ಶುಕ್ರವಾರ, ಜುಲೈ 9, 2021

ಯಶಸ್ವಿಯಾಗಿ ಮೂಡಿ ಬಂದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾವೇರಿ ಘಟಕದ 'ಅಪ್ಪಾ' ಕವಿಗೋಷ್ಠಿ.

ಯಶಸ್ವಿಯಾಗಿ ಮೂಡಿ ಬಂದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾವೇರಿ ಘಟಕದ 'ಅಪ್ಪಾ' ಕವಿಗೋಷ್ಠಿ.

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾವೇರಿ ಜಿಲ್ಲೆಯ ವತಿಯಿಂದ ಹಮ್ಮಿಕೊಂಡಿದ್ದ ಅಪ್ಪನ ಕುರಿತಾದ ಕವಿಗೋಷ್ಠಿ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು ರಾಜ್ಯದಾದ್ಯಂತ ೭೦ ಕ್ಕೂ ಹೆತುಂಬಾದಸಾಹಿತಿಗಳು ಭಾಗವಹಿಸಿದ್ದು ಕಾರ್ಯಕ್ರಮ ತುಂಬಾ ವರ್ಣರಂಜಿತವಾಗಿ ಮೂಡಿ ಬಂದಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅಪ್ಪ ಎನ್ನುವ ಸಂಸಾರದ ನೊಗಹೊತ್ತ ಜೀವದ ಬೆವರು ನಮಗೆ ಕಾಣದು. ಕಣ್ಣೀರು ಸುರಿಸುವ ಅಮ್ಮನಷ್ಟೆ ಅವನು  ಶ್ರಮವಹಿಸಿರುತ್ತಾನೆ. ಅತ್ತಾಗ ಬಿಗಿದಪ್ಪಿ ಬಿದ್ದಾಗ  ಮೇಲೆತ್ತುವ ಅಪ್ಪನ ಕೋಪವೂ ಸಹಿ ಬದುಕಿನಲ್ಲಿ ತುಂಬಾ ಸಕಾರಾತ್ಮಕವಾದದ್ದು. ಅಪ್ಪಂದಿರ ದಿನ ಆಚರಣೆಗೆ ಬರಲು ಕಾರಣ ಯುನೆಟೆಡ್ ಸ್ಟೇಟ್ಸನಲ್ಲಿ ಒಂದು ಬಾರಿ ಭೀಕರ ಅಪಘಾತ ಸಂಭವಿಸಿದಾಗ ಆ ಅಪಘಾತದಲ್ಲಿ ಬಹಳಷ್ಟು ಜನ ಪುರುಷರು ಮರಣವನ್ನು ಅಪ್ಪುತ್ತಾರೆ ಇದರಲ್ಲಿ ಒಬ್ಬರ ಮಗಳು ಗ್ರೇಸ್ ಗೋಲ್ಡನ್ ಕ್ಲೆಟೆನ್ ಎಂಬುವವಳು ತನ್ನ ತಂದೆಯ ಮರಣಕ್ಕೆ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ ೨೦ ರಂದು ಈ ದಿನವನ್ನು ಅಪ್ಪಂದಿರ ದಿನವಾಗಿ ಆಚರಿಸಲು ಆರಂಭಿಸಿದಳು ಈ ಸಂಪ್ರದಾಯ ಹಾಗೆ ಮುಂದುವರೆದು ಅಲ್ಲನ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಅವರು ಈ ದಿನವನ್ನು ವಿಶ್ವ ತಂದೆಯರು ದಿನವನ್ನಾಗಿ ಆಚರಿಸಲು ಘೋಷಿಸಿದರು. ಎಂದು ನುಡಿದರು. ಪ್ರತಿಯೊಬ್ಬರೂ ಬಾಲ್ಯದಲ್ಲಿ ತಮ್ಮನ್ನು ಪ್ರೀತಿಯಿಂದ ಸಾಕಿದ ತಂದೆಯನ್ನು ಮುಪ್ಪಿನವಸ್ಥೆಯಲ್ಲಿ ಮರೆಯದಿರಲಿ ಎಂದು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ನುಡಿದ ಡಾ.ಮಾರುತಿ ಶಿಡ್ಲಾಪುರ್ ಸರ್ ಅವರು ಉಣಬಡಿಸಿದರು. ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ಸುರೇಶ್ ಮಲ್ಲಾಡದ್ ಅವರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯನ್ನು ನಿರಂತರವಾದ ಕಾರ್ಯ ಚಟುವಟಿಕೆಗಳ ಮೂಲಕ ಹಾವೇರಿ ಜಿಲ್ಲೆಯಲ್ಲಿ ಮುನ್ನೆಡೆಸುವ ಮೂಲಕ ಕ್ರಿಯಾಶೀಲವಾಗಿ ಕೊಂಡುಯ್ಯುವ ಭರವಸೆಯನ್ನು ವ್ಯಕ್ತ ಪಡಿಸಿದರು ಹಾಗೂ ರಾಜ್ಯ ಸಂಚಾಲಕರಾದ ಹಾಗೂ ಉತ್ತಮ ಸಾಹಿತಿಗಳು,ಸಂಘಟಕರು ಆದ ಸಂತೋಷ್ ಬಿದರಗಡ್ಡೆ ಅವರು ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನು ನೇಮಿಸಿದ್ದು. ಜಿಲ್ಲಾ ಪದಾಧಿಕಾರಿಗಳ ನೇಮಕಾತಿಯೂ ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತೋಷ್ ಬಿದರಗಡ್ಡೆ ಅವರು ತಮ್ಮ ಬಾಲ್ಯದ ಅಪ್ಪನ ಪ್ರೀತಿಯನ್ನು ಭಾವನಾತ್ಮಕವಾಗಿ ನೆನೆಯುತ್ತಾ ಪ್ರತಿಯೊಬ್ಬರ ಬದುಕಿಗೆ ಅಪ್ಪ ಅನಿವಾರ್ಯ ಪಾತ್ರವಾಗಿದ್ದು ಚಿಕ್ಕ ವಯಸ್ಸಿಗೆ ತಮ್ಮ ತಂದೆಯನ್ನು ಕಳೆದುಕೊಂಡು ಕೊರತೆ ಅನುಭವಿಸಿದ ಬಗೆಯನ್ನು ತುಂಬಾ ಮಾರ್ಮಿಕವಾಗಿ ವಿವರಿಸಿದರು. ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯು ಸಕ್ರೀಯವಾಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಬಗೆ ಹಾಗೂ ಸಹೋದರಿ,ಸ್ನೇಹಿತೆ ಗಿರಿಜಾ ಮಾಲಿ ಪಾಟೀಲ ಒಬ್ಬ ಮಹಿಳೆಯಾಗಿ ದಕ್ಷತೆಯಿಂದ ಕೊಂಡುಯ್ಯುತ್ತಿರುವ ಬಗೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಹಾಗೂ ಈ ದಿನದ ಅಪ್ಪನನ್ನು ಕುರಿತಾದ ಕವಿಗೋಷ್ಠಿ ನಮ್ಮೆಲ್ಲರನ್ನೂ ಭಾವನಾ ಲೋಕದಲ್ಲಿ ತೇಲಿಸಿತು ಎಂದರು. ನಿಜಕ್ಕೂ ಅಪ್ಪಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಹಲವು ಕವಿಗಳು ಕವಿತೆ ಓದುತ್ತಲೆ ಕಳೆದುಕೊಂಡ ತಂದೆಯ ಪ್ರೀತಿಯನ್ನು ನೆನಪಿಸಿಕೊಂಡು ಕಣ್ಣೀರಾಗಿದ್ದಂತು ಸತ್ಯ. ಎಲ್ಲರನ್ನೂ ಭಾವನಾ ಲೋಕದಲ್ಲಿ ತೇಲಿಸಿದ ಈ ಕವಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಮತಿ ಪಾರ್ವಾತಿ ಕಾಶಿಕರ್ ಅವರು ಮುಖ್ಯ ಅತಿಥಿಗಳ ನುಡಿಯಲ್ಲಿ ಸಾಹಿತ್ಯ ವೇದಿಕೆಗಳ ಸಕಾರಾತ್ಮಕ ಚಟುವಟಿಕೆಗಳನ್ನು ನೆನೆಯುತ್ತಾ  ಇತ್ತೀಚೆಗೆ ಎಲ್ಲಾ ಸಾಹಿತ್ಯ ವೇದಿಕೆಗಳೂ ಯುವ ಬರಹಗಾರರನ್ನು ಹುರಿದುಂಬಿಸಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆಯಲು ಪ್ರೇರಣದಾಯಕವಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ. ವೇದಿಕೆ ಯಾವುದಾದರೇನು ಗುರಿ ಒಂದೆ ಸಾಹಿತ್ಯ ಸೇವೇಗೆ ನಿಂತ ಎಲ್ಲಾ ವೇದಿಕೆಗಳಿಗೂ ಶ್ರೀ ಸಿದ್ದೇಶ್ವರರ ಆಶಿರ್ವಾದ ಇದೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಇಂಗಳಿಗಿ ದಾವಲ್ ಮಲಿಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾವೇರಿ ಇವರು ವಹಿಸಿಕೊಂಡಿದ್ದರು. ದೀಪಾ ನಿರೂಪಿಸಿದರು. ಅತಿಥಿಗಳಾಗಿ ಶ್ರೀಮತಿ ಪುಷ್ಪ ಮಂಜುನಾಥ, ಹಾನಗಲ್ ತಾಲೂಕು ಅಧ್ಯಕ್ಷರಾದ ಬಸವಣ್ಣಯ್ಯ ಶಾಸ್ತ್ರಿ ವೆಂಕಟಾಪುರ ಮಠ, ಹಾವೇರಿ ತಾಲೂಕು ಅಧ್ಯಕ್ಷರಾದ ಮಮತಾ ಪೂಜಾರಿ, ಶಿಗ್ಗಾಂವಿ ತಾಲೂಕಿನ ಅಧ್ಯಕ್ಷರಾದ ನಾಗಪ್ಪ ಬೆಂತೂರ್, ರಾಣೆಬೆನ್ನೂರು ತಾಲ್ಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಯವರು, ಸವಣೂರು ತಾಲೂಕು ಅಧ್ಯಕ್ಷರು ಶ್ರೀ ಸಿ.ಎಸ್.ಪಾಟೀಲ್ ಅವರು ಹಿರೆಕೆರೂರು ಅಧ್ಯಕ್ಷರಾದ ಶ್ರೀಮತಿ ಜಯಮ್ಮ ಕೆರೂರು ಅವರು ಉಪಸ್ಥಿತರಿದ್ದರು. ಡಾ.ಸುರೇಶ್ ನೆಗಳಗುಳಿಯವರಿಂದ ಪ್ರಾರಂಭವಾದ ಕವಿಗೋಷ್ಠಿಯಲ್ಲಿ ಮೈಸೂರಿನ ಶೋಭಾ ನಾಗಭೂಷಣ, ಭಾಗ್ಯಗಿರೀಶ್ ಹೊಸದುರ್ಗ, ರಶ್ಮಿ ಸನೀಲ್ ಕಾವ್ಯ ವಾಚನ ಮಾಡಿದರು. ಒಟ್ಟಿನಲ್ಲಿ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿ ಬಂದಿತು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...