ಶನಿವಾರ, ಜುಲೈ 24, 2021

ನಾಡು ನುಡಿ ( ಕವಿತೆ) - ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.

ನಾಡು ನುಡಿ

ನಾಡು ನುಡಿಯ ಅಭಿಮಾನ
ಪೂಜಿಸು ಹೆತ್ತ ತಾಯಿ ಸರಿಸಮಾನ
ಕಾಪಾಡು ಇಬ್ಬರದು ಒಂದೇ ಮಾನ
ಉಳಿಸು ಸತ್ಯ ನ್ಯಾಯ ನೀತಿ ಧರ್ಮನ//

ನೂರು ವೇಷ ಹಾಕಿ ಮೆರದರು
ಹತ್ತು ಭಾಷೆ ಕಲಿತು ಅಲೆದರು
ತಾಯಿ ನಾಡು ನುಡಿ ಮರೆಯದಿರು
ಅದಾಗಿದೆ ಸ್ವಾಭಿಮಾನದ ತವರು//

ಸುಂದರ ಮಾಡಿಕೊ ಜೀವನ
ನೆನೆದು ಚೂರು ತ್ಯಾಗ ಬಲಿದಾನ
ಇಟ್ಟ ಹೆಜ್ಜೆ ಆಗಲು ಪಾವನ
ಅರಿ ಸಾಧು ಸಂತರ ಪ್ರವಚನ//

ಕನ್ನಡ ನಾಡಿನ ಇತಿಹಾಸ ಅರಿತರೆ
ಮುಖದಲಿ ಮುಡುವದು ನಗುವಿನ ಅಕ್ಕರೆ
ಇಂದಿಗೂ ಮಾದರಿ ಶೂರ ಧೀರ ಅರಸರೆ
ಶೌರ್ಯ ಅಮರ ಅಂದರು ಜಾಣ ಜನರೆ//

ಅನ್ನ ಬಟ್ಟೆ ನೀಡಿದ ನೆಲವನೆ
ಗೌರವ ತಂದುಕೊಟ್ಟ ಭಾಷೆಯನೆ
ಮಾಡಿಕೊ ಕಂದ ನಿನ್ನ ಮುಕುಟವನೆ
ನಂದನ ಆ ಬಂಧನ ತಿಳಿ ಕಂದನೆ//

✍️ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ, ಸಾ!ಭೈರಾಪೂರ, ತಾ!ಜಿ!ಕೊಪ್ಪಳ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...