ಗೂಡು
ಕಡೆಯದಾಗಿ ನಿನ್ನ ಕಂಡಾಗ
ನಿನ್ನ ಪ್ರತಿಬಿಂಬವನ್ನು
ಎನ್ನ ಕಣ್ಣಲ್ಲಿ ಸೆರೆಹಿಡಿದೆ
ನೀನು ನನ್ನಿಂದ ಮರೆಯಾಗುವೆ
ಎಂದು ಅಂಜಿ ಕಣ್ಣಾಡಿಸದೆ ಕುಳಿತಿದ್ದೆ
ತತ್ ಕ್ಷಣ ನನಗನಿಸಿತು
ನೀನು ನನ್ನಿಂದ ದೂರ ಆಗಬಾರದೆಂದು
ರೆಪ್ಪೆಗಳನ್ನು ಜೊತೆಗೂಡಿಸಿ ನಿನ್ನನ್ನು
ನನ್ನ ಕಣ್ಣಿನಿಂದ ಮನದಾಳಕ್ಕೆ ಇಳಿಸಿ ಬಚ್ಚಿಟ್ಟುಕೊಂಡೆ ಅದೇ ಕಡೆ ನಾ ನಿನ್ನ ಕಂಡದ್ದು ಅಲ್ಲಿಂದಾಚೆ ನೀನು ಬರಲಿಲ್ಲ ನನ್ನ ಎದೆಯ ಗೂಡಿನಿಂದ ಹೊರಗೆ
ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