*ವಿಷಯ:-ಮಕ್ಕಳಲ್ಲಿ ಪತ್ರಿಕೆ ಪಾಕ್ಷಿಕ,ಓದುವ ಹವ್ಯಾಸ ಕಡಿಮೆಯಾಗಿದೆಯೇ?*
*ಇವುಗಳನ್ನು ಓದುವುದರ ಪ್ರಯೋಜನಗಳೇನು?*
ಪತ್ರಿಕೆ ಓದುವುದು ಒಂದು ಹವ್ಯಾಸ,ಸುತ್ತಲಿನ ಸಮಾಚಾರವನ್ನ ಅರಿಯಲು ಇದೊಂದು ಸಮೂಹ ಸಂಪರ್ಕ ಸಾಧನ.ಈ ಹಿಂದೆ ಇದರ ಬಳಕೆ ತುಂಬಾ ಇತ್ತು,ಈಗಲೂ ಹಿರಿಯರು ಮುಂಜಾನೆ ಓದುತ್ತಾರೆ.ಇಂತಹ ಪತ್ರಿಕೆ,ಪಾಕ್ಷಿಕ ಪತ್ರಿಕೆಗಳನ್ನ ನಾವು ಚಿಕ್ಕವರಿದ್ದಾಗ ಆಸಕ್ತಿಯಿಂದ ಓದುತ್ತಿದ್ದೆವು.ಚಂದಮಾಮ,ಚಂಪಕ,ಬಾಲಮಿತ್ರ,ಬಾಲಮಂಗಳ.ಇತ್ಯಾದಿ ಮಕ್ಕಳ ಜ್ಞಾನದ ಖಜಾನೆಗಳಾಗಿದ್ದವು.ಎಳೆಯರ ಅಂಗಳದಲ್ಲಿ ಬರುತ್ತಿದ್ದ ಕಾರ್ಟೂನ್ ಗಳಾದ ಡಿಂಗ,ರಾಮನ್,ಪ್ಯಾಂಟಮ್,ಮಾಂಡ್ರೇಕ್,ಬೇತಾಳದ ಕಥೆಗಳು ಹಾಗೂ ಪ್ರಾಣಿಪ್ರಪಂಚ ವಿವಿಧ ಮಕ್ಕಳ ಕಥೆಗಳನ್ನ ಖುಷಿಯಿಂದ ಓದುತ್ತಿದ್ದೆವು,ಈಗಲೂ ಅವುಗಳು ನೆನಪಿನಲ್ಲಿ ಅಚ್ಚಳಿಯದೇ ಉಳಿದಿವೆ.
ಅಂದಿನಿಂದಲೂ ಇಲ್ಲಿನವರೆಗೂ ಎಲ್ಲಾ ಪತ್ರಿಕೆಗಳಲ್ಲೂ ಮಕ್ಕಳ ಪುರವಣಿ ಎಂಬ ಅಡಿಷನಲ್ ಪ್ರತಿಗಳು ಬರುತ್ತವೆ,ಆದರೆ ಇಂದಿನ ಮಕ್ಕಳಲ್ಲಿ ಇವುಗಳ ಓದುವ ಆಸಕ್ತಿ ಕಡಿಮೆಯಾಗಿದೆ.ಇವೆಲ್ಲವುಗಳ ಸ್ಥಾನದಲ್ಲಿ ಮೊಬೈಲ್ ಬಂದು ನಿಂತಿದೆ,ಇಂದಿನ ಮಕ್ಕಳು ಮೊಬೈಲ್ ಗೇಮ್ ಆಡುವುದರಲ್ಲೇ ತಲ್ಲೀನರಾಗಿರುತ್ತಾರೆ.ಪತ್ರಿಕೆ,ಪಾಕ್ಷಿಕಗಳ ಕಡೆಗೆ ಗಮನ ಕಡಿಮೆಯಾಗುತಿದೆ.
ಆದರೂ ನಮ್ಮ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆಗಳಲ್ಲಿ ಬರುವ ವಿಶೇಷ ಪುರವಣಿಗಳನ್ನ ಸಂಗ್ರಹಿಸಿ ವಾರದಲ್ಲಿ ಒಂದು ಅವಧಿ ಓದುವಿಕೆಗೆ ಅವಕಾಶ ಮಾಡಿಕೊಟ್ಟಿದ್ದೇವೆ.ಇಂತಹ ನಿಯತಕಾಲಿಕೆಗಳನ್ನ ಮಕ್ಕಳು ಓದುವುದರಿಂದ ಅದರಲ್ಲಿನ ರಸಪ್ರಶ್ನೆ,ಇತರೆ ಜ್ಞಾನಾರ್ಜನೆಗೆ ಸಂಬಂಧಿಸಿದ ವಿಶೇಷತೆಗಳನ್ನ ಅರಿಯುವುದರಿಂದ ಜ್ಞಾನಸಂಪತ್ತು ಹೆಚ್ಚುತ್ತದೆ,ಕಥೆ,ಕವಿತೆ,ಚಿತ್ರಕಲೆಗಳ ಕಡೆ ಆಸಕ್ತಿ ಮೂಡುತ್ತದೆ.ಓದುವ ಮತ್ತು ಬರವಣಿಗೆ ಕೌಶಲ್ಯ ವೃದ್ಧಿಸುತ್ತದೆ.ಭಾಷಾ ಜ್ಞಾನ,ಒಲವು ಮೂಡುತ್ತದೆ.ಮನೆಯಲ್ಲಿಯೂ ಸಹ ಮಕ್ಕಳಿಗೆ ನಿಯತಕಾಲಿಕೆಗಳ ಓದುವ ಹವ್ಯಾಸಗಳನ್ನ ಬೆಳೆಸಬೇಕಿದೆ.ಕೇವಲ ದೂರದರ್ಶನ,ಮೊಬೈಲ್ ಗಳ ವೀಕ್ಷಣೆಯಿಂದ ಕಣ್ಣುಗಳಿಗೆ ಹೆಚ್ಚು ತೊಂದರೆ ಆಗುವುದರಿಂದ ಅವುಗಳಿಂದ ಅದಷ್ಟು ಮಕ್ಕಳನ್ನ ದೂರವಿರಿಸಿ,ಪತ್ರಿಕೆ,ಪಾಕ್ಷಿಗಳನ್ನ,ಮಕ್ಕಳ ಕಥೆ ಪುಸ್ತಕಗಳನ್ನ ಇನ್ನು ಮುಂದಾದರೂ ಅವರ ಕೈಗೆ ಕೊಡೋಣ.ಓದುವ ಹವ್ಯಾಸ ರೂಢಿಸೋಣ.
*ಆನಂದಜಲ,ಶಿಕ್ಷಕಿ.*ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ
*ತುರುವೇಕೆರೆ*
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ವಾಟ್ಸಪ್ ಮಾತ್ರ )
ನಿಜ. ಈಗಿನ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಇಂಥ ಲೇಖನಗಳು ನಮ್ಮನ್ನು ಎಚ್ಚರಿಸುವ ಗಂಟೆಗಳಾಗಿವೆ. ಉತ್ತಮ ಹಾಗೂ ಸಮಯೋಚಿತ ಲೇಖನಕ್ಕಾಗಿ ಧನ್ಯವಾದಗಳು
ಪ್ರತ್ಯುತ್ತರಅಳಿಸಿಚನ್ನಾಗಿದೆ
ಪ್ರತ್ಯುತ್ತರಅಳಿಸಿ