ಬಡವನ ಆಸೆ
ಬಡವರು ಜೀವನದಲ್ಲಿ ನೊಂದು ಬೆಂದು ಬದುಕಿನ ಗಾಡಿ ಎಳೆಯ ಲ್ಲೂ ಶಕ್ತಿಮೀರಿ ಪ್ರಯತ್ನ ಮಾಡಿದರು ಯಶಸ್ವಿಯಾಗುವುದಿಲ್ಲ ಒಂದು ಕಡೆ ಬರಗಾಲ ಮತ್ತೊಂದು ಕಡೆ ನೆರೆಹಾವಳಿ ಇದರ ಜೊತೆ ಸರ್ಕಾರವು ಸೇರಿಕೊಂಡಿದೆ ಏಕೆಂದರೆ ಸರಿಯಾದ ಬೆಲೆ ಸಿಗದೆ ಪ್ರತಿವರ್ಷ ಲಕ್ಷಾಂತರ ರೈತರು ಸಾವಿನ ಹಾದಿ ಹಿಡಿದಿದ್ದಾರೆ ಇದರ ಜೊತೆ ಜೀವನದಲ್ಲಿ ಬರುವ ನೋವು-ನಲಿವು ನಾಣ್ಯದ ಎರಡು ಮುಖವಿದ್ದಂತೆ ನೋವಿನಲ್ಲಿ ಕೆಲಸ ಮಾಡುತ್ತಿರುವಾಗ ಸಂತೋಷ ಎದ್ದುಕಾಣುತ್ತದೆ ಜೀವನದಲ್ಲಿ ಎಲ್ಲಾ ಸಮಸ್ಯೆಗಳ ನಡುವೆ ಹೋರಾಟ ಮಾಡಿ ಕೈಕಾಲು ಸೋತು ಹೋಗಿದೆ ಪ್ರತಿಯೊಂದು ಪ್ರಾಣಿ ಅಥವಾ ಜೀವಿಗಳ ಜೊತೆಮನಬಿಚ್ಚಿ ಮಾತನಾಡಲು ಸಂತೋಷವಾಗುತ್ತಿದೆ ಆಕಾಶದಲ್ಲಿ ಮಿನುಗುವ ಕೋಟ್ಯಾಂತರ ತಾರೆಗಳಂತೆ ಕುಣಿಯುವ ಆಸೆ ಎಂಬ ಬಯಕೆ ಮನವನ್ನು ಕದಡುತ್ತದೆ ಹುಣ್ಣಿಮೆಯ ರಾತ್ರಿಯಲಿ, ನಿನ್ನ ಜೊತೆ ಸೇರಬೇಕು ಆಸೆ ಮನದಲ್ಲಿ ಉಂಟಾಗುತ್ತದೆ ದುಃಖ ಮರೆತು ನಿರಾಶೆಗಳನ್ನು ಹೊರಹಾಕಿ ತುಂಗಭದ್ರೆಯ ಮನ ಮನೋಹರ ಸುಂದರ ಪರಿಸರದಲ್ಲಿ ಮಂಗನಂತೆ ಜಿಗಿದು ನೆಮ್ಮದಿಯ ಶಾಂತಿ ಪಡೆಯಬೇಕು ಎಂಬ ಆಸೆ ಮನಸ್ಸಿನಲ್ಲಿ ಕಾಡುತ್ತಿದೆ ಜೀವನದಲ್ಲಿ ನೊಂದು ಬೆಂದ ಹಸಿ ನೆನಪು ತಿನ್ನಲು ಏನು ಇಲ್ಲದೆ ತಂಗಳು ಅನ್ನವೇ ಹೊಟ್ಟಿಗೆ ಶಾಂತಿಯ ಜಪ ಮಾಡುತ್ತಿದೆ ಏಕೆಂದರೆ ಕಷ್ಟಕಾಲದಲ್ಲಿ ಹಳಸಿದ ಅನ್ನ ವೇ ನಮ್ಮನ್ನು ಕಾಪಾಡಿದೆ ಹೊಟ್ಟೆಯ ತಳಮಳ ತಾಳಹಾಕುತ್ತ ಜೀವನ ಮುಂದಿನ ದಾರಿ ತೋರಿಸಿದೆ ನನ್ನ ನಿರಾಸೆಯ ಜೀವನವನ್ನು ನಿಮ್ಮ ಜೊತೆ ಹೇಳಿಕೊಳ್ಳಲು ಸಂತೋಷವಾಗುತ್ತಿದೆ ಸಾಲ ಇಂದು ಜೀವನದ ಅಂಗ ಪ್ರತಿಯೊಂದಕ್ಕೂ ಸಾಲದ ಶೂಲಕ್ಕೆ ಬೆಂದು ಸಾಲದ ಜೊತೆ ಬಡ್ಡಿ ಮಂಗನ ಬಾಲದಂತೆ ಹೆಚ್ಚಾಗುತ್ತಾ ಜೀವನದ ಮೇಲೆ ಕಲ್ಲು ಹಾಕಿ ಬದುಕಿನ ದಾರಿಯಲ್ಲಿ ಸಾಗುತ್ತದೆ ಸಾಲ ಮಾಡುವಾಗ ಕೈಗಳು ಮುಂದೆ ಬಂದಾಗ ಸಾಲ ಮರು ಪಾವತಿ ಮಾಡುವಾಗ ಕೈಗಳು ನಡುಗುತ್ತವೆ ಸಾಲದ ಭಾದೆಯಲ್ಲಿ ಕೊರಳಿಗೆ ಹಗ್ಗಹಾಕಿಕೊಳ್ಳಲು ನನ್ನ ಆಸೆಯನ್ನು ಹೇಳುತ್ತಿದ್ದೇನೆ ನಿಮಗೆ ಸಾಲದ ಭಾದೆ ನಾಲಿಗೆಯಲ್ಲಿ ಹಾವಿನ ನಂಜು ರಕ್ತದಲ್ಲಿ ಸೇರಿಕೊಂಡಿದೆ ಕಣ್ಣಲ್ಲಿ ಬರುವ ನೀರು ವರಿಸಿದರು ಕೂಡ ನಿಮ್ಮ ಜೊತೆ ಕೂಡ ಬೇಕು ಆಸೆ ನನಗೆ,
-ದಯಾನಂದ ಪಾಟೀಲ ಲೇಖಕರು
ಸಂಚಾಲಕರು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