ಕರುನಾಡ ಕ್ರಾಂತಿಗೀತೆ
ಸಂಗೊಳ್ಳಿ ಶೂರ,
ಕಿತ್ತೂರ ಧೀರ,
ಚೆನ್ನಮ್ಮಳ ಕುವರ,
ಕೈಯಾಗ ಹಿಡಿದಾನ ತಲವಾರ.
ಕ್ರಾಂತಿಯ ಕಿರೀಟ,
ಕರುನಾಡ ಮುಕುಟ,
ಸಂಗೊಳ್ಳಿ ರಾಯಣ್ಣ ಎಂಬ ಬಂಟ,
ಬ್ರಿಟಿಷರಿಗೆ ತಿರುವಿ ಇಟ್ಟ ಗೂಟ (ಗುಂಡಿನ ಏಟು)
ಸ್ವಾತಂತ್ರ್ಯಕ್ಕಾಗಿ ಇವ ಬಿಟ್ಟನಲ್ಲೋ ಊಟ,
ಪ್ರಾಣಿಗಳಂತೆ ತಿರುಗಿದ ಈತ ದಟ್ಟ ಅಡವಿಯಲ್ಲಿ, ಈತನ ಹಿಂದೆ ಬಂದಿತು ಜನ ರಾಶಿ ರಾಶಿಯಲ್ಲಿ,
ಈತನ ಮಾತಿನಲ್ಲಿ ಇತ್ತು ಗಾಂಭೀರ್ಯತೆ,
ಅದನ್ನು ಬಲವಾಗಿ ನಂಬಿದ್ದರು ಕಿತ್ತೂರಿನ ಜನತೆ.
ಸ್ವತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದ ಈತ,
ತಾಯಿನಾಡಿನ ಕುರಿತು ಹೇಳುತ್ತಿದ್ದ ಪ್ರೀತಿಯ ಮಾತ,
ಇದನ್ನು ಕಂಡು ಸಂತೋಷ ಪಟ್ಟಳು ಕಿತ್ತೂರಿನ ರಾಜಮಾತ,
ದೇಶಕ್ಕಾಗಿ ಮಡಿದ ಸಂಗೊಳ್ಳಿನಾಥ.....!
- ಅಂಬರೀಶ್ ನಾಯ್ಕೋಡಿ.
ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ...
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