ರೈತನ ಸಂಭ್ರಮ
ಹೊಲಕ್ಕೋಗೋಣ ನಾವು ಬಿತ್ತನೆ ಮಾಡೋಣ
ನೇಗಿಲ ಕಟ್ಟೋಣ ಮಣ್ಣ ಉಳುಮೆ ಮಾಡೋಣ
ಮುಂಗಾರು ಬಂತು ರೈತಣ್ಣ ಅಂಬಲಿ ಕುಡಿಯಣ್ಣ
ಸಂತಸದಿಂದ ಹೊಲಗದ್ದೆಗೆ ಹೋಗೋಣ ಬಾರಣ್ಣ
ಹಸುರಿನ ನಲಿವು ಎಲ್ಲೆಲ್ಲು ತುಂಬಿದೆ
ಮಳೆ ಹನಿ ತಂಪಲಿ ರೈತನ ಹರುಷವಿದೆ
ಸಾಗಿದೆ ಮುಂಗಾರು ಬಿತ್ತನೆಗೆ ಜಾತ್ರೆಯು
ಹೊಲದೊಳು ಉಳುಮೆಯ ಯಾತ್ರೆಯು
ಅಹಾ ಏನು ಚೆನ್ನ ರೈತನ ಮುಖದಲ್ಲಿ ಆನಂದ
ನೇಗಿಲ ಯೋಗಿಯ ಧ್ವನಿಯಲ್ಲಿದೆ ಚೆಂದ
ಸಾಗಿದೆ ಹೊಲದೊಳು ಶ್ರಮದ ಎತ್ತಿನ ಹೆಜ್ಜೆ
ಮಣ್ಣಿನ ಒಳಗಾಕವ ಚಿನ್ನದ ಕಾಳಿನ ಗೆಜ್ಜೆ
ನಗವನ್ನು ಹೊತ್ತು ಎಳೆಯುವ ಜಾನುವಾರು
ರೈತನ ಬಾಳಿಗೆ ಬೆಂಬಲವಾದ ದನಕರುವು
ಭೂತಾಯಿಗೆ ನಮಸ್ಕರಿಸಿ ಮಣ್ಣ ಹದಗೊಳಿಸಿ
ಬಿತ್ತಿದ ಧಾನ್ಯಗಳು ಮಣ್ಣಲ್ಲಿ ಪೈರು ಕಂಗೊಳಿಸಿ
ಹಗಲಿರುಳು ಮಣ್ಣಲ್ಲಿ ಶ್ರಮಿಸಿ ದುಡಿಯುವ
ಭೂಮಿತಾಯಿ ರೈತನಿಗೆ ಅನ್ನದ ಫಲಕೊಡುವ
ಜಗಕ್ಕೆಲ್ಲ ರೈತನು ಆಹಾರದ ವರವ ಕೊಡುವ
ಅನ್ನ ಕೊಟ್ಟು ಜಗದ ಜನರ ಸಲಹುತ್ತಿರುವ
ಭೂತಾಯಿ ನಂಬಿದವನ ಕೈ ಬಿಡಕ್ಕಿಲ್ಲ
ಮುಗಿಲ ಮಳೆರಾಯನು ಸಹ ಮೋಸ ಮಾಡಲ್ಲ
ಎಲ್ಲೆಲ್ಲು ಹಸಿರಾಗಿಸಿ ರೈತನ ಸಂಭ್ರಮವು
ಕೇಕೆ ಹಾಕಿ ಕೂಗುವ ಆ ರೈತರಲ್ಲಿ ಸಂತಸವು
ಜಿ ಟಿ ಆರ್ ದುರ್ಗ
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