ಶುಕ್ರವಾರ, ಜುಲೈ 9, 2021

ಗಜಲ್ - ಶ್ರೀ ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ.

ಗಜಲ್

ಬಣ್ಣದ ಲೋಕದಲ್ಲಿ ಬಣ್ಣ ಹಚ್ಚಿಕೊಂಡು ಬೆಳೆವವರೇ ಹೆಚ್ಚು ಸಾಕಿ
ಕಣ್ಣದೃಷ್ಟಿಗೂ ಪೊರೆಯ ಬೆಳಸಿಕೊಂಡು ಬಾಳುವವರೇ ಹೆಚ್ಚು ಸಾಕಿ

ಕಾಣುವ ಸತ್ಯಗಳಿಗೂ ಅಸತ್ಯದ ಮಸಿ ಬಳಿಯುವವರೇ ಬಹಳವಿಲ್ಲಿ
ಕಣ ಕಣದಲ್ಲು ಕಾಂಚಾಣದ ಕನಸಕಂಡು ಮೆರೆಯುವವರೇ ಹೆಚ್ಚು ಸಾಕಿ

ಸುಖದ ಕಲ್ಪನೆಯ ವಿಲಾಸದಿಂದ ವಾಸ್ತವತೆಗೂ ಕಪ್ಪುಛಾಯೆಯಿಲ್ಲಿ
ಮುಖದ ಕಾಂತಿಗೂ ಮುಖವಾಡ ಧರಿಸಿಕೊಂಡು ಬದುಕುವವರೇ ಹೆಚ್ಚು ಸಾಕಿ

ಒಳಗೊಂದು ಹೊರಗೊಂದು ಹರಿದಿದೆ ಕರಿರಕ್ತ ಭಾವಯಾನದಲ್ಲಿ
ಮನದತೃಪ್ತಿಗೆ ಒಳದಾರಿ ಹುಡುಕಿಕೊಂಡು ಉಸಿರಾಡುವವರೇ ಹೆಚ್ಚು ಸಾಕಿ

ದುರಾಸೆಯೇಕೆ ಕೊನೆಗೊಂದು ದಿನ ಮುಗಿಸುವ ಪಯಣದಲ್ಲಿ
ಮನದ ತೆರೆಯನೊಮ್ಮೆ ಕಳಚಿಕೊಂಡು ಸುಖಿಸದಿರುವವರೇ ಹೆಚ್ಚು ಸಾಕಿ 
       
        --- ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...