾಳನ್ನು ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿ. ಅವಳ ಹಣವನ್ನು ಕೊಟ್ಟು ಕಳಿಸಿದರು. ಮನೆಯಲ್ಲಿ ಕೆಲಸ ಮಾಡಲಿಕ್ಕೆ ಒಂದಾಳು ಬಂದಿದೆ ಎಂದರು. ಮುಂಜಾನೆಯ ಕಸ ಗುಡಿಸುವುದರಿಂದ ಹಿಡಿದು ಅವರೆಲ್ಲ ಕೆಲಸವನ್ನು ಹಾಗೂ ಮನೆಯ ಪ್ರತಿಯೊಂದು ಕೆಲಸವನ್ನು ಬಂದ ಸೊಸೆ ಲಕ್ಷ್ಮಿಯು ಮಾಡಬೇಕಾಗಿತ್ತು. ಆದರೆ ಅವಳು ಮಾತ್ರ ಇದು ನನಗೆ ಹೊರೆಯೆಂದು ಒಂದು ದಿನ ನೊಂದುಕೊಳ್ಳಲಿಲ್ಲ. ಪ್ರತಿದಿನ ತನ್ನ ಕಾಯಕವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಲೇ ಇದ್ದಳು. ಮನೆಯವರು ನೀನು ವರದಕ್ಷಣೆ ತಂದಿಲ್ಲ ಎಂದು ಎಷ್ಟೇ ಹಿಂಸಿಸಿದರು. ಅವಳು ತವರುಮನೆಯ ಮನೆಯವರೆ ಎದುರಿಗೆ ಒಂದು ದಿನವೂ ಏನನ್ನು ಹೇಳಿಕೊಳ್ಳಲಿಲ್ಲ. ದಿನ ಕಳೆಯುತ್ತಾ ಅವಳ ತವರು ಮನೆಯವರು ಬಂದರೆ ಅವರನ್ನು ಸುಮಾ ಹಾಗೂ ಅವಳ ಗಂಡ ಮತ್ತು ಮಗ ಬಿಕ್ಷಕರ ಹಾಗೆ ಕಾಣುತ್ತಿದ್ದರು. ಹಾಗಾಗಿ ತವರುಮನೆಯವರು ಕೂಡ ಬರುವುದನ್ನು ನಿಲ್ಲಿಸಿಬಿಟ್ಟರು. ಮನದ ಸಂಕಟವ ಹೇಳಿಕೊಳ್ಳಲು ಯಾರು ಇಲ್ಲದ ಲಕ್ಷ್ಮಿ ಮನಕ್ಕೆ ತುಂಬಾ ನೋವಾಗುತ್ತಿತ್ತು. ನಮ್ಮನ್ನು ಬಡವರಾಗಿ ಹುಟ್ಟಿಸಿದ ಭಗವಂತನಿಗೆ ಪೂಜೆ-ಪುನಸ್ಕಾರ ಎಲ್ಲವ ನೀಡಿ ಏನು ಫಲವೆಂದು ನೊಂದುಕೊಳ್ಳುತ್ತಿದ್ದಳು. ಕೆಲ ಕಾಲ ಕಳೆದ ನಂತರ ಅವಳು ಗರ್ಭವತಿಯಾದಳು ಈ ಸಮಯದಲ್ಲಿ ಅವಳಿಗೆ ಹೇಳಲಾರದ ಸಂಭ್ರಮ-ಸಡಗರ ಮನದಲ್ಲಿ ವಿಷಯವನ್ನು ಅತ್ತೆ ಮಾವ ಹಾಗೂ ಗಂಡನಿಗೆ ಹೇಳುತ್ತಾಳೆ. ಆಗ ಅತ್ತೆ ಪರೀಕ್ಷೆಮಾಡಿ ನೋಡುತ್ತಾಳೆ. ನಿಜವಾಗಿಯೂ ಅವಳು ಗರ್ಭವತಿ ಆಗಿರುವುದು ಎಂದು ಮಗ ಹಾಗೂ ಗಂಡನಿಗೆ ಹೇಳುತ್ತಾಳೆ. ಅದೇಕೋ ಅವಳಿಗೆ ಆ ಕ್ಷಣದಿಂದ ತಳಮಳ, ಸುಮಾ ತನ್ನ ಸೊಸೆ ಹತ್ತಿರ ಕರೆದು ನೋಡಮ್ಮ ನಾಳೆ ಆಸ್ಪತ್ರೆಗೆ ಹೋಗೋಣ ಮಗುವಿನ ಚಕಪ್ ಮಾಡಿಸೋಣ ಎನ್ನುತ್ತಾರೆ. ಮರದಿನ ಸೊಸೆಯನ್ನು ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿ ನೋಡುತ್ತಾರೆ. ಆಗ ಮಗು ಹೆಣ್ಣೆಂಬುದು ತಿಳಿದುಬರುತ್ತದೆ. ಮನೆಗೆ ಅವಳನ್ನು ಕರೆದುಕೊಂಡು ಬಂದು ನೀನು ಕೋಣೆಯಲ್ಲಿರುವ ಮಗುವಿಗೆ ಏನು ಸಮಸ್ಯೆ ಇದೆ ಎಂದು ಹೇಳಿ ಹೊರಗೆ ಬರುತ್ತಾರೆ. ಆಗ ಅವಳಿಗೆ ಮನದಲ್ಲಿ ನೋವು. ಮನದ ನೋವುಗಳನ್ನ ಭುವಿಗೆ ಬರದ ಕಂದನೊಂದಿಗೆ ಮಾತನಾಡುತ್ತಾ ಕೋಣೆಯಿಂದ ಲಕ್ಷ್ಮಿ ಹೊರಬರುತ್ತಾಳೆ. ಆ ಸಮಯದಲ್ಲಿ ಅತ್ತ ಹಾಗೂ ಗಂಡ ಮತ್ತು ಮಾವ ಮಾತನಾಡುತ್ತಾ ಇರುತ್ತಾರೆ. ಆಗ ಅತ್ತೆ ಹೇಳುತ್ತಾಳೆ. ಅವಳ ಹೊಟ್ಟೆಯಲ್ಲಿರುವ ಮಗು ಹೆಣ್ಣು ಅದನ್ನು ತೆಗೆಸಿ ಬಿಡೋಣ ಎಂದು. ಅದಕ್ಕೆ ಅವಳ ಗಂಡ ಹಾಗೂ ಮಾವ ಕೂಡ ಒಪ್ಪುತ್ತಾರೆ. ಸುಮಾ ಹೇಳುತ್ತಾಳೆ ಲಕ್ಷ್ಮಿಯ ದವಾಖಾನೆ ಖರ್ಚನ್ನೆಲ್ಲ ನೋಡಿಕೊಳ್ಳಲು ಅವರಪ್ಪ ನಮಗೆ ಕಂತೆ ಕಂತೆ ಹಣ, ಬಂಗಾರದ ನೀಡಿಲ್ಲ, ಅವಳೊಬ್ಬಳು ಬಡವನ ಮಗಳು, ನಾವು ಏನು ಹೇಳಿದರೂ ಅದನ್ನು ಕೇಳಿಕೊಂಡು ಬಿದ್ದಿರಲೇಬೇಕು ಎಂದು ತಮ್ಮತಮ್ಮಲ್ಲಿ ಮಾತನಾಡುತ್ತಾರೆ. ಇದನ್ನೆಲ್ಲಾ ಕೇಳಿದಂತಹ ಲಕ್ಷ್ಮಿಯ ಮನಕೆ ಸಿಡಿಲು ಬಡಿದಂತೆ ಆಗುತ್ತದೆ. ನಾನು ಹಾಗೂ ನನ್ನ ಮಗುವನ್ನ ಬದುಕಿಸಿಕೊಳ್ಳಬೇಕಾದರೆ. ನಾನು ಈ ಮನೆಯಿಂದಲೇ ಹೊರಹೋಗಬೇಕು ಎಂದು ಯೋಚಿಸಿ ರಾತ್ರಿ ಎಲ್ಲರೂ ಮಲಗಿರುವಾಗ ಮನೆ ಬಿಟ್ಟು ಹೊರಟು ಹೋಗುತ್ತಾಳೆ. ಬರಿಗೈಲಿ ಹೊರಬಂದ ತವರಮನೆಗೆ ಹೋಗುವುದಿಲ್ಲ. ಅಲ್ಲಿಗೆ ಹೋದರೆ ಮರಳಿ ನನ್ನನ್ನು ಗಂಡನ ಮನೆಗೆ ಕಳಿಸುತ್ತಾರೆ .ಎಂದರಿತು ದಾರಿಯಲ್ಲಿ ಹೀಗೆ ಸಾಗುತ್ತಾ ಹೋಗುತ್ತಾಳೆ. ಮರದಿನ ಅವಳಿಲ್ಲದ ಕಂಡು ಮನೆಯಲ್ಲಿ ಎಲ್ಲರು ಗಾಬರಿಗೊಳ್ಳುತ್ತಾರೆ. ಅವರ ತಂದೆಯನ್ನು ಕರೆಸಿ ಹೇಳುತ್ತಾರೆ ನಿಮ್ಮ ಮಗಳು ಯಾರದೋಒಂದಿಗೆ ಓಡಿ ಹೋಗಿದ್ದಾಳೆ ಎಂದು. ಆಗ ಲಕ್ಷ್ಮಿ ಮನೆಯವರು ಆಕ್ರೋಶದಿಂದ ಸುಮಾಳ ಮನೆಯವರನ್ನು ಹೊಡೆಯಲು ಹೋಗುತ್ತಾರೆ. ಹಣದ ಬಲ ಇರುವುದರಿಂದ ಪೊಲೀಸರಿಗೆ ಹೇಳಿ ಲಕ್ಷ್ಮಿಯ ಮನೆಯವರ ಮೇಲೆ ಕೇಸ್ ದಾಖಲು ಮಾಡುತ್ತಾರೆ. ಮನೆಯವರೆಲ್ಲರೂ ಜೈಲಿನೊಳಗೆ ಸೇರುವಂತೆ ಮಾಡುತ್ತಾರೆ. ಅತ್ತ ಮನೆಬಿಟ್ಟು ಹೋದ ಲಕ್ಷ್ಮಿಯು. ಒಂದು ಮನೆಯಲ್ಲಿ ಕೈ ಕಾಲು ಹಿಡಿದು ಮನೆಗೆಲಸ ಮಾಡುತ್ತಾಳೆ. ತಾನು ಹಾಗೂ ತನ್ನ ಮಗಳ ಆರೋಗ್ಯ ನೋಡಿಕೊಳ್ಳುತ್ತಲೇ. ಶಿಕ್ಷಣದ ಬಗ್ಗೆ ಒಲವು ಮೂಡಿಸಿಕೊಂಡು ಮನೆಗೆಲಸ ಮಾಡಿ ಬಂದ ಹಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕಟ್ಟುತ್ತಾಳೆ. ಚೆನ್ನಾಗಿ ಓದಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಾಳೆ. ಅವಳಿಗೆ ಈ ಸಮಯದಲ್ಲಿ ಹೆರಿಗೆಯಾಗುತ್ತದೆ. ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು ತದನಂತರ ತನ್ನ ಬಾಣಂತನವನ್ನು ತಾನೆ ಮಾಡಿಕೊಳ್ಳುತ್ತಾಳೆ. ನಂತರ ಮಗು ಒಂದು ವರ್ಷ ದೊಡ್ಡವಳಾದಮೇಲೆ ಮತ್ತೆ ಲಕ್ಷ್ಮಿ ತನ್ನ ಪೊಲೀಸ್ ಕೆಲಸಕ್ಕೆ ತಯಾರಿಯನ್ನು ಪ್ರಾರಂಭಿಸುತ್ತಾಳೆ. ಮನೆಗೆಲಸ ಮಾಡುತ್ತಾ ಹತ್ತಾರು ಮನೆಯ ಮುಸರಿ ತಿಕ್ಕುತ್ತಾ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತ. ಪೋಲೀಸ್ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಾಳೆ. ಪರೀಕ್ಷೆಯಲ್ಲಿ ಬರೆದು ಪ್ರಥಮ ಸ್ಥಾನ ಬರುತ್ತಾಳೆ. ದೈಹಿಕ ಪರೀಕ್ಷೆಯಲ್ಲಿ ಕೂಡ ಪಾಸ್ ಆಗುತ್ತಾಳೆ. ಪೊಲೀಸ್ ಅಧಿಕಾರಿಯಾಗಿ ಕೆಲಸವನ್ನು ಸ್ವೀಕರಿಸುತ್ತಾಳೆ. ಅವಳು ಮೊದಲ ಬಾರಿ ಪೊಲೀಸ್ ಸ್ಟೇಷನ್ಗೆ ಅಧಿಕಾರಿಯಾಗಿ ಕಾಲಿಟ್ಟಾಗ ಅವಳ ತಂದೆ ಹಾಗೂ ಅವಳ ಮನೆಯವರೆಲ್ಲರೂ ಪೋಲಿಸ್ ಬಂದೀಖಾನೆಯಲ್ಲಿ ಇರುವುದ ಕಂಡು ಅವಳ ಮನಸ್ಸಿಗೆ ಬಹಳ ನೋವಾಗುತ್ತದೆ. ಅವಳ ತಂದೆಯ ಹತ್ತಿರ ಹೋಗಿ ಮಾತನಾಡಿಸುತ್ತಾಳೆ. ಆದರೆ ಅವಳ ಪೊಲೀಸ್ ಅಧಿಕಾರಿ ಆಗಿರುವುದನ್ನು ನೋಡಿ ಯಾರಿಗೂ ನಂಬಲು ಸಾಧ್ಯವೇ ಆಗುವುದಿಲ್ಲ. ಆದರೂ  ಅವರ ಮಗಳು ತಪ್ಪು