ಭಾನುವಾರ, ಜುಲೈ 11, 2021

ಸಾಧನೆ ಮತ್ತು ಅನುಭವ (ಸಣ್ಣ ಕಥೆ) - ಅಕ್ಷತಾ ಎಸ್.

ಸಾಧನೆ ಮತ್ತು ಅನುಭವ

 ಕೆಲವು ವರ್ಷಗಳ ಹಿಂದೆ ಎರಡು ರಾಜ್ಯಗಳಿದ್ದವು ಒಂದು ರಾಜ್ಯದ ಹೆಸರು ಸಾಧನೆ ಇನ್ನೊಂದು ರಾಜ್ಯದ ಹೆಸರು ಅನುಭವ. ಒಂದೊಮ್ಮೆ ಈ ಎರಡು ರಾಜ್ಯದ ಮಧ್ಯೆ ಯುದ್ಧ ಉಂಟಾಗುತ್ತದೆ.ಯುದ್ಧದಲ್ಲಿ ಸಾಧನೆ ರಾಜ್ಯದ ರಾಜನು ಜಯವನ್ನು ಪಡೆಯುತ್ತಾನೆ. ತದ ನಂತರ ಅವರವರ ಸಾಮ್ರಾಜ್ಯಕ್ಕೆ ಹಿಂತೆರಳುತ್ತಾರೆ. ಈ ಮಧ್ಯೆ ಅನುಭವ ರಾಜ್ಯದ ರಾಜನ ಮುಖದಲ್ಲಿ ಬೆಜಾರು, ಸೋತೆ ಎಂಬ ಕುಗ್ಗುವಿಕೆಯಾಗಲಿ  ಕಂಡುಬರುವುದಿಲ್ಲ. ಅವನು ಸದಾ ಇರುವಂತೆಯೆ ಇರುತ್ತಾನೆ. ಇದನ್ನು ಕಂಡ ಅವನ ಮಂತ್ರಿಯು ಆಶ್ಚರ್ಯ ಚಕಿತನಾಗುತ್ತಾನೆ. 
ತದ ನಂತರ  ತನ್ನ ರಾಜನಿಗೆ ಕೇಳುತ್ತಾನೆ ಮಹಾಪ್ರಭುಗಳೆ ನಾನು ನಿಮ್ಮ ಬಳಿ ಒಂದು ಪ್ರಶ್ನೆ ಕೇಳಬಹುದೆ ?  ಎಂದಾಗ ರಾಜನು ಕೇಳಲು ಒಪ್ಪಿಗೆ ನೀಡಿದನು. ಆಗ ಮಂತ್ರಿಯು ಮಹಾಪ್ರಭುಗಳೆ ಈ ಹಿಂದೆ ನಡೆದ ಯುದ್ಧದಲ್ಲಿ ಅನುಭವ ಸಾಮ್ರಾಜ್ಯದ ರಾಜನಾದ ನೀವು ಸೋತಿರುವಿರಿ ಆದರೆ ನಾ ಗಮನಿಸಿರುವಂತೆ ನಿಮ್ಮ ಮೊಗದಲ್ಲಿ ಯಾವುದೇ ರೀತಿಯಲ್ಲಿ ನಾ ಸೋತೆ ಎಂಬ ಬೇಜಾರು, ಕುಗ್ಗುವಿಕೆ ನಿಮ್ಮಲ್ಲಿ ನಿಮ್ಮ ಮುಖದಲ್ಲಿ ಕಾಣುತಿಲ್ಲವಲ್ಲ ಎಂದು ಕೇಳುತ್ತಾನೆ. ಆಗ ಇದನ್ನು ಕೇಳಿಸಿಕೊಂಡ ಅನುಭವ ಸಾಮ್ರಾಜ್ಯದ ರಾಜನಿಗೆ ನಗು ಬರುತ್ತೆ ನಗುತ್ತಲೆ ಮಂತ್ರಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಆರಂಭಿಸುತ್ತಾನೆ. ಮಂತ್ರಿವರ್ಯರೆ ಕೇಳಿ ನೀವು ಕೇಳಿದ ಹಾಗೆ ಎಲ್ಲಾ ಭಾವನೆಗಳು ಅಂದರೆ ಬೇಜಾರು, ಕುಗ್ಗುವಿಕೆ ಎಲ್ಲವೂ ಕಂಡು ಬರುತಿತ್ತು ಆದರೆ ಅದು ನನಲ್ಲಿ ಅಲ್ಲ ನನ್ನ ಜಾಗದಲ್ಲಿ ಬೇರೆಯವರು ಯಾರಾದರು ಇದ್ದಾಗ ಅವರಲ್ಲಿ ಈ ಭಾವನೆಗಳು ಕಂಡು ಬರುತಿದ್ದವು ಎಂದು ಉತ್ತರಿಸುತ್ತಾನೆ.  ಇದನ್ನ ಕೇಳಿದ ಮಂತ್ರಿ ಮತ್ತೆ ಯಾಕೆ ಮಹಾರಾಜರೆ ಎಂದು ಮಂತ್ರಿಯು ಪ್ರಶ್ನಿಸಿದಾಗ  ಅದಕ್ಕೆ ರಾಜ ಮಂತ್ರಿವರ್ಯರೆ ನಾನು ಸೋತೆ ಎಂಬ ಮಾತ್ರಕ್ಕೆ ಜೀವನದಲ್ಲಿ ಇನ್ನೆಂದು ಗೆಲ್ಲಲಾರೆ ಎಂದರ್ಥವಲ್ಲ  ಬದಲಿಗೆ ನಾ ಸೋತಿರುವುದು ಖುಷಿಯ ವಿಚಾರ ಏಕೆಂದರೆ. ಮನುಷ್ಯನು ಸೋತೊಡನೆ ಕೀಳಾಗಲಾರ ಮತ್ತು ಗೆದ್ದೊಡನೆ ಜಗತ್ತೆ ದೊರಕಿತೆಂದರ್ಥವಲ್ಲ. ಮತ್ತೆ ಇದನೆಲ್ಲ ಕೇಳಿಸಿಕೊಂಡ ಮಂತ್ರಿಯಲ್ಲಿ ಇನ್ನೊಂದು ಪ್ರಶ್ನೆ ಮೂಡುವಂತಾಗುತ್ತದೆ. ಹಾಗಾಗಿ ಮಂತ್ರಿಯು ಮತ್ತೊಮ್ಮೆ ರಾಜನಲ್ಲಿ ರಾಜರೇ ನೀವು ಹೇಳಿದ್ದೇನೊ ಒಪ್ಪಿದೆ ಆದರೆ  ಸೋತರೆ ಅವಮಾನವಾದಂತೆ ಅಲ್ವಾ ಎಂದಾಗ ರಾಜ ಇಲ್ಲ ಮಂತ್ರಿ
