ಗುರುವಾರ, ಜುಲೈ 15, 2021

ಬಂಜಾರ ಜನಾಂಗದಲ್ಲಿ ಶೀತ್ಲ (ಸೀತ್ಲಾ)ಹಬ್ಬದ ಆಚರಣೆ (ಲೇಖನ) - ಶ್ರೀ ಮೋಹನ್ ಪ್ರಸಾದ ಎಸ್.

ಬಂಜಾರ ಜನಾಂಗದಲ್ಲಿ ಶೀತ್ಲ (ಸೀತ್ಲಾ)ಹಬ್ಬದ ಆಚರಣೆ. 

ಚಿಕನ್ ಪಾಕ್ಸ್. ಸ್ಮಾಲ್ ಪಾಕ್ಸ್. (ಶಿಡಬು). ಇವು ವೈರಾಣುವಿನಿಂದ ಬರುವ ರೋಗಗಳು. 16.17.18ನೇ ಶತಮಾನಗಳಲ್ಲಿ ಹೆಚ್ಚಾಗಿ ಜನರನ್ನು ಬಾಧಿಸುತ್ತಿದ್ದ ಕಾಯಿಲೆಗಳಿವು. ಮುಂದೆ 19-20 ನೇ ಶತಮಾನದಲ್ಲಿ  ವೈದ್ಯಕೀಯ ವಿಜ್ಞಾನ ಭಾರತದಲ್ಲಿ ಹೆಚ್ಚು  ಅಭಿವೃದ್ಧಿಯಾದದ್ದು. ಇದಕ್ಕೂ ಹಿಂದೆ ಜನರು ಈ ಕಾಯಿಲೆಗಳ ಹಾಗೂ  ಸಾವಿನ ಭಯದಿಂದ ಶಕ್ತಿ ದೇವತೆಯ ಮೊರೆ ಹೋಗುವುದು ಸಹಜವಾಗಿತ್ತು. ಇದು ಈಗಲೂ ಮುಂದುವರೆದಿದೆ.  ಅವರ ಮುಖ್ಯವಾಗಿ ಶಕ್ತಿ ದೇವತೆಯ ೭  ವಿವಿಧ ಅವತಾರಗಳನ್ನು  ಆರಾಧಿಸಿ ಪ್ರಾಣ ಭಿಕ್ಷೆ ಬೇಡುತ್ತಿದ್ದರು. ಆ ಎಲ್ಲಾ ಅವತಾರಗಳ ಒಟ್ಟಾರೆ ಸೂಚಕ ಪದವೇ." ಶೀತ್ಲ " ಅಥವಾ "ಸೀತ್ಲಾ" ಈಗ ಈ ಆಚರಣೆ ಬಂಜಾರ ಸಮುದಾಯದ  ಒಂದು ಪ್ರಮುಖ ಹಬ್ಬವಾಗಿ ಮಾಪ೯ಟ್ಟಿದೆ. 

ಗೋರ್ ಬಂಜಾರರು ತಮಗೆ ಹಾಗೂ ತಮ್ಮ ಸಂಪತ್ತಿನ ಸಂಕೇತವಾದ ಪಶುಗಳಿಗೆ ಹಾಗೂ ಮಕ್ಕಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಂದು ಪ್ರಾಣ ಹಾನಿಯಾಗದಂತೆ  ತಮ್ಮ ಕುಲದ ಶಕ್ತಿದೇವತೆಯಾದ ಮಯ೯ಮ್ಮ ತಾಯಿಯ ಸಪ್ತ ಅವತಾರಗಳನ್ನು ಪ್ರತಿನಿಧಿಸುವ 07 ಕಲ್ಲುಗಳ ಪೂಜೆ ಮಾಡುತ್ತಾರೆ. ಸಾಮಾನ್ಯವಾಗಿ ಈ ಹಬ್ಬವನ್ನಜ  ಜುಲೈ ತಿಂಗಳಿನ ಮೊದಲನೇ,  ಎರಡನೆಯ ಅಥವಾ ಮೂರನೆಯ ಮಂಗಳವಾರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೇ ಆಯ್ಕೆ ಮಾಡಿಕೊಂಡು ಆಚರಿಸುವ ಪದ್ದತಿ ಇದೆ. ಜುಲೈ ತಿಂಗಳ ಜಡಿ ಮಳೆಯಲ್ಲಿ ಮಯ೯ಮ್ಮ (ಯಾಡಿ)ಅಮ್ಮನ ಸನ್ನಿಧಿಯಲ್ಲಿ ಒಂದು ಬೇವಿನ ಮರದ ಬುಡದಲ್ಲಿ 07 ರೀತಿಯ ಕಲ್ಲುಗಳು ಇಟ್ಟು (ಮಯ೯ಮ್ಮ ಅಮ್ಮನ ಅವತಾರಗಳು)ಇರಿಸಿ ವಿವಿಧ ರೀತಿಯ ಹೂ, ಹಣ್ಣು, ಕುಂಕುಮ, ಸೋಪ್ಪುಗಳಿಂದ ಸಿಂಗಾರ ಮಾಡಿಕೊಂಡು ಪ್ರತಿ ಮನೆಯಿಂದ ತಂದಿರುವ ಕುರಿ ಕೋಳಿ (ಹುಂಜ)ಗಳ ರಕ್ತ ಧಾರೆ ಮಾಡಿ ನಂತರದಲ್ಲಿ ಶಕ್ತಿ ದೇವತೆಯ ಸ್ತೋತ್ರ ಪಠಿಸಿ ಪ್ರಾರ್ಥಿಸುವುದು ವಾಡಿಕೆ. 