ಹಾದಿ ತುಳಿಯುವುದಿಲ್ಲ ಎಂಬ ಒಂದು ಭರವಸೆ ಅವರ ಮನದಲ್ಲಿತ್ತು ಅಷ್ಟೊಂದು ಉತ್ತಮ ಅದೇ ನೀರನ್ನು ಕಂಡು ಅವರ ಮನಸ್ಸಿಗೆ ತುಂಬಾ ಸಂತೋಷವಾಯಿತು. ನಡೆದ ವಿಷಯವನ್ನೆಲ್ಲ ಮಗಳಿಗೆ ತಿಳಿಸಿದರು. ಅವಳು ಕೂಡ ತನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಯನ್ನು ಹೇಳಿದಳು. ನಂತರ ಒಬ್ಬ ಲಾಯರನ್ನು ಕರಿಸಿ ಮನೆಯವರಿಗೆಲ್ಲರಿಗೂ ಬೇಲ್ ನೀಡಿಸಿದಳು. ಎಲ್ಲರನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಐಷಾರಾಮಿ ಮನೆ ಕಾರು ಎಲ್ಲವನ್ನೂ ನೋಡಿ ಆಶ್ಚರ್ಯಚಕಿತರಾದ ಮನೆಯವರು,ಮತ್ತು ತಮ್ಮ ಮೊಮ್ಮಗಳನ್ನ ಬಹಳ ಸಂತಸ ಗೊಳ್ಳುತ್ತಾರೆ. ನಂತರ ಮಗಳೊಂದಿಗೆ ಅದೇ ಮನೆಯಲ್ಲಿ ಉಳಿಯುತ್ತಾರೆ. ಅವಳ ಮೊದಲನೆಯದಾಗಿ ಹ್ಯಾಂಡಲ್ ಮಾಡಿದ ಕೇಸು ಅವಳ ಅತ್ತೆ ಹಾಗೂ ಗಂಡ ಮತ್ತು ಮಾವ, ಎಲ್ಲರೂ ಬ್ರೂಣ ಪರೀಕ್ಷೆ ಮಾಡುವ ವೈದ್ಯರನ್ನು ಸರ್ಕಾರವೇ ಜೈಲಿಗೆ ಹಾಕಿ ಎಂದು ಹೇಳಿತು. ಹಲವಾರು ಜನ ಈ ಮೂವರ ಬಗ್ಗೆ ಪೋಲಿಸ್ ಸ್ಟೇಷನ್ಗೆ ದೂರು ನೀಡಿದರು. ಅವರನ್ನು ತಂದವಳು ಸ್ಟೇಷನ್ಗೆ ಎಳೆದು ತರಲು ಮನೆಗೆ ಹೋದಳು. ಅವಳನ್ನು ಕಂಡು ಅವರಿಗೆಲ್ಲರಿಗೂ ಆಶ್ಚರ್ಯವಾಯಿತು. ಅವರನ್ನು ಎಳೆದು ತಂದು ಜೈಲಿಗೆ ಹಾಕಿ ಅವರಿಗೆ ಸರ್ಕಾರವು ಜೀವಾವಧಿ ಶಿಕ್ಷೆ ನೀಡಿತು. ಶಿಕ್ಷಣದ ತಳಹದಿಯಲ್ಲಿ ಲಕ್ಷ್ಮಿಯ ತನ್ನ ಬದುಕನ್ನು ಪ್ರಾರಂಭಿಸಿದಳು. ಹಾಗು ತನ್ನ ಮಗಳಿಗೆ ಕೂಡ ಉತ್ತಮ ಶಿಕ್ಷಣವನ್ನು ನೀಡಿದಳು. ಮಗಳು ಕೂಡ IAS ಅಧಿಕಾರಿಯಾಗಿ ತಾಯಿಗೆ ತಕ್ಕ ಮಗಳಾಗಿ ಕೀರ್ತಿಯನ್ನು ತಂದಳು. ಮೊದಲ ಯಾವುದೇ ಕಷ್ಟ ಬಂದಾಗ ಹೆದರುವದಕ್ಕಿಂತ
ಬದುಕಿ ಬಾಳಿ ಮಾದರಿಯಾಗುವುದು ಉತ್ತಮ ಎಂದೆನಿಸುತ್ತಿದೆ. ಸಾವಿಗೆ ಶರಣಾಗುವ ಬದಲು ಈ ರೀತಿ ಬದಲಾಗಿ.

- ದಾನೇಶ್ವರಿ ಬಸವರಾಜ ಶಿಗ್ಗಾವಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...