ಶನಿವಾರ, ಜುಲೈ 10, 2021

ಭಕ್ತ ಕನಕದಾಸ (ಕವಿತೆ) - ಸಂಗಮೇಶ ಎನ್ ಜವಾದಿ.

 ಭಕ್ತ ಕನಕದಾಸ
------
ಕೀರ್ತನೆ,ಪ್ರವಚನೆ ಹೇಳುತ್ತಾ,ಪ್ರಾಮಾಣಿಕತೆಯ ಬೀಜವ ಬಿತ್ತಿ,ಸೌಹಾರ್ದತೆಯ ಸೌಧ ಕಟ್ಟಿ,ಸತ್ಯ ತತ್ವದ ಸೇವಕರಾಗಿ,
ಭಕ್ತಿಯ ಸನ್ಮಾರ್ಗದ ಪ್ರೇರಕ,ಸರ್ವಜನಾಂಗದ ಕಿಂಕರ, 
ದಾಸರಲ್ಲಿಯೇ ಸರ್ವ ಶ್ರೇಷ್ಠ ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ.

ಭಕ್ತಿಯ ಬಂಡಾರಿ,ಸರ್ವಧರ್ಮ ಸಮನ್ವಯತೆಯ ಪ್ರತಿಪಾದಕ, ಸಕಲರಿಗೂ ಲೇಸನ್ನೇ ಬಯಸಿದ ಧೀಮಂತ,
ಮಾನವೀಯ ಗುಣಗಳನ್ನು ಸರ್ವರಿಗೂ ಬೋಧಿಸಿದ ಬೊಧಕ,ನಿಸ್ವಾರ್ಥ ಭಕ್ತಿಯೇ ಜ್ಞಾನಕ್ಕೆ ಮೂಲ ಎಂದ ದಾಸರ ದಾಸ ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ.

ಜಾತಿ ಮತ ಪಂಥಗಳನ್ನು ಬದಿಗೊತ್ತಿ, ಸಮಾನತೆಯ ಸಂದೇಶಗಳು ಸಾರಿದ ಸಾಧಕ,ಭಕ್ತಿ ತತ್ವ ಮೌಲ್ಯಗಳನ್ನು ಬೋಧಿಸಿದ ಸಂತ. ಅಜ್ಞಾನವನ್ನು ಅಳಸಿ, ಸುಜ್ಞಾನವನ್ನು ಬಿತ್ತಿದ ಕರುಣಾಮಯಿ ದಾಸರ ತಿಲಕ,
ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ.

ಮಮತೆ ಜ್ಯೋತಿ ಸರ್ವರಲ್ಲಿಯೂ ಹಚ್ಚಿದ ಕರುಣಾಮೂರ್ತಿ ಕಿಂಕರ.ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಎನ್ನುವ ನೀತಿಯ ಪಾಠವ ಸರ್ವರಿಗೂ ಉಣಬಡಿಸಿದ ಸಂತರ ಸಂತ ,ಮಾಹಾ ಸಂತ, ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ.


ರಚನೆ : - ಸಂಗಮೇಶ ಎನ್ ಜವಾದಿ.
9663809340.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಪಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...