ಸದಾ ಅಲೆಮಾರಿ ಬದುಕನ್ನು ರೂಢಿಸಿಕೊಂಡು ಅದೇ ಶಾಶ್ವತ ಎಂಬಂತೆ ಪ್ರಕೃತಿಮಾತೆಯ ಮಡಿಲಿನಲ್ಲಿ ಮಕ್ಕಳಂತೆ ಬದುಕಿ ಬಾಳಿದ ಬಂಜಾರರು ವಿವಿಧ ಋತುವಿನ ಮಳೆಯ ಕುರಿತು. ಗುಡುಗು, ಸಿಡಿಲು, ಮಿಂಚು, ಪರಿಸರ, ಪ್ರಾಣಿ,  ಮೊದಲಾದವುಗಳನ್ನು ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ ನಿಸರ್ಗದ ಬಗ್ಗೆ ನಿಷ್ಠೆ, ನಂಬಿಕೆ, ವಿಶ್ವಾಸಗಳನ್ನಿಟ್ಟುಕೊಂಡು ಹಬ್ಬ ಹರಿದಿನಗಳ ಮೂಲಕ ಆಚರಣಾ ಪದ್ಧತಿಗಳನ್ನು ಪಾಲಿಸುತ್ತಾ ಬಂದಿದ್ದಾರೆ. 

ಸಿಡಬು(ಬೋಜ್ರಿ ಲಂಬಾಣಿ ಭಾಷೆಯಲ್ಲಿ) ರೋಗದಿಂದ ತಮ್ಮ ವಂಶದ ಕುಡಿಯನ್ನು ರಕ್ಷಿಸಲು ತಮ್ಮ ಕುಲ ಶಕ್ತಿ ದೇವತೆಯ ಮೊರೆ ಹೋಗದೇ ಅನ್ಯ ಮಾಗ೯ವಿಲ್ಲ ಎಂಬುದು ಇವರ ನಂಬಿಕೆ. 
ಮಕ್ಕಳಿಗೆ  ಈ ರೋಗದಿಂದ ಬರುವ ಅತಿಯಾದ ಜ್ವರದ ತಾಪವನ್ನು ಕಡಿಮೆ ಮಾಡಲು ಬಂಜಾರರು ಊರಿನಲ್ಲಿ ಪೂಜಾರಿ ಸಲಹೆಯಂತೆ ಅರಿಶಿಣ, ಗೋಮೂತ್ರ, ಬೇವಿನ ಸೊಪ್ಪು ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿದ ನಂತರ ಹಾಲು, ಗೋಮೂತ್ರಗಳಿಂದ ತಲೆ ಸ್ನಾನಮಾಡಿಸುವರು. ಹಾಗೂ ನಂತರದಲ್ಲಿ ಜ್ವರವು ಕಡಿಮೆ ಆಗುತ್ತಿತ್ತು. ಇದೇ ಆಚರಣೆ  ಕಾಲಕ್ಕೆ ತಕ್ಕಂತೆ ಬದಲಾಗಿ ಈ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಒಂದು ಪ್ರಮುಖ ಹಬ್ಬವಾಗಿ ಬದಲಾಗಿದೆ. 



ಲೇಖಕರು :ಮೋಹನ್ ಪ್ರಸಾದ. ಎಸ್
ಸ್ನಾತಕೋತ್ತರ ವಿದ್ಯಾರ್ಥಿ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...