ದಿನಾಂಕ : ೧೨/೦೭/೨೦೨೧
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತುಮಕೂರು ಜಿಲ್ಲೆಯ ವತಿಯಿಂದ ದಿನಾಂಕ ೧೧/೦೭/೨೦೨೧ ರಂದು ಆಯೋಜಿಸಲಾಗಿದ್ದ ರೈತರ ಕುರಿತ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ರಾಜ್ಯಾದಾದ್ಯಂತ ಸುಮಾರು ಅರವತ್ತರಿಂದ ಅರವತ್ತೈದಕ್ಕೂ ಹೆಚ್ಚು ಕವಿಮನಗಳು ಭಾಗವಹಿಸಿದ್ದು,
ದಿನಾಂಕ ೧೨/೦೭/೨೦೨೧ ರಂದು ಸಂಜೆ ೦೭:೦೦ ಘಂಟೆಗೆ ವಾಟ್ಸಪ್ ನಲ್ಲಿಯೇ ವಿನೂತನ ಕಾರ್ಯಕ್ರಮದ ಮೂಲಕ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗಿರಿಜಾ ಮಾಲಿ ಪಾಟೀಲ ರಾಜ್ಯ ಅಧ್ಯಕ್ಷರು, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ. ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿ ಗಳಾಗಿ ಶ್ರೀ ಕರಿಯಣ್ಣ ತುಮಕೂರು ವಿ ವಿ ಕಲಾ ಕಾಲೇಜಿನ ಕನ್ನಡ ಅದ್ಯಾಪಕರು ಭಾಗವಹಿಸಿದ್ದರು. ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಹನುಮಯ್ಯ ಎಲ್, ರಾಜ್ಯ ಸಂಚಾಲಕರಾದ ಶ್ರೀ ವರುಣ್ ರಾಜ್ ಜೀ ಜಿಲ್ಲಾಧ್ಯಕ್ಷರಾದ ಶ್ರೀ ಅಂಜನ್ ಕುಮಾರ್. ಪಿ ಆರ್. ಉಪಾಧ್ಯಕ್ಷರಾದ ಜಯಂತ್ ಜೆ. ಎನ್ , ಮಹಿಳಾ ಅಧ್ಯಕ್ಷರಾದ ಹೇಮಲತಾ. ಜಿಲ್ಲಾ ಕಾರ್ಯದರ್ಶಿಗಳಾದಂತಹ ಕಿರಣ್ ಕುಮಾರ್ ವಿ, ಸಹಕಾರ್ಯದರ್ಶಿ ಜಯರಾಮು ಎಂ, ಜಂಟಿ ಕಾರ್ಯದರ್ಶಿ ಹರಿಕೃಷ್ಣ ಎಸ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ಮತ್ತು ಎಲ್ಲಾ ಸಂಚಾಲಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಭುವನ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಗಾಯಕಿ ಹಾಗೂ ಕವಯಿತ್ರಿ ಪ್ರೇಮಾ ರವರ ಶಿವನ ಸ್ಮರಣೆ ಪ್ರಾರ್ಥನೆಯಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ರಾಜ್ಯ ಸಂಚಾಲಕರಾದ ಶ್ರೀ ವರುಣ್ ರಾಜ್ ಜಿ ಸಾಹಿತ್ಯ ವೇದಿಕೆ ಮತ್ತು ರೈತರ ಕುರಿತು ಮಾತನಾಡುತ್ತಾ ಕುವೆಂಪುರವರ ರೈತನ ದೃಷ್ಠಿ ಕವಿತೆಯನ್ನು ಉಲ್ಲೇಖಿಸಿ ಪ್ರಭುತ್ವದ ಧೂರಣೆಗಳ ಕಾರಣದಿಂದ ರೈತರ ಕಷ್ಟಗಳು ಹಾಗೆ ಮುಂದುವರೆದಿದ್ದು ಅದನ್ನು ನಿವಾರಿಸುವ ಕಾರ್ಯವನ್ನು ಸಾಹಿತ್ಯದ ಮೂಲಕ ಸ್ವರ್ಧಾರ್ಥಿಗಳು ಮಾಡಿರುವರೆಂದು ಈ ಸ್ಪರ್ಧೆಯ ಎಲ್ಲಾ ಸ್ಪರ್ಧಾರ್ಥಿಗಳು ಒಂದು ಲೆಕ್ಕದಲ್ಲಿ ವಿಜೇತರೇ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾದ ಪ್ರೊ. ಕರಿಯಣ್ಣ ರವರು ಸರ್ಕಾರದ ಧೋರಣೆ, ವರ್ತಕರು, ಮಾರುಕಟ್ಟೆ, ದಲ್ಲಾಳಿಗಳ ಒಡೆತಕ್ಕೆ ಸಿಕ್ಕಿರುವ ರೈತ ಇವುಗಳಿಂದ ಬಿಡುಗಡೆ ಹೊಂದಲು ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬರಬೇಕೆಂದು ಅಭಿಪ್ರಾಯ ಪಟ್ಟರು.
