ಗಜಲ್
ಜೊತೆಯೆಂಬುದೇನೂ ಇಲ್ಲ! ಒಂಟಿಯಾಗಿರುವುದಷ್ಟೇ ಸತ್ಯ ಮತ್ತೇನು ಇಲ್ಲ ನಾಣಿ
ಜೊತೆಯಾದುದೆಲ್ಲ ಇರುವುದಿಲ್ಲ ಅರೆಗಳಿಗೆಯಷ್ಟೇ ಸತ್ಯ ಮತ್ತೇನು ಇಲ್ಲ ನಾಣಿ
ಬಂದೋಗುವ ಜೀವನದ ಜಾತ್ರೆಗಳು ಸಾಗುತ್ತವೆಯಷ್ಟೇ ನಿರಂತರ ಅರ್ಥವಿಲ್ಲ
ಉಳಿವು ಅಳಿವುಗಳ ಲೆಕ್ಕಾಚಾರ ನಿಮಿತ್ತವಷ್ಟೇ ಸತ್ಯ ಮತ್ತೇನು ಇಲ್ಲ ನಾಣಿ
ಅನಿಶ್ಚಿತವಾದ ಹುಟ್ಟು ಸಾವುಗಳು ಕಾಲರಾಯನ ಒಳಗುಟ್ಟು ಮಾತ್ರವೆ...
ಬಂದುದರ ವಿಪತ್ತುಗಳಿಗೆ ಶರಣಾಗುವುದಷ್ಟೇ ಸತ್ಯ… ಮತ್ತೇನು ಇಲ್ಲ ನಾಣಿ
ವಿಧಿಯೆಂಬುದು ಅನುಭವವಲ್ಲ ಕೇವಲ ನಂಬಿಕೆಯ ಅವಾಸ್ತವದ ಕಟುಮಿಥ್ಯ
ಎದುರಾದ ಅನುಭವಕ್ಕೆ ಬದುಕನ್ನು ತಿಕ್ಕಿನೋಡುವುದಷ್ಟೇ ಸತ್ಯ ಮತ್ತೇನು ಇಲ್ಲ ನಾಣಿಆಸೆಗಳ ತೊಳಲಾಟಕೆ ತನ್ನಯ ದೇಹವನ್ನು ದಂಡಿಸಬೇಡ ಪ್ರಯೋಜನವಿಲ್ಲ
ತಂತಿಯಿಲ್ಲದ ತಂಬೂರಿ ನುಡಿಯಬಾರದು ಬದುಕೆಂಬುದಿಷ್ಟೇ ಸತ್ಯ ಮತ್ತೇನು ಇಲ್ಲ ನಾಣಿ
--- ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ
ದೂರವಾಣಿ: ೯೭೩೧೫೧೪೦೫೧
ದೊಡ್ಡಬಳ್ಳಾಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )
ಸೂಪರ್ ಗುರುಗಳೇ 🙏🙏
ಪ್ರತ್ಯುತ್ತರಅಳಿಸಿ