ಸೋಮವಾರ, ಜುಲೈ 12, 2021

ಪ್ರಕೃತಿ ವೈಭವ (ಕವಿತೆ) - ಶ್ರೀಮತಿ ಕಮಲಮ್ಮ ಬೆಂಗಳೂರು.

ಪ್ರಕ್ರತಿ ವೈಭವ

ನೇಸರ ಮೂಡಿದನು ಮೂಡಣದ ಮಡಿಲಲ್ಲಿ
ಹಕ್ಕಿಗಳು ಚಿವ್ ಚಿವ್ ಎಂದು
ಹಾಡುವವವಿಲ್ಲಿ
ಮಂಜಿನ ಪರದೆ ಹಾಸಿತು ಹಸಿರhj
ಹೊದಿಕೆಯಲ್ಲಿ
ಕವಿಮನಕೆ ತೆರೆದಿದೆ
ಭಾವನೆಗಳು ಕಡಲಲ್ಲಿ!

ಕಿವಿಗೆ ಕೇಳಿದೆ ಝುಳು ಝುಳು
ಸಂಗೀತ!
ಹೂವ ರಸಹೀರುವ ದುಂಬಿಯ
ಗೀತ!
ವೈಯ್ಯಾರದಿ ಬೆಟ್ಟದಿಂದಿಳಿದ ನೀರ
ತಾಂಗುಡಿತ!
ಹಸಿರು ಕಾಡಿನ ಉಸಿರಿನ ತುಡಿತದ
ಮಿಡಿತ!

ಬಾನಂಗಳದಿ  ಮೂಡಿತು ಕಾಮನ
ಬಿಲ್ಲು!
ಅಲ್ಲಿ ಇಲ್ಲಿ ಎಲ್ಲೆಲ್ಲೂ ಬಣ್ಣಬಣ್ಣದ
ಹೂಗಳು!
ಬಿಸಿಲು ಇಣುಕದ ಹಚ್ಚಹಸಿರ ಚಾಮರ
ಕವಿಯ ಮನದಲಿ ಕೋಗಿಲೆಯ
ಕಲರವ!

ಮೂಡಿದೆ ಮನದಲಿ ರಂಗಿನ
ಕಾಮನಬಿಲ್ಲು
 ಕಂಗಳು ಹುಡುಕಿವೆ ಹೊಸ ತುಡಿತ
ಎಲ್ಲೆಲ್ಲೂ!
 ಆಕಾಶದಿ ಮಿನುಗುವ ನೀಲಿಯ ಬಣ್ಣದಲ್ಲೂ
ಅಂಬರವ ಆವರಿಸಿ ನಿಂತ ಕರಿಯ
ಕಾರ್ಮೋಡದಲ್ಲೂ

ಜುಯ್ಯೆನ್ನುವ ಜೀರುಂಡೆಯ ಸಂಗೀತದಲ್ಲೂ
 ಹ್ರದಯದಲಿ ಮೂಡಿ ಹೊರಹೊಮ್ಮಿವೆ ಕವಿತೆಗಳು
ನೀರೆಯ ಕಣ್ಣೋಟಕೆ ಹೋಲಿಕೆಯಾಯ್ತು ಕಮಲ
ನಡಿಗೆಯ ನರ್ತನಕೆ ಸಾಕ್ಷಿಯಾಯ್ತು
ನವಿಲು!
 - ಶ್ರೀಮತಿ ಕಮಲಮ್ಮ ಬೆಂಗಳೂರು. - ದಾವಣಗೆರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...