ಮಂಗಳವಾರ, ಜುಲೈ 13, 2021

ಬಾ ಮಳೆಯೇ ಬಾ.. (ಕವಿತೆ) - ಚೈತ್ರ ಚಿಕ್ಕಿ ಟಿ.

ಬಾ ಮಳೆಯೇ ಬಾ..

ಉರಿವ ಧರೆಯ ಮುಸುಕನು
ಹಸುನುಗೊಳಿಸು..
ನೀರಿನ ಸಾರವ ಹೀರಿ ಪಚ್ಚನೆಯ
ಪೈರು ಚಿಗುರಿಸು..
ಹೂವ ಮಕರಂದದಿ ಸೆಳೆಯಲು
ಜೇನ ಹನಿಸುರಿಸು..
ಅನ್ನದಾತರ ಕುಸಿಯುತಿಹ ಬಾಳಲಿ 
ಸಿಹಿಗನಸು ಮೂಡಿಸು..
ಜೇಂಕರಿಸಿ ಬೋರ್ಗೆರೆದು ಹಸಿರೆಲೆಗಳಲಿ 
ಸ್ವಾತಿ ಮುತ್ತು ಪೋಣಿಸು..
ಉಸಿರಿಗಾಗಿ ಹಸಿರು ನಿಲ್ಲಿಸಿ
ಬದುಕ ಬವಣೆ ನೀಗಿಸು..
ಲೋಕದ ದುಃಖದ ಮರಣ ಛಾಯೆ
ಮರೆಯಲು ತಂಪ ಹಾಯಿಸು..
ಬಾ ಮಳೆಯೇ.. ಬಾ..

✍🏾 ಚೈತ್ರ ಚಿಕ್ಕಿ ಟಿ ಹೋಲೇರಳ್ಳಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...