ಶುಕ್ರವಾರ, ಜುಲೈ 9, 2021

ಗೊತ್ತಾಗಲೇ ಇಲ್ಲ (ಕವಿತೆ) - ಶ್ರೀ ಮತಿ ಸವಿತಾ ಆರ್ ಅಂಗಡಿ.

ಗೊತ್ತಾಗಲೇ ಇಲ್ಲಾ.


ದಿನಗಳು ಕಳೆದವು.  ಹೇಗೆ ಕಳೆದವು.
ಗೊತ್ತಾಗಲೇ ಇಲ್ಲಾ.
ಬದುಕಿನ ಓಟದಲಿ  ಉರುಳಿದವು  ವರ್ಷಗಳು.
ಗೊತ್ತಾಗಲೇ ಇಲ್ಲಾ.
ಹೆಗಲೇರಿ ಆಡುತ್ತಿದ್ದ ಮಕ್ಕಳು  ಹೆಗಲವರೆಗೆ  ಬೆಳೆದದ್ದು
ಗೊತ್ತಾಗಲೇ ಇಲ್ಲಾ.
ಬಾಡಿಗೆಯ  ಪುಟ್ಟ ಮನೆಯಿಂದ ಸ್ವಂತ ಗೂಡಿನೊಳಗೆ ಬಂದದ್ದು.
ಗೊತ್ತಾಗಲೇ ಇಲ್ಲಾ.
ಸೈಕಲ್ ಏರಿ ಏರಿ ಎದೆಯುಸಿರು ಬಿಡುತ್ತಿದ್ದ ನಾವು
ಕಾರಿನಲ್ಲಿ ಯಾವಾಗ ನುಸುಳಿದೆವೂ
ಗೊತ್ತಾಗಲೇ ಇಲ್ಲಾ.
ಅಮ್ಮಾ ಅಪ್ಪನ ಹೊರೆಯಾಗಿದ್ದ
ನಾವು ಮಕ್ಕಳ ಹೊರೆ ಯಾವಾಗ ಹೊತ್ತೆ ವೊ
ಗೊತ್ತಾಗಲೇ ಇಲ್ಲಾ.
ಗಂಟೆಗಟ್ಟಲೆ ಮಲಗಿ ಗೊರಕೆ  ಹೊಡೆಯುತ್ತಿದ್ದ ನಮ್ಮ ನಿದ್ರೆ
 ಯಾವಾಗ ಹಾರಿತು
 ಗೊತ್ತಾಗಲೇ ಇಲ್ಲಾ.
 ದಟ್ಟ ಕೂದಲಿನಲ್ಲಿ ಬೆರಳಾಡಿಸಿ ಸುಖಿಸಿದ ಕ್ಷಣಗಳು ಮನದಲ್ಲಿ ಇರುವಾಗಲೇ
 ನಮ್ಮ ಕೂದಲು ಬಿಳಿಯಾಗಿದ್ದು
 ಗೊತ್ತಾಗಲೇ ಇಲ್ಲ.
 ಮಕ್ಕಳು ಮಕ್ಕಳೆಂದು ಹಲವು ಉಳಿಸಿ ಉಳಿಸುವಲ್ಲಿ ಆ ಮಕ್ಕಳ ದೂರವಾಗಿದ್ದು
 ಗೊತ್ತಾಗಲೇ ಇಲ್ಲ.
 ನಾವು ನಮ್ಮವರು ಎಂದು ಎದೆಯುಬ್ಬಿಸಿ ಮೆರೆದ ನಮಗೆ
 ಅವರೆಲ್ಲ ದೂರಾಗಿ ಒಂಟಿ ಯಾದದ್ದು
 ಗೊತ್ತಾಗಲೇ ಇಲ್ಲಾ.
 ನಮಗಾಗಿ ಏನಾದರೂ ಮಾಡಬೇಕೆಂದಾಗ ದೇಹ ಸಹಕರಿಸದೆ ಇದ್ದದ್ದು
 ಗೊತ್ತಾಗಲೇ ಇಲ್ಲಾ.
 ಹೀಗೆ ಗೊತ್ತಾಗುವ ಮುನ್ನವೇ ಘಟಿಸುವ ಬದುಕಿನ ಬಗೆಗೆ ಒಂದು ಬೆರಗಿನ ನೋಟವಿರಲಿ ಜೊತೆಯಲ್ಲಿ ಇರುವವರನ್ನು ನೋಯಿಸದೆ ಮೊದ ನೀಡುವ ಮನಸಿರಲಿ.


✍️ ಸವಿತಾ  ಆರ್ ಅಂಗಡಿ. ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...