ಶುಕ್ರವಾರ, ಜುಲೈ 16, 2021

ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. (ಲೇಖನ) - ಶ್ರೀ ಹಣಮಂತ ಪೂಜಾರಿ, ವಿಜಯಪುರ.

'ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ.'


ಪರಿಸರ ಎಂದರೇ ಒಂದು ಆನಂದ. ನೋಡುವ ನೋಟ,ದೃಷ್ಟಿ,ಕಣ್ಣಿಗೆ ಹಸಿರು ಕಂಡರೆ ಸಾಕು ಎಂತಹ ಕೆಟ್ಟ ಆಲೋಚನೆಗಳು,ತೊಂದರೇ,ಸಮಸ್ಯೆ,ಕಷ್ಟಗಳಿದ್ದರು ಕೂಡಾ ನಿಸರ್ಗ ನಮ್ಮನ್ನು ಬೇರೆಯ ದೃಷ್ಟಿಯ ಕಡೆ  ಸೆಳೆಯುತ್ತದೆ. ಏನೋ ಒಂದು ಸಂತಸ ಇಂತಹ ನಿಸರ್ಗದಲ್ಲಿ ಕುಳಿತು ಕುವೆಂಪು, ದ.ರಾ ಬೇಂದ್ರೆ,   ಕಾರಂತ, ಮಾಸ್ತಿ, ಮಧುರಚನ್ನರಂತಹ ಕವಿಗಳು ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಂತಹ ಕವಿಗಳು. ಅತಿ ಹೆಚ್ಚು ಹೆಚ್ಚು ಕಾದಂಬರಿ, ಕವನ, ಬರೆದಿದ್ದು ಕೂಡ ನಿಸರ್ಗದ ಮಧ್ಯದಲ್ಲಿಯೇ.ಹಲವಾರು ರೋಗಗಳನ್ನು, ದುಃಖಗಳನ್ನು ,ಚಟ ಗಳನ್ನು, ನಿವಾರಣೆ ಮಾಡಬಲ್ಲ ಏಕೈಕ ಶಕ್ತಿಯೆಂದರೆ ನಿಸರ್ಗ. ಅಂತಹ ನಿಸರ್ಗವನ್ನು ನಾವು ಹಾಳು ಮಾಡುವುದು ಯಾವ ನ್ಯಾಯ ಹೇಳಿ? 

  ಮನೆಗೊಂದು ಮಗು ಮಗನಿಗೊಂದು ಮರ ಎಂಬಂತೆ ನಾವು ಮರಗಳನ್ನು ಬೆಳೆಸಬೇಕು. ನಮ್ಮೂರಿನಲ್ಲಿ ರಸ್ತೆ ಮಾಡುವ ಸಂದರ್ಭದಲ್ಲಿ ದಡದಲ್ಲಿರುವ ಮರಗಳು ಕಡಿದರು ಆದರೆ ರಸ್ತೆ ಆಗಿ ಐದು ವರ್ಷ ಆಯ್ತು ಆದರೆ ಒಂದು ಗಿಡ ನೇಡಲಿಲ್ಲ,  ಇದ್ದ ಮರವನ್ನು ಕಡಿದರು  ಪರವಾಗಿಲ್ಲ ಆದರೆ ಮರಕಡಿದು ಗಿಡ ನೇಡಲಿಲ್ಲ ಎಂದರೆ ಹೇಗೆ?ಒಂದು ಮರ ಕಡಿದು ಎರಡು  ಸಸಿಗಳನ್ನು ನೆಡಬೇಕು. ಅಂದಾಗ ಮಾತ್ರ ಪ್ರಕೃತಿ ಉಳಿಯಲು ಸಾಧ್ಯ. ಯುವಕರಾದ ನಾವು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಯಾವುದೇ ರೀತಿಯಿಂದಲೂ ಸಸಿಗಳನ್ನು ನಾವು ಕಡಿಯಬಾರದು ನಾವು ಗಿಡ ನೇಡಲಿಲ್ಲ ಅಂದರೆ ಪರವಾಗಿಲ್ಲ ,ಆದರೆ ಮರ ಕಡಿಯುವ ಕೆಲಸ  ಮಾಡಬಾರದು ಕೆಲವು ಜನರಲ್ಲಿ ಅರಣ್ಯದ ಬಗ್ಗೆ ಅರಿವು  ಮೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ

   ಇವತ್ತಿನ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ನಾವು ಮೊದಲು ಪರಿಸರಕ್ಕೆ ಆಧ್ಯತೆ ಕೊಡೋಣ. ಏಕೆಂದರೆ ಮುಂದಿನ ಜೀವಜಗತ್ತು ನೋಡುವ ಪೀಳಿಗೆಯಲ್ಲಿ ಪರಿಸರದ ಭಾವ ಇನ್ನಷ್ಟು ಹೆಚ್ಚಿಗೆ ಮೂಡಲಿ, ಆದರೆ ಈಗ ನಮ್ಮೂರಿನಲ್ಲಿ ಸುಮಾರು ಕಡೆ ಸರ್ಕಾರಿ ಜಾಗದಲ್ಲಿ, ಆಸ್ಪತ್ರೆಯ ಮುಂದೆ, ಶಾಲೆಗಳಲ್ಲಿ ,ಮನೆಯ ಮುಂದೆ, ಬಹಳಷ್ಟು ಗಿಡಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪರಿಸರಕ್ಕೆ ನಾವು ದ್ರೋಹ ಮಾಡಿದರೆ ನಿಸರ್ಗ ನಮ್ಮನ್ನು ನಾಶಮಾಡುತ್ತದೆ. ಮುಂದಿನ ಜನಾಂಗಕ್ಕೆ ಕುಡಿಯಲು ನೀರು ಇಲ್ಲದಂತಾಗುತ್ತದೆ  ಹಾಗಾಗಿ ನಮ್ಮ ಮಾಧ್ಯಮದವರು, ಪತ್ರಿಕೋದ್ಯಮ ಪರಿಸರವನ್ನು ಕಾಪಾಡುವುದರಲ್ಲಿ ಅತಿಹೆಚ್ಚಿನ ಪಾತ್ರವಹಿಸುತ್ತದೆ. ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.ಇಂತಹ ನಿಸರ್ಗವನ್ನು ಕಾಪಾಡೋಣ,ಬೆಳೆಸೋಣ, ಉಳಿಸೋಣ.

   -   ಹಣಮಂತ ಪೂಜಾರಿ
ಪರಿಸರ ಪ್ರೇಮಿ ಕಾಲೇಜು ವಿದ್ಯಾರ್ಥಿ ವಿಜಯಪುರ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...