"ನಾವು ಸೋತೊಡನೆ ಕೀಳಾಗಲಾರರು ಬದಲಿಗೆ ಅವರು ಶ್ರೇಷ್ಠವಾಗುವಂತಾಗುತ್ತದೆ ಹೇಗೆಂದರೆ ಮನುಷ್ಯ ಜೀವನದಲ್ಲಿ ಸೋತಷ್ಟು ಏನಾದರೂ ಮುಂದೆ ದೊಡ್ಡದನ್ನೇ ಪಡೆಯುವಂತಾಗುತ್ತದೆ ಅದುವೇ ಅನುಭವ ಎಂಬ ಮಾಣಿಕ್ಯ."ನಾನು ಏಕೆ ಅನುಭವ ಎಂದು ಹೇಳುತ್ತೇನೆಂದರೆ ಮನುಷ್ಯನಿಗೆ ಜೀವನದಲ್ಲಿ ಬಹುಮುಖ್ಯವಾದದ್ದು. ಏಕೆಂದರೆ ಮನುಷ್ಯನ ತಪ್ಪುಗಳು ಕಡಿಮೆ ಆಗುವುದೇ ಅವನು ಹಿಂದೊಮ್ಮೆ ಪಡೆದ ಅನುಭವದಿಂದ ಮಾತ್ರ. ಈ ಹಿಂದೆ ಮನುಷ್ಯನು ಏನಾದರು ತಪ್ಪು ಮಾಡಿದರೆ ಅವನಿಗೆ  ಶಿಕ್ಷೆಯಂತು ದೊರೆತಿರುತ್ತದೆ ಇದರಿಂದಾಗಿ ಅವನು ಮುಂದೊಮ್ಮೆ ತಪ್ಪು ಮಾಡಬಾರದು ಎಂಬ ಒಂದು ಭಯದ ಅಂಶವೆಯಾಗಲಿ ಅಥವಾ ಮನವರಿಕೆ ಎಂಬ ಅಂಶವಂತು ಸಿಕ್ಕಿರುತ್ತದೆ ಅದುವೇ ಅನುಭವ. ಹೀಗೆ ನನಗು ನಾನು ಯುದ್ಧದಲ್ಲಿ ಸೋತಿದ್ದರಿಂದ ಮಾತ್ರ ನನಗೆ ಸೋಲಿನ ರುಚಿ ಗೊತ್ತಾಗಿ ನನಗೆ ಹೇಗೆ ಸ್ವೀಕರಿಸಬೇಕು ಮತ್ತು ಮುಂದಿನ ಗೆಲುವನ್ನು ಹೇಗೆ ಪಡೆದುಕೊಳ್ಳಬೇಕು ಎಂದು ಗೊತ್ತಾದದ್ದು. ಹಾಗಾಗಿ ಮನುಷ್ಯನು ಜೀವನದಲ್ಲಿ ಸೋತಷ್ಟು ಸೋಲಿಗೆ ಕಾರಣವಾದ ತಪ್ಪನ್ನು ನೀ ಮತ್ತೊಮ್ಮೆ ಎಂದಿಗೂ ಮಾಡಲಾರೆ ಹೀಗೆ ತಪ್ಪನ್ನು ಮಾಡದಿದ್ದಾಗ ನಿನ್ನ ಬದುಕಿನ ಮುಂದಿನ ಹಂತದಲ್ಲಿ ನಿನಗೆ ಸಿಗುವಂತಹ ದೊಡ್ಡ ವಸ್ತುವೆ ಸಾಧನೆ. ಹೀಗಾಗಿ ಪ್ರತಿಯೊಂದು ಮನುಷ್ಯನು ಇದನ್ನು ಅರಿತರೆ ಮತ್ತು ತಪ್ಪನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ಆತ ಮಾಡಿದ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತಾಪ ಪಟ್ಟು ಮತ್ತು ತಪ್ಪನ್ನು ತಿದ್ದುಕೊಳ್ಳುವುದಕ್ಕಿಂತ ದೊಡ್ಡ ಒಳ್ಳೆಯತನ ಬೇರೊಂದಿಲ್ಲ ಎನ್ನುತ್ತಾ ರಾಜನು ಮಂತ್ರಿಗೆ ಉತ್ತರಿಸುತ್ತಾನೆ. ಇದನ್ನು ಕೇಳಿದ ಮಂತ್ರಿ ಖುಷಿಯಿಂದ ಹೌದು ರಾಜರೇ ನೀವು ಹೇಳಿದ ಪ್ರತಿಯೊಂದು ಮಾತುಗಳು ಹಾಗೂ ನನ್ನಲ್ಲಿ ಮಾಡಿದ ಪ್ರಶ್ನೆಗೆ ನೀವು ಕೊಟ್ಟ ಉತ್ತರವನ್ನ ನಾನು ಮನಸ್ಸಾರೆ ಒಪ್ಪುವೆ ಮಹಾಪ್ರಭುಗಳೆ. ಮತ್ತೆ ರಾಜರೆ ನಿಮ್ಮ ಮಾತುಗಳು ಮತ್ತು ಉತ್ತರಗಳನ್ನ ಕೇಳಿದ ನಾನು ಇದರಿಂದಾಗಿ ತಿಳಿದ ನೀತಿ ಪಾಠವೆಂದರೆ. ಸೋತವನು ಅನುಭವಿಯಾಗಿ  ತಪ್ಪನ್ನು ತಿದ್ದುಕೊಂಡು ಸಾಧನೆಯ ಮೆಟ್ಟಿಲೇರುವಂತಾಗುತ್ತದೆ ಹಾಗೂ ಇನ್ನೊಬ್ಬರಿಗೆ ತನ್ನ ಅನುಭವಾಮೃತಗಳನ್ನು ತಿಳಿಸುವಂತಾಗುತ್ತಾನೆ ಇದರಿಂದಾಗಿ ಇದನ್ನು ಕೇಳಿದ ಬೇರೆಯವರು ತಪ್ಪು ಮಾಡದಂತಾಗುತ್ತದೆ ಅಥವಾ ಕನಿಷ್ಠ ಪಕ್ಷ ತಪ್ಪು ಮಾಡುವಿಕೆಯಾದರೂ ಕಡಿಮೆಯಾಗುತ್ತದೆ. ಹೀಗೆ ಹೇಳುತ್ತಾ ಮಂತ್ರಿಯು ತನ್ನ ಮಾತುಗಳನ್ನ ಮುಗಿಸುತ್ತಾರೆ.
             
