ಸೋಮವಾರ, ಜುಲೈ 12, 2021

"ಚುಟುಕು ಕುಟುಕುವಂತೆ ಕೇಳುಗರ ಹೃದಯಲ್ಲಿ ನೆಲೆಸುವಂತೆ ಮೂಡಿ ಬಂದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಮಟ್ಟದ 'ಸಂಸಾರ ' ಶೀರ್ಷಿಕೆಯ ಚುಟುಕು ಕವಿಗೋಷ್ಠಿ "

"ಚುಟುಕು ಕುಟುಕುವಂತೆ ಕೇಳುಗರ ಹೃದಯಲ್ಲಿ ನೆಲೆಸುವಂತೆ  ಮೂಡಿ ಬಂದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಮಟ್ಟದ 'ಸಂಸಾರ ' ಶೀರ್ಷಿಕೆಯ ಚುಟುಕು ಕವಿಗೋಷ್ಠಿ "




ದಿನಾಂಕ 11:07:2021 ರ ಭಾನುವಾರ ಸಮಯ ಸಂಜೆ: 05 ಗಂಟೆ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾಸನ ಜಿಲ್ಲಾ ಘಟಕದ ಸಹಯೋಗದಲ್ಲಿ 'ಸಂಸಾರ ' ವಿಷಯದ ರಾಜ್ಯ ಮಟ್ಟದ ಚುಟುಕು ಸ್ವರಚನೆ ಹಾಗು ವಾಚನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಯಾವುದೇ ಅಡೆ ತಡೆಯಿಲ್ಲದೆ ಆನ್ಲೈನ್ ನಲ್ಲಿ ನಡೆಯಲು ವಿನಾಯಕನನ್ನು ಕುರಿತು ಮಹಾದೇವಿ ತಳವಾರ್ ಗುರುಮಠ ಅವರು ಪ್ರಾರ್ಥನೆ ಮಾಡಿದರು.ಈ ವಿನೂತನ ಕಾರ್ಯಕ್ರಮಕ್ಕೆ  ಶ್ರೀಮತಿ ರೇಣುಕ ಅವರು ಗಣ್ಯರು ಹಾಗು ಕವಿ ಮನಸ್ಸುಗಳಿಗೆ ಸ್ವಾಗತ ಕೊರಿದರು. ರಾಜ್ಯದಾದ್ಯಂತ ೮೦ ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸಿದ್ದರು.
ಚುಟುಕು ಸಾಹಿತ್ಯ ವಿಶೇಷ ಸಾಹಿತ್ಯ.  ಓದುಗರಲ್ಲಿ ಒಂದು ರೀತಿಯ ಮಿಂಚನ್ನು ಮೂಡಿಸುವ ಪ್ರಕಾರ. ಅಲ್ಲದೆ ಇದು ತನ್ನದೆಯಾದ ರೀತಿಯ ಪಂಚನ್ನು ಹೊಂದಿರುವ ಸಾಹಿತ್ಯ. ಇದು ಹೆಚ್ಚಾಗಿ ಕನ್ನಡದಲ್ಲಿ ಪಸರಿಸುವಂತೆ ಮಾಡಿದವರು ದಿನಕರ ದೇಸಾಯಿ ಅವರು.  ಆದ್ದರಿಂದಲೇ ಇವರನ್ನು ಚುಟುಕು ಬಹ್ರ್ಮ ಎಂದು ಕರೆಯುವರು. ಚುಟುಕು ತಾತ್ವಿಕ, ಆಧ್ಯಾತ್ಮಿಕ, ಸಾಮಾಜಿಕ, ಇನ್ನು ಮುಂತಾದ ಅನೇಕ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಇಂತಹ ಮಹತ್ವದ ಸಾಹಿತ್ಯ ಪ್ರಕಾರವಾದ ಚುಟುಕು ಸ್ವ ರಚನೆ ಹಾಗು ವಾಚನ  ರಾಜ್ಯ ಮಟ್ಟದ ಕಾರ್ಯಕ್ರಮವನ್ನು, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಯ ಹಾಸನ ಜಿಲ್ಲಾ ಘಟಕದ ಪ್ರಾರಂಭದಲ್ಲಿ ಹಮ್ಮಿಕೊಂಡಿರುವುದು ವಿನೂತನವಾಗಿದೆ. ಇಂದು ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರ ನೇತೃತ್ವದಲ್ಲಿ ಈ ರೀತಿಯ ಕಾರ್ಯಕ್ರಮಗಳು ರಾಜ್ಯಾದ್ಯಂತ ಮೂಡಿ ಬರುತ್ತಿರುವುದು ಶ್ಲಾಘನೀಯ ಎಂದು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾಸನ ಘಟಕದ ಅಧ್ಯಕ್ಷರಾದ ಶ್ರೀಮತಿ ವನಜಾ ಸುರೇಶ್ ಅವರು     ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.