ನಂತರ ಕೆಲವು ಸ್ಪರ್ಧಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹೇಳುತ್ತಾ ರೈತರ ಕಷ್ಟ ನೋವು ಇವಲ್ಲದೆ ಅತೀವೃಷ್ಠಿ ಅನಾವೃಷ್ಟಿಯಿಂದ ಕಂಗಾಲಾದ ರೈತರಿಗೆ ಸಹಾಯ ಹಸ್ತ ನಿಡಬೇಕೆಂಬ ಆಶಯಗಳನ್ನು ವ್ಯಕ್ತಮಾಡಿದರು.
ತೀರ್ಪುಗಾರರಾದ ರಾಜು ಸೂಲೇನಹಳ್ಳಿರವರು ಮಾತನಾಡುತ್ತಾ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಅನುಭವಿಸುತ್ತಿರುವ ಕಷ್ಟ ಮತ್ತು ರೈತರ ಪ್ರಾಮುಖ್ಯತೆ ಬಗ್ಗೆ ವಿವರಿಸಿ ಮಾತನಾಡಿದರು.
ನಂತರ ಸ್ಪರ್ದೆ ಮತ್ತು ಕಾರ್ಯಕ್ರಮದಂತೆ ಫಲಿತಾಂಶ ಪ್ರಕಟಿಸಲಾಯ್ತು.
ಪ್ರಥಮ ಸ್ಥಾನ ಪಡೆದ ಧ್ಯಾಮರಾಜ್ ವಾಯ್ಸ್ ಸಿಂಧೋಗಿ , ದ್ವಿತೀಯ ಮಹೇಶ್ ಎಸ್ ಎಂ , ತೃತೀಯ ಶಂಕರಗೌಡ ಬಸವೇಗೌಡ ಕುರಹಟಿ ಮತ್ತು ಸಮಾಧಾನಕರ:
೧. ಪುರುಷೋತ್ತಮ ಪೆಮ್ನಳ್ಳಿ
೨. ಕಾವ್ಯ ಡಿ ಸಿ
೩. ರತ್ನಾ ಎಂ ಅಂಗಡಿ ಹುಬ್ಬಳ್ಳಿ
೪. ಶ್ರೀ ಸರೋಜಿನಿ ಝಳಕಿ ವಿಜಯಪುರ
ಇವರುಗಳಿಗೆ ಇ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.
