ಅವ್ವನ ರೊಟ್ಟಿ.
1. ಕೈಯ ಬಳೆ ಗೆ ಕನಕ ಕಟ್ಟಿ.
ಟಪ ಟಪಾ ಬಡೆದು ತಟ್ಟಿ ತಟ್ಟಿ.
ಆಗ ಮಾಡುತ್ತಿದ್ದರು ಜೋಳದ ರೊಟ್ಟಿ.ತಿನ್ನಾಕ ಕುಂತರ ಸಾಲತ್ತಿರಲಿಲ್ಲ ಬುಟ್ಟಿ.
2. ಉಪ್ಪು ಬೆಳ್ಲಳ್ಳಿ ಕುಟ್ಟಿ ಕುಟ್ಟಿ. ಮಿಜಿ ಮಿಜಿ ನಾದಿ ತೀಡಿ ತಟ್ಟಿ.
ಬೆಣ್ಣೆ ಯ ಸವರಿ ಮು ಟು ಗಿ ಕಟ್ಟಿ.
ತಿಂದವರು ಆಗ ಬಲು ಗಟ್ಟಿ.
3. ತಟ್ಟಿದ ರ ನೋಯ್ತಾವು ಈಗಿನವರ ರಟ್ಟಿ.
ಅದಕ್ಕಾಗಿ ಬಂದಾವು ಮಷನ್ ರೊಟ್ಟಿ.
ಅಂಗಡ್ಯಾಗ್ ತರ್ತಾರೋ ದುಡ್ಡು ಕಟ್ಟಿ.
ತಿನ್ನಲು ಇರಬೇಕು ವಸಡಿ ಗಟ್ಟಿ.
4 ಪಿಜ್ಜಾ ಬರ್ಗರ್ ತಿನಬ್ಯಾಡ್ರಿ ಬುಟ್ಟಿ.
ಹೊಟ್ಟಿ ಯಾಗ ತುಂಬೆದೋ ಡೊಳ್ಳು. ನೋಡಲು ಕಾಣ್ತಾವು ಡೊಳ್ಳು ಹೊಟ್ಟಿ.
ದೇಹದಾಗ ಉಳಿಯೋದಿಲ್ಲ ಏನೇನೂ ಗಟ್ಟಿ.
5 ಉತ್ತರ ಕರ್ನಾಟದಾಗ ಬಂದಿರುವಿ ಹುಟ್ಟಿ.
ಉಂಡು ಬೆಳೀಬೇಕು ಜೋಳದ ರೊಟ್ಟಿ.
ಗಟ್ಟಿ ಆಗತಾವು ಎರಡೂ ರಟ್ಟಿ.
ನಿಮ್ಮ ಮುಂದೆ ನಿಲ್ಲವರಿಲ್ಲ ತೊಡಿ ತಟ್ಟಿ.
ಅಷ್ಟೊಂದು ಗಟ್ಟಿ ನಮ್ಮ ಜೋಳದ ರೊಟ್ಟಿ.
- ಸವಿತಾ ಆರ್ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