- ಅಕ್ಷತಾ. ಎಸ್ 1ನೇ ಬಿ. ಎಸ್. ಸಿ ವಿದ್ಯಾರ್ಥಿನಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

  1. ಈ ಕಥೆಯು ತುಂಬಾ ಅರ್ಥಪೂರ್ಣವಾಗಿ ಕಾಣುತ್ತದೆ...... ಯಾಕೆಂದರೆ ಒಬ್ಬ ಮನಷ್ಯನಿಗೆ ಸೋಲು ಮತ್ತು ಗೆಲುವು ಯರಾಡ್ ಕೂಡಾ ಮುಖ್ಯ ...... ಅದಕ್ಕಾಗಿ ಈ ಕಥೆಯು ಸಾಧಕರಿಗೆ ಮತ್ತು ಸಾಧಿಸಬೇಕು ಅಂತ ಇರುವವರಿಗೆ ಒಳ್ಳೆ ಮಾದರಿ ಯಾಗಿದೆ ....... ಈ ಒಳ್ಳೆ ಮಾದರಿಯನ್ನು ಒಂದು ಪುಟ್ಟ ಕಥೆಯ ರೂಪದಲ್ಲಿ ಪರಿಚಯಿಸಿದ ಅಕ್ಷತಾ ಅವರಿಗೆ ಧನ್ಯವಾದಗಳು.......☺️

    ಪ್ರತ್ಯುತ್ತರಅಳಿಸಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...