ಸೋಮವಾರ, ಜುಲೈ 12, 2021

ಕೋರೋನ ಕಾಲದಲ್ಲಿ ಮಹಿಳೆಯರು ಎದುರಿಸುತವ ಬಿಕ್ಕಟ್ಟು ಗಳು (ಲೇಖನ) - ಸ್ವರೂಪ ಎಸ್ ನಾಗೂರೆ.

ಕೋರೋನ ಕಾಲದಲ್ಲಿ ಮಹಿಳೆಯರು ಎದುರಿಸುತವ ಬಿಕ್ಕಟ್ಟು ಗಳು

        ಇದು ಒಂದು ಅದ್ಭುತವಾದಂತಹ ಪ್ರಶ್ನೆ ಕೋರೋನ ಕಾಲದಲ್ಲಿ ಮಹಿಳೆಯರು ಎದುರಿಸಿದ ಬಿಕ್ಕಟ್ಟುಗಳು ಅಷ್ಟಿಷ್ಟಲ್ಲ . ಅವುಗಳನ್ನು ಒಂದೊಂದಾಗಿ ಹೇಳಿದರೆ ಬಿಕ್ಕಟ್ಟುಗಳ ಸರಮಾಲೆಯೇ ನಮ್ಮ ಕಣ್ಣೆದುರೇ ನಿಲ್ಲುವಂತಾಗುತ್ತದೆ.
 24 ಗಂಟೆಗಳ ಕಾಲ ಗಂಡ ಮನೆಯಲ್ಲಿ ಇರುವುದೇ ಒಂದು ದೊಡ್ಡ ಸಮಸ್ಯೆ
ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಮಕ್ಕಳನ್ನು ಹಿಡಿಯೋದು ಒಂದು ರೀತಿ ಸಮಸ್ಯೆ
ಮೂರು  ಹೋತ್ತುಅಡಿಗೆ ಮಾಡುವುದು ಮತ್ತೊಂದು ತರಹ ಸಮಸ್ಯೆ
ಅದರಲ್ಲಿ ದಿನ ಒಂದೊಂದು ಹೊಸ ರೀತಿಯ ಅಡುಗೆ ಮಾಡುವುದು
ನಮ್ಮನ್ನು ನಾವೇ ಅಡುಗೆಮನೆಯಲ್ಲಿ ಲಾಕ್ ಡೌನ್ ಮಾಡಿದಂತೆ
ಯಾವುದೇ ತರದ kitty party and functions ಗಳಿಲ್ಲ ಮನೇಯಲ್ಲಿ ಇರೋದು
ಯಾರ ಮನೆಗೂ ಹೋಗುವಂತಿಲ್ಲ , ನಮ್ಮ ಮನೆಗೆ ಯಾರೂ ಬರುವಂತಿಲ್ಲ
ಹೊಸ ಹೊಸ ಬಟ್ಟೆಗಳು ಹಾಕುವಂತಿಲ್ಲ, ಬೇರೆಯವರ ಸೀರೆ ಬ್ಲೌಸ್ ಗಳು ನೋಡುವಂತಿಲ್ಲ
ಅಷ್ಟೇ ಯಾಕೆ ನಮ್ಮ ಅಕ್ಕ ಪಕ್ಕದವರ ಜೊತೆ ಮಾತನಾಡುವಂತಿಲ್ಲ
ಹೊರಗಡೆ ಯಾವುದೇ ರೀತಿಯ ತಿಂಡಿ ತಿನಿಸುಗಳು ತಿನ್ನುವಂತಿಲ್ಲ
ಇಷ್ಟೇಕೆ ಮನೆಯಲ್ಲಿ ವಯಸ್ಸಾದ ಅತ್ತೆಮಾವರ ಸಮಸ್ಯೆಗಳು ಕೂಡ ಸಮಯಕ್ಕೆ ಸರಿಯಾಗಿ ಕಷಾಯ ಮಾಡಿ ಕೊಡಬೇಕು ಮತ್ತು ಅವರ ಆರೋಗ್ಯ ತಪಾಸಣೆ ಮಾಡುತ್ತಾ ಇರಬೇಕು
ನಮಗಾಗಿ ನಾವು ಟಿವಿ ನೋಡುವಂತಿಲ್ಲ,  ಹೆಚ್ಚಾಗಿ ಮೊಬೈಲ ಬಳಸುವಂತಿಲ್ಲ
ಹೀಗೆ ಒಂದು ಎರಡು ರೀತಿಯ ಸಮಸ್ಯೆಗಳಿಲ್ಲ ಕೋರೋನ ರಿಂದ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
 ಅದಲ್ಲದೆ ಈ ಕೋರೋನ ಸಮಸ್ಯೆ ಮಧ್ಯೆ TV news channel ಗಳ ಹಾವಳಿ ಹೆಚ್ಚಾಗಿ
ಮನೆಯಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ news ಕೇಳಿ ಕೇಳಿ ತಲೆನೋವು ಒಂದುಕಡೆಯಾದರೆ ಮತ್ತೊಂದು ಕಡೆ ಭಯದ ವಾತಾವರಣ ಸೃಷ್ಟಿಯಾಗಿದೆ ಕೋರೋನಾ ರೋಗದ ಕಿಂತಲೂ ರೋಗದ ಭಯವೇ ಹೆಚ್ಚು ಕಾಡುತ್ತಿದೆ. ಈ ರೀತಿ ಸಮಸ್ಯೆಗಳು ಹೇಳುತ್ತಾ ಹೋದರೆ ಅದಕ್ಕೆ ಮುಕ್ತಾಯ ಎನ್ನುವುದೇ ಇಲ್ಲ ಯಾವಾಗ ಈ ಒಂದು ಬಂಧನದಿಂದ ಮುಕ್ತನಾಗುತ್ತೆನೆ. ಎಂಬ ಹಂಬಲದೊಂದಿಗೆ ಈ ಒಂದು ಪುಟ್ಟ ಲೇಖನ ದ ಮಧ್ಯೆ ನನ್ನ ಕೆಲವು ಅನುಭವಗಳನ್ನು ತಮ್ಮ ಎದುರಿಗೆ ಹಂಚಿಕೊಂಡಿದ್ದೇನೆ 
       
     - ಸ್ವರೂಪ.ಎಸ್.ನಾಗೂರೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...