ಹೆಣ್ಣು ಅಬಲೆಯಲ್ಲ ಸಬಲೆ.
ಹೆಣ್ಣು ಹುಟ್ಟಿದ ತಕ್ಷಣವೇ ಅಯ್ಯೋ ಹೆಣ್ಣಾ ಯಿತು ಅನ್ನೂ ನಿರಾಶೆಯ ಮನೋಭಾವನೆ ವ್ಯಕ್ತ ಪಡಿಸುವರು. ಹೆಣ್ಣಿನಿಂದಲೇ ಸೃಷ್ಟಿ ನಿರ್ಮಾಣ ಅನ್ನುವದು ಮರೆಯಿತಾ ಈ ಜಗತ್ತು. ತಾಯಿಯಾಗಿ ಹೆಣ್ಣು ಬೇಕು. ಹೆಂಡತಿಯಾಗಿ ಹೆಣ್ಣು ಬೇಕು. ಮಗಳಾಗಿ ಯಾಕೆ ಹೆಣ್ಣು ಬೇಡ?. ಇವತ್ತಿನ ಜಗತ್ತಿನಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಬಹಳ ಕಡಿಮೆಯಾಗುತ್ತಾ ಬರತಾ ಇದೆ. ಹೆಣ್ಣಾಗಲಿ ಗಂಡಾಗಲಿ ಮಕ್ಕಳೇ ಅನ್ನುವ ಭಾವನೆ. ಸರಿ ಸಮನಾಗಿ ಕಾಣುವ ಮನೋಭಾವನೆ ಇರಬೇಕು. ಇಬ್ಬರಲ್ಲಿಯೂ ವ್ಯತ್ಯಾಸವಿರಕೂಡದು. ಗಂಡಿನಷ್ಟೇ ಹೆಣ್ಣಿಗೂ ಸ್ವತಂತ್ರ ಸಿಗಬೇಕು. ಹೆಣ್ಣು ಮಕ್ಕಳು ಬರಿ ಮನೆ ಕೆಲಸಕ್ಕೆ ಮಾತ್ರ ಸೀಮಿತವಲ್ಲ ಹೊರಗೆ ಹೊರಗೆ ಬರಲು ಅವಕಾಶ ಕೊಡಬೇಕು. ಹೊರಗಿನ ಜಗತ್ತು ನೋಡಬೇಕು ವ್ಯವಹಾರಜ್ಞಾನ ಕರಿಯಬೇಕು ಆಗಲೇ ಅವಳಲ್ಲಿರುವ ಒಂದು ಶಕ್ತಿ ಪ್ರತಿಭೆ ಹೊರಬರಲು ಸಾಧ್ಯ. ಇದರ ನ್ನಾಗಿ ಒಂದೊಂದೇ ಅವಕಾಶಗಳು ದೊರಕಲು ಪ್ರಾರಂಭವಾಗುತ್ತದೆ.ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎನ್ನುವ ಗಾದೆಯಂತೆ ಹೆಣ್ಣು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ತೋರಿಸಿಕೊಡುತ್ತಾಳೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಬಲವಾಗಿ ಕಾರ್ಯನಿರ್ವಹಿಸುವಳು. ಮೊದಲು ಗೃಹಿಣಿಯಾಗಿ. ಶಿಕ್ಷಕಿಯಾಗಿ. ವೈದ್ಯರಾಗಿ. ಪೊಲೀಸ್ ಇನ್ಸ್ಪೆಕ್ಟರ್ ಆಗಿ. ಗಗನ ಸಖಿಯಾಗಿ ಚಿತ್ರನಟಿಯಾಗಿ ಸಂಗೀತಗಾರ್ತಿ ಯಾಗಿ. ಕವಿಯಿತ್ರಿ ಯಾಗಿ ಇನ್ನೂ ಅನೇಕ ರೀತಿಯಲ್ಲಿ ಕಾರ್ಯ ನಿರ್ವಹಿಸುವಳು. ಹೀಗೇ ಯಾವ ಕ್ಷೆತ್ರದ ಲ್ಲಿಯಾದರೂ ಮುಂದೆ ಹೋಗಲು ಅವಕಾಶ ಕೊಡಬೇಕು. ಸಮಾಜದ ಲ್ಲಿಮುಂದೆ ಹೋಗಲು ಅವಕಾಶ ನೀಡಬೇಕು.ಬರೀ ನಾಲ್ಕು ಗೋಡೆಯ ಮದ್ಯ ಇದ್ದು ಏನೂ ಮಾಡಲು ಸಾಧ್ಯವಿಲ್ಕ ಅದಕ್ಕಾಗಿ ಹೆಣ್ಣು ಮುಂದೆ ಬರಬೇಕಾದರೆ ಅವಳಿಗೆ ಗೌರವ ಕೊಡಿ. ಅವಕಾಶ ಕೊಡಿ. ಸಮಾಜದಲ್ಲಿ ಉನ್ನತ ಸ್ಥಾನ ನೀಡಿ. ಅವಳು ಮಾಡುವ ಕೆಲಸಕ್ಕೆ ಪ್ರೋತ್ಸಾಹಿಸಿ. ಚುಚ್ಚು ಮಾತಿನಿಂದ ಕೊಲ್ಲಬೇಡಿ. ಹಿಂಸೆ ಕೊಡಬೇಡಿ. ಗಂಡಿ ಗೆಷ್ಟು ಎತ್ತರದಲ್ಲಿ ಬೆಳೆಯಲು ಅವಕಾಶ ಕೊಡುತ್ತೇರೋ ಅಷ್ಟೇ ಹೆಣ್ಣಿಗೂ ಕೊಡಬೇಕು. ಆಗಲೇ ಅವಳು ಸಮಾಜದಲ್ಲಿ ಏನನ್ನಾದರೂ ಸಾಧಿಸಿ ತೋರಿಸುವಳು. ಹೆಣ್ಣು ಅಬಲೆ ಅಲ್ಲಾ ಸಬಲೆ .
✍️ ಸವಿತಾ ಆರ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