ಪ್ರಸ್ತುತ ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಹಾಸನ ಜಿಲ್ಲೆಯ ಹೆಸರಾಂತ ಹನಿಗವನ, ಚುಟುಕು ರಚನೆಯ ಸಾಹಿತಿಗಳಾದ ಕುಮಾರ್ ಚಲವಾದಿಯವರು ಹಾಸನ ಅ ನ ಕೃಷ್ಣರಾಯರು,  ಗೊರೂರು ರಾಮಸ್ವಾಮಿ ಅಯ್ಯಂಗಾರ್,  ಎಸ್ ಎಲ್ ಭೈರಪ್ಪ ಮುಂತಾದ ಇವರೆ ಮುಂತಾದ ಹೆಸರಾಂತ ಸಾಹಿತ್ಯ ದಿಗ್ಗಜರನ್ನು ಒಳಗೊಂಡ ಜಿಲ್ಲೆಯಾಗಿದೆ. ಈ  ಜಿಲ್ಲೆಯಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸಾಹಿತ್ಯ ಸೇವೆಗೆ  ಪ್ರಾರಂಭವಾಗುತ್ತಿರುವುದು  ನಿಜಕ್ಕೂ ಶ್ಲಾಘನೀಯವಾದುದು.  ಪ್ರಸ್ತುತ 'ಸಂಸಾರ' ವಿಷಯ ಕುರಿತ ಚುಟುಕು ಸ್ವ ರಚನೆ ಹಾಗು ವಾಚನ ರಾಜ್ಯ ಮಟ್ಟದ ಕಾರ್ಯಕ್ರಮ ಬಹಳ ಮಹತ್ವವಾದುದು.  ಕಾರಣ ಪ್ರಸ್ತುತ ದಿನಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ , ಹೊಂದಿಕೆಯ ಸವಿ ಸಾರ ಇಲ್ಲವಾಗಿದೆ. ಸಂಸಾರದಲ್ಲಿ ನೆಮ್ಮದಿ ಇರಬೇಕಾದರೆ ಹೊಂದಾಣಿಕೆ  ಸವಿ ಸಾರ ಅಗತ್ಯ. ಈ ಬಾಳು ಮೂರೆ ದಿನ 
ಇಲ್ಲಿ ಬಹಳ ಜೋಪಾನವಾಗಿ ಪಯಣವನ್ನು ಮುಂದುವರಿಸ ಬೇಕು.  ಈ ಪಯಣದಲ್ಲಿ ಹೊಂದಾಣಿಕೆಯೇ ಪರಮವಾದುದು. ಇನ್ನು ಕವಿತೆ ರಚಿಸುವ ಕವಿಗಳು ' ಕೇವಲ ಕೆಲ ವರ್ಗಗಳನ್ನು ,   ಸಮಾಜವನ್ನು,  ವ್ಯಕ್ತಿಗಳನ್ನು ಒಲೈಸುವ ಕವಿತೆ ರಚನೆ ಮಾಡ ಬಾರದು ಬದಲಿಗೆ  ಮೌಢ್ಯವನ್ನು ತೊಲಗಿಸುವ, ಸಮಸ್ಯೆಗಳಿಗೆ ಪರಿಹಾರ ನೀಡುವ , ಅಭಿವೃದ್ಧಿಯ ಹರಿಕಾರಕ್ಕೆ ಕಾರಣವಾಗುವಂತಹ ಹೊರೆ ಕೊರೆಗಳನ್ನು ತಿದ್ದುವ ಕೆಲಸದ ಕವಿತೆಗಳನ್ನು ರಚಿಸುವ ಶ್ರೇಷ್ಠ ಕೆಲಸ ಮಾಡಬೇಕು. ಅಲ್ಲದೆ ಕವಿತೆಯ ರಚನೆ ಅನುಕರಣೆಯನ್ನು ಹೊಂದಿರದೆ 
ಸ್ವಂತಿಕೆಯಿಂದ ಕೂಡಿರಲಿ   ಎಂದು ತಿಳಿಸಿ ಸ್ವ ರಚನೆಯ ಅನೇಕ ಹಾಸ್ಯ ಚುಟುಕುಗಳನ್ನು ವಾಚನ ಮೂಡಿದರು.

