ಗುರುವಾರ, ಜುಲೈ 8, 2021

ಜೀವನ (ಕವಿತೆ) - ಶ್ರೀ ದಯಾನಂದ ಪಾಟೀಲ್.

ಜೀವನ

ಬದುಕು ಸಾಗಿದೆ
ನೋವಿನ ಸಂತೆ
ವಿಧಿಯಾಟದ ಮುಂದೆ ಆಟದ ಗೊಂಬೆ
ಸಂತೋಷದ ಮುಂದೆ  ದುಃಖ ನೀಡಿ ಎಸೆದುಬಿಡುತ್ತಾನೆ
ಬೆಂಕಿಯ ಜ್ವಾಲೆ
ಜೀವನ ಎಂದರೇನು? ತಿಳಿಯ ದ ಮುಗ್ಧರು  ನಾವು
ಜೀವನಕ್ಕೆ ಸಾವಿನ ಕೊಳ್ಳಿ ಇಟ್ಟು
ಹಾಕಿಬಿಟ್ಟೆ,
ಪ್ರತಿದಿನ ಪ್ರತಿ ನಿಮಿಷ  ಅಳುವುದೇ ಜೀವನ ನನ್ನಂಥ
ನೂರಾರು ಸಾವಿರಾರು ಸಾವಿನ ಮನೆಯ
ಕುಡಿಗಳು ನಾವು
ವಿಜ್ಞಾನ  ಶ್ರೇಷ್ಠವೂ
ಧರ್ಮ ಮುಖ್ಯವೋ ಗೊಂದಲದಲ್ಲಿ ನನ್ನ ಪಾಲಿಗೆ ನರ  ಸತ್ತ
ಕಥೆ ಯಾಗಿ ಕಾಡುತ್ತಿದೆ ಮನಸ್ಸಿನ ಜ್ವಾಲೆಯಾಗಿ ಕಾಡುತ್ತಿದೆ ಹೃದಯದಲ್ಲಿ ಬೆಂಕಿಯಾಗಿ ಉರಿಯುತ್ತಿದೆ ಉಸಿರು ಇರುತನಕ,
- ದಯಾನಂದ  ಪಾಟೀಲ ಗಡಿನಾಡು ಕನ್ನಡಿಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713649 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...