ಪ್ರಥಮ ಸ್ಥಾನ ಪಡೆದ ರೈತರ ಕುರಿತ ಕವನ:
ರಾಜ್ಯ ಮಟ್ಟದ ಕವನ ಸ್ಪರ್ಧೆ ತುಮಕೂರು
🌾ರೈತ🌾
*******************
ಬಲ್ಲನು ಮಣ್ಣಿನ ಗುಣ
ನೇಗಿಲು ಹಿಡಿದ ಮುಗ್ಧ ಜಾಣ
ಕಾಳಿನ ರಾಶಿಯ ಶೃಂಗಾರದ ಕಣ
ತನು ಮನ ಸೆಳೆಯುವ ಸುಂದರ ತಾಣ//
ರಂಟಿ ಕುಂಟಿ ಇಲ್ಲದ ಓಣಿ
ಮಾಡಿತು ಗುಬ್ಬಿ ಕಾಗೆ ದೂರ
ಕೈಯಲಿ ಹಿಡಿದ ಚಿಣಿ ಫಣಿ
ರೈತನು ಮಗನಿಗೆ ಕಲಿಸಿದ ಸಂಸ್ಕಾರ//
ಒಳ್ಳೆಯ ಫಲ ನೀಡಿತು ಧರಣಿ
ಅದಕೆ ಕಾರಣ ಪಶುಗಳ ಸಗಣಿ
ಬೆಳೆದ ಬೆಳೆಗೆ ಬೆಲೆ ಕೊಡದ ಧಣಿ
ಸೇರೆಂದ ರೈತನ ಮೂರು ಆರು ಕುಣಿ//
ಪಡಸಾಲಿಗೆ ಕಳೆ ಬಿಸುಕಲ್ಲೂ ಒಳ್ಳು ಒಣಕಿ
ಅವು ತರದೆ ಇದ್ದವು ಊರಿಗೆ ಗಿರಣಿ
ಇದ್ದವು ಮನಿಯೋಳಗೆ ದನಗಳ ಕುಣಿಕಿ
ಇಂದು ನಮ್ಮಿಂದ ಆದವು ಅವೆಲ್ಲವು ಕಾಣಿ//
ಬಣಗುಡುತ್ತೀವೆ ಮನೆಯ ಕೊಣಿ
ಕಾಳುಗಳಿಲ್ಲದೆ ಸತ್ತವು ಇಲಿ ಹೆಗ್ಗಣ
ದಣಿದ ಬೆವರು ತುಂಬಿದ ಹಣಿ
ನೆನಪ ಮಾಡಿತು ಅಪ್ಪ ರೈತನ ಋಣ//
✍️✍️ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!!ಭೈರಾಪೂರ. ಪೊ!ಬೋಚನಹಳ್ಳಿ
ತಾ!ಜಿ!!ಕೊಪ್ಪಳ✍️✍️
ನಂತರ ಜಿಲ್ಲಾ ಗೌರವ ಅಧ್ಯಕ್ಷರಾದ
ಶ್ರೀ ಹನುಮಯ್ಯ ಎಲ್ ರವರು ಮಾತನಾಡುತ್ತಾ ಅನ್ನದಾತರಿಗೆ ಬೆಂಬಲ ಗೌರವ ನೀಡುವ ಈ ಸ್ಪರ್ಧೆಯನ್ನು ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯನ್ನು ಹಾಗೂ ಅದರ ಚಟುವಟಿಕೆಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅದ್ಯಕ್ಷತೆ ವಹಿಸಿದ್ದ ಶ್ರೀಮತಿ ಗಿರಿಜಾ ಮಾಲಿ ಪಾಟಿಲರು ಮಾತನಾಡುತ್ತಾ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾ ಮಟ್ಟದಲಲ್ಲದೆ ತಾಲೂಕು, ಹೋಬಳಿ ಮಟ್ಟದಲ್ಲಿಯೂ ಸಹಾ ಕಾರ್ಯ ನಿರ್ವಹಿಸಲಿ ಸ್ಪರ್ಧೆಗಳ ನೆಡೆಸುತ್ತಾ ಯುವ ಬರಹಗಾರರ, ಎಲೆಮರೆ ಕಾಯಿಯಂತೆ ಇರುವ ಹೊಸ ಪ್ರತಿಭೆಗಳನ್ನ ಮುನ್ನೆಲೆಗೆ ತರಲಿ. ಸಾಹಿತ್ಯ ಮಾತ್ರವಲ್ಲದೇ ಪರಿಸರ ಸಂರಕ್ಷಣೆ ಹಾಗೂ ಸಮಾಜ ಸೇವಾ ಕಾರ್ಯಗಳು ಸಹಾ ನಿಮ್ಮಿಂದ ನಡೆಯಲಿ ಎಂದು ಹಾರೈಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಹೇಳುವಲ್ಲಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.
💐👏👏👏👏🥳🔥
ಪ್ರತ್ಯುತ್ತರಅಳಿಸಿ