' ಪಕ್ಷಿ ವನದಲ್ಲಿ ತಿರುಗಿ ತನ್ನ ಮರಿಗಳಿಗೆ ಆಹಾರ ತಂದು ಕೊಕ್ಕಿನಲ್ಲಿ ಇಕ್ಕುವುದೆ ಈ ಚುಟುಕು ಸಾಹಿತ್ಯ.  ಇಂದು ಕವಿಗಳು ಸಾವಿರದ ಒಂದು ಕವಿತೆ ಬರೆಯುವುದರ ಜೊತೆಗೆ ಆ ಕವಿತೆ ಸಾವಿರದ ಕವಿತೆಯಾಗಿರ ಬೇಕು.  ಅಂತೆಯೇ ಈ' ಸಂಸಾರ ' ಚುಟುಕು ಸ್ವ ರಚನೆ ಕವಿ ಗೋಷ್ಠಿ ಯು ಹೊಂದಾಣಿಕೆ ಇರುವ, ಸಹಕಾರ , ಸಾಮರಸ್ಯದಿಂದ ಕೂಡಿದ ಜೀವನವನ್ನಕ್ಕೆ ಅಣಿಯಾಗುವಂತ  ಕವಿತೆಗಳು ಮೂಡಿ ಬರುವಂತಹ ಚೌಕಟ್ಟನ್ನು   ಹೊಂದಿರಲಿ. 
 ಅಂಗಿ ಬಿಚ್ಚಿ ಕುಳಿತ್ತಿದ್ದ ಬಂಗಿ
ಗಮನಿಸಿ ನಕ್ಕಳು ಎದುರು ಮನೆ ರಂಗಿ
ಗಮನಿಸಿ ಬಿಟ್ಟಳು ನನ್ನ ಅರ್ಧಾಂಗಿ 
ಅಟ್ಟಿಸಿಕೊಂಡು ಬಡಿದು ಹರಿದಳು ನನ್ನ ಲುಂಗಿ 
ಎಂಬ ಸ್ವ ರಚನೆ ಹನಿ ಚುಟುಕು ವಾಚನ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳನ್ನು ಕಾರ್ಯಕ್ರಮದ ವಿಶೇಷ ಉಪನ್ಯಾಸ ಮಾಡಿದ ಕೊಡಗಿನ ಸಾಹಿತಿಗಳಾದ ಪಿ ಎಸ್ ಶೈಲೇಶ್ ರವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷರಾದ  ಶ್ರೀಮತಿ ಗಿರಿಜಾ ಮಾಲಿ ಪಾಟೀಲ 
ಹಿರಿಯ ಸಾಹಿತಿಗಳಾದ ಬಾ ರಾ ಸುಬ್ಬಾರಾವ್ ರಾಜ್ಯ ಸಂಚಾಲಕರಾದ ಶ್ರೀಮತಿ ಶೋಭ ನಾಗಭೂಷಣ ಅವರು  
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭನುಡಿಗಳನ್ನು ಹಾರೈಸಿದರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಆಲೂರು ತಾಲೂಕಿನ ಅಧ್ಯಕ್ಷರಾದ ಪರಮೇಶ್ ಮಡಬುಲು ಅವರು  ಮಾತನಾಡಿ ದೊಡ್ಡ ಸಾಹಿತ್ಯ ಪ್ರಕಾರ ಹೇಳಲಾಗದ ಸಂದೇಶವನ್ನು ಚಿಕ್ಕದಾದ ಚುಟುಕು ಹೇಳುತ್ತದೆ. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಈ ಕಾರ್ಯಕ್ರಮ ತುಂಬಾ ಉತ್ತಮವಾಗಿದ್ದು ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ವೇದಿಕೆಯ ವತಿಯಿಂದ ಮೂಡಿ ಬರಲಿ ಎನ್ನುವ ಆಶಯವನ್ನು ವ್ಯಕ್ತ ಪಡಿಸಿದರು.

ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಮೈಸೂರು, ಹಾಸನ, ಚಿತ್ರದುರ್ಗ, ಹಾವೇರಿ,  ಬೆಂಗಳೂರು,  ಬೆಳಗಾವಿ,  ಧಾರವಾಡ,  ವಿಜಯಪುರ, ಮಂಡ್ಯ,  ಶಿವಮೊಗ್ಗ , ಕಲ್ಬುರ್ಗಿ , ಚಾಮರಾಜನಗರ ಮುಂತಾದ ಜಿಲ್ಲೆಗಳಿಂದ ಕವಿ ಮನಸ್ಸುಗಳು ಭಾಗವಹಿಸಿ ಸಂಸಾರ ಸಾಗರ ಇರಲಿ ಇದರಲ್ಲಿ ಹೊಂದಾಣಿಕೆಯ ಸವಿ ಸೂರು
ಬೆಳಗಲಿ ಮನ ಮನಗಳಲ್ಲಿ 
ಭವ್ಯತೆಯ ತೇರು
ಇದುವೆ ಚುಟುಕು ಸಾಹಿತ್ಯದ 
ದಿವ್ಯತೆಯ ಪರಿ ನೂರು
 ಎನ್ನುವ ದಿವ್ಯ ಸಂದೇಶವನ್ನು ಸಾರಿದರು.
ರಾಜ್ಯ ಮಟ್ಟದ 'ಸಂಸಾರ' ವಿಷಯಾಧರಿತ ಸ್ವ ರಚನೆ ಮತ್ತು ವಾಚನ ಚುಟುಕು ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂತು. ಸಂಸಾರದಲ್ಲಿನ ಆಗು ಹೋಗು,  ಹೊಂದಾಣಿಕೆ, ಸಾಮರಸ್ಯ ವಿಷಯಗಳನ್ನು ಒಳಗೊಂಡಂತೆ ಚೆನ್ನಾಗಿ ಕವಿ ಮನಸ್ಸುಗಳು ಕವಿತೆಯ ಮೂಲಕ ಹೊರ ಚೆಲ್ಲಿದ್ದಾರೆ ಎಂದು ಕಾರ್ಯಕ್ರಮದ ನಿರ್ಣಾಯಕರಾದ ಹಾಸನದ ಸಾಹಿತಿಗಳಾದ ಗೊರೂರು ಅನಂತ್ ರಾಜ್ ಅವರು ತಮ್ಮ ನುಡಿಯಲ್ಲಿ ತಿಳಿಸಿದರು.
' ಎಳೆಗರು ಎತ್ತಾಗದೆ' ಅಂತೆಯೇ ಇಂದಿನ ಕವಿ ಮನಸ್ಸುಗಳು  ರಚಿಸಿದ ಕವಿತೆ  ಮುಂದಿನ ದಿನಗಳಲ್ಲಿ ಅರ್ಥಪೂರ್ಣ ಕವಿತೆ ರಚನೆಗೆ ಹಾದಿಯಾಗುತ್ತದೆ. ಈ ರೀತಿಯ ರಚನೆಯ ನಿರಂತರತೆ ಮುಂದೆ ಪರಿಪೂರ್ಣ ರಚನೆಯನ್ನು ಕವಿಗಳಿಗೆ ಒದಗಿಸುತ್ತದೆ. ಕವಿಗಳು ಚುಟುಕು ರಚನೆಯಲ್ಲಿ ಅನುಭವದ ವಿಚಾರಧಾರೆಯನ್ನು ಒಳಗೊಂಡಂತೆ  ಅನುಭವಿಸಿ ಬರೆಯ ಬೇಕು.   ಅಲ್ಲದೆ ' ಚುಟುಕು ಕುಟುಕುವಂತಿರ ಬೇಕು.  ಆದರೆ ಅದು ಕೇಳುಗರ ಅಚ್ಚುಮೆಚ್ಚಿನಂತೆ ಇರಬೇಕು ' ಈ ರೀತಿಯಲ್ಲಿ ರಚನೆ ಇರಲಿ .
ಕಟ್ಟಿದ ಮೇಲೆ  ಉಳಿಸಿ ಬೆಳೆಸುವ ಕಾರ್ಯ ಬಹಳ ಮುಖ್ಯ.  ಅಂತೆಯೇ  ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯು  ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರ ಸಾರಥ್ಯದಲ್ಲಿ ರಾಜ್ಯಾದ್ಯಂತ ಯಶಸ್ವಿಯಾಗಿ ತನ್ನ ಸಾಹಿತ್ಯ ಕೃಷಿಯಾನವನ್ನು ಚೆನ್ನಾಗಿ ನಡೆಸುತ್ತಿದೆ. ಇವತ್ತು ಪ್ರಾರಂಭವಾದ ಹಾಸನ ಜಿಲ್ಲಾ ಘಟಕವು ಮುಂದಿನ ದಿನಗಳಲ್ಲಿ ಒಳ್ಳೆಯ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪ್ರತಿಭೆಗಳನ್ನು ಹೊರತರುವಂತಾಗಿ, ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುವಂತಾಗಲಿ ಎಂದು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಹಾಸನದ ಹಿರಿಯ ಸಾಹಿತಿಗಳಾದ ಎನ್ ಎಲ್ ಚನ್ನೇಗೌಡ್ರು ರವರು ತಮ್ಮ ನುಡಿಯಲ್ಲಿ ತಿಳಿದರು. ಶ್ರೀಮತಿ ಸರೋಜಿನಿ ಮಾವಿನ ಮರ ಹಾಗೂ ಮಲ್ಲಿಕಾರ್ಜುನ ಪಾಟೀಲ ಇಂಡಿ ಇವರ ಅಚ್ಚುಮೆಚ್ಚಿನ ಕನ್ನಡ ನುಡಿಗಳೊಂದಿಗೆ ಅಚ್ಚುಕಟ್ಟಾಗಿ ಮೂಡಿ ಬಂತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...